
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ತನ್ನ ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸೆಪ್ಟೆಂಬರ್ 22ರಂದು ಈ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಸೆನ್ಸಾರ್ ಸರ್ಟಿಫಿಕೇಟ್ ಮೇಲೆ ಚಿತ್ರದ ಹಲವು ವಿವರಗಳು ಒಳಗೊಂಡಿರುತ್ತವೆ. ಅದೇ ರೀತಿ, ಈ ಚಿತ್ರದ ಅವಧಿಯ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ‘ಕಾಂತಾರ’ ಚಿತ್ರಕ್ಕೆ ಹೋಲಿಕೆ ಮಾಡಿಸಿದರೆ ಈ ಸಿನಿಮಾದ ಅವಧಿ ಸ್ವಲ್ಪ ದೀರ್ಘವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಕಾಂತಾರ’ ಸಿನಿಮಾದ ಅವಧಿ 2 ಗಂಟೆ 30 ನಿಮಿಷ ಇತ್ತು. ಅಡ್ವೆಂಚರ್, ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ರಿಷಬ್ ಅವರದ್ದೇ ನಿರ್ದೇಶನ ಸಿನಿಮಾಗೆ ಇತ್ತು. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದರು. ಎಲ್ಲಿಯೂ ಬೇಸರ ಬರದಂತೆ ಸಿನಿಮಾ ಕಟ್ಟಿಕೊಟ್ಟಿದ್ದರು.
ಈಗ ರಿಷಬ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಚಿತ್ರ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಇದಾಗಿದೆ. ಈ ಸಿನಿಮಾದ ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಸಿನಿಮಾದ ರನ್ ಟೈಮ್ 168.53 ನಿಮಿಷ ಇದೆ. ಅಂದರೆ ಸಿನಿಮಾ 2 ಗಂಟೆ 48 ನಿಮಿಷ ಇದೆ. ಕನ್ನಡದಲ್ಲಿ ಬರುವ ಬಹುತೇಕ ಚಿತ್ರಗಳ ಅವಧಿ 2-2.30 ಗಂಟೆ ಇರುತ್ತದೆ. ಇವುಗಳಿಗೆ ಹೋಲಿಕೆ ಮಾಡಿದರೆ ಈ ಚಿತ್ರದ ಅವಧಿ ಸ್ವಲ್ಪ ದೀರ್ಘವೇ ಆಯಿತು.
#KantaraALegendChapter1 is certified “UA 16+” by CBFC with a runtime of 2 hours and 48 minutes. pic.twitter.com/8AKFmg9kXT
— Filmynews Network (@filmynewsnetwrk) September 22, 2025
ಇನ್ನು, ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ‘ಯುಎ 16+’ ಸರ್ಟಿಫಿಕೇಟ್ ದೊರೆತಿದೆ. ಅಂದರೆ, 16ನೇ ವಯಸ್ಸಿಗಿಂತ ಕೆಳಗಿನವರು ಸಿನಿಮಾ ನೋಡುತ್ತಾರೆ ಎಂದಾದರೆ ಅವರ ಜೊತೆ ಪಾಲಕರು ಇರಬೇಕು. 16 ವರ್ಷಗಳ ಮೇಲಿನವರು ಪಾಲಕರು ಇಲ್ಲದೆಯೂ ಸಿನಿಮಾ ವೀಕ್ಷಿಸಬಹುದು.
ಇದನ್ನೂ ಓದಿ: ಮಾಡಿದ ಆ ಒಂದು ತಪ್ಪಿಗೆ ವೇದಿಕೆ ಮೇಲೆ ಅನುಶ್ರೀಗೆ ಕ್ಷಮೆ ಕೇಳಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದರಲ್ಲಿ ಹೊಸತನ ತುಂಬಲು ಪ್ರಯತ್ನಿಸುತ್ತಾರೆ. ಹೇಳಿದ ಕಥೆಯನ್ನೇ ಮತ್ತೆ ಹೇಳಲು ಅವರಿಗೆ ಇಷ್ಟ ಇಲ್ಲ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಅವರು ಏನೋ ಹೊಸದನ್ನು ಹೇಳಲು ಪ್ರಯತ್ನಿಸಿದ್ದಾರೆ ಎಂಬುದು ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತದೆ. ಹೀಗಾಗಿ, ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.