‘ಕಾಂತಾರ’ (Kantara) ಸಿನಿಮಾದಿಂದಾಗಿ ಪ್ಯಾನ್ ಇಂಡಿಯಾ (Pan India) ಸ್ಟಾರ್ ಆಗಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty). ಈಗ ಅವರು ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ತಮ್ಮ ನಿರ್ದೇಶನದ ‘ಕಾಂತಾರ’ ಸಿನಿಮಾದ ಮೇಕಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ರಿಷನ್ ಶೆಟ್ಟಿ. ಇದರ ನಡುವೆ ಈಗಾಗಲೇ ತೆಲುಗಿನಲ್ಲಿ ‘ಜೈ ಹನುಮಾನ್’ ಹಾಗೂ ಹಿಂದಿಯಲ್ಲಿ ‘ಛತ್ರಪತಿ ಶಿವಾಜಿ’ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ, ಪ್ರಭಾಸ್ ಇಂದಾಗಿ ರಿಷಬ್ ಶೆಟ್ಟಿಯ ಸಿನಿಮಾ ಮುಂದೂಡಲ್ಪಟ್ಟಿದೆಯಂತೆ.
‘ಹನುಮ್ಯಾನ್’ ಸಿನಿಮಾದಿಂದ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ನಿರ್ದೇಶಕರಾಗಿದ್ದಾರೆ. ಹಲವು ಸ್ಟಾರ್ ನಟರು ಪ್ರಶಾಂತ್ ವರ್ಮಾ ಜೊತೆ ಕೆಲಸ ಮಾಡಲು ಬಯಸಿದ್ದಾರೆ. ಬಾಲಿವುಡ್ ನಟ ರಣ್ವೀರ್ ಸಿಂಗ್, ಪ್ರಶಾಂತ್ ವರ್ಮಾ ಸಿನಿಮಾದಲ್ಲಿ ನಟಿಸುವವರಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಪ್ರಭಾಸ್ಗೆ ಹೊಸ ಕತೆ ಹೇಳಿರುವ ಪ್ರಶಾಂತ್ ವರ್ಮಾ, ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
ಇತ್ತ ರಿಷಬ್ ಶೆಟ್ಟಿ, ‘ಛತ್ರಪತಿ ಶಿವಾಜಿ’ ಮತ್ತು ‘ಕಾಂತಾರ’ ಸಿನಿಮಾದಲ್ಲಿ ತೊಡಗಿಕೊಂಡಿದ್ದು, ಈ ಎರಡೂ ಸಿನಿಮಾಗಳಿಗೆ ಹೆಚ್ಚು ಸಮಯ ಬೇಕಾಗಿರುವ ಕಾರಣದಿಂದಾಗಿ ಪ್ರಶಾಂತ್ ವರ್ಮಾರ ‘ಜೈ ಹನುಮಾನ್’ ಸಿನಿಮಾ ತಡವಾಗಲಿದೆ. ಮಾತ್ರವಲ್ಲದೆ ಪ್ರಭಾಸ್ ಸಹ, ತಮ್ಮ ಸಿನಿಮಾ ಅನ್ನು ಮೊದಲು ಮುಗಿಸುವಂತೆ ಪ್ರಶಾಂತ್ ವರ್ಮಾ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ಗೆ ಹೇಳಿರುವ ಕತೆಯ ಚಿತ್ರಕತೆ ಈಗಾಗಲೇ ರೆಡಿಯಾಗಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರವೇ ಶುರು ಮಾಡಲು ವರ್ಮಾ ಸಹ ಅಣಿಯಾಗಿದ್ದಾರೆ.
ಇದನ್ನೂ ಓದಿ:ಪತ್ರಿಕೆಯಲ್ಲೂ ಕೆಲಸ ಮಾಡಿದ್ದ ರಿಷಬ್ ಶೆಟ್ಟಿ; ಲಾಭ ತಂದುಕೊಟ್ಟ ಉದ್ಯಮ ಯಾವುದು?
ಒಂದೊಮ್ಮೆ ಪ್ರಶಾಂತ್ ವರ್ಮಾ, ಪ್ರಭಾಸ್ ಜೊತೆಗಿನ ಸಿನಿಮಾ ಮೊದಲು ಪ್ರಾರಂಭಿಸಿದರೆ ರಿಷಬ್ ಶೆಟ್ಟಿ ಜೊತೆಗಿನ ‘ಜೈ ಹನುಮಾನ್’ ಸಿನಿಮಾ ಮುಂದೂಡಲ್ಪಡುವುದು ಪಕ್ಕಾ. ರಿಷಬ್ ಶೆಟ್ಟಿ ನಟನೆಯ ‘ಕಾಂತಾರ, ಚಾಪ್ಟರ್ 1’ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಅದಾದ ಬಳಿಕ ಅವರು ‘ಛತ್ರಪತಿ ಶಿವಾಜಿ’ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದು, ಆ ಸಿನಿಮಾ 2027ಕ್ಕೆ ತೆರೆಗೆ ಬರಲಿದೆ. ಅದರ ಬಳಿಕವಷ್ಟೆ ‘ಜೈ ಹನುಮಾನ್’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ಇನ್ನು ಪ್ರಭಾಸ್ ಸಹ ಪ್ರಸ್ತುತ ಬಹಳ ಬ್ಯುಸಿಯಾಗಿಯೇ ಇದ್ದಾರೆ. ಪ್ರಭಾಸ್ ಇತ್ತೀಚೆಗಷ್ಟೆ ‘ರಾಜಾ ಸಾಬ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈಗ ರಘು ಹನುಪುಡಿ ನಿರ್ದೇಶನದ ಒಂದು ಸಿನಿಮಾ ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡು ಸಿನಿಮಾಗಳ ಬಳಿಕ ಪ್ರಭಾಸ್ಗೆ ಸಣ್ಣ ಬ್ರೇಕ್ ಇದ್ದು, ಅದರಲ್ಲಿ ಪ್ರಶಾಂತ್ ವರ್ಮಾ ಜೊತೆಗೆ ಸಿನಿಮಾ ಮುಗಿಸುವ ಆಲೋಚನೆಯಲ್ಲಿದ್ದಾರೆ ಪ್ರಭಾಸ್. ಇದರ ಹೊರತಾಗಿ ‘ಕಲ್ಕಿ 2’, ‘ಸಲಾರ್ 2’ ಮತ್ತು ಹೊಂಬಾಳೆ ನಿರ್ಮಾಣದ ಮತ್ತೊಂದು ಸಿನಿಮಾದಲ್ಲಿಯೂ ಪ್ರಭಾಸ್ ನಟಿಸಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Wed, 5 March 25