ರಾಕೇಶ್ ಜೊತೆ ಹಲವು ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದ ರಿಷಬ್ ಶೆಟ್ಟಿ; ವಿಧಿಯಾಟವೇ ಬೇರೆ ಇತ್ತು

'ಕಾಂತಾರ: ಚಾಪ್ಟರ್ 1' ನಟ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನವನ್ನು ರಿಷಬ್ ಶೆಟ್ಟಿ ಜೀ ಕನ್ನಡ ಅವಾರ್ಡ್ಸ್‌ನಲ್ಲಿ ಸ್ಮರಿಸಿದ್ದಾರೆ. ಹೃದಯಾಘಾತದಿಂದ ನಿಧನರಾದ ರಾಕೇಶ್‌ರನ್ನು 'ಅದ್ಭುತ ಕಲಾವಿದ' ಎಂದು ಬಣ್ಣಿಸಿದ ರಿಷಬ್, ಅವರೊಂದಿಗೆ ಭವಿಷ್ಯದಲ್ಲಿ ಕೆಲಸ ಮಾಡುವ ಯೋಜನೆಯಿತ್ತು ಎಂದರು. ಒಳ್ಳೆಯ ಮನುಷ್ಯನಾಗಿದ್ದ ರಾಕೇಶ್‌ರನ್ನು ಕಳೆದುಕೊಂಡ ನೋವನ್ನು ರಿಷಬ್ ಹಂಚಿಕೊಂಡಿದ್ದಾರೆ.

ರಾಕೇಶ್ ಜೊತೆ ಹಲವು ಪ್ರಾಜೆಕ್ಟ್ ಪ್ಲ್ಯಾನ್ ಮಾಡಿದ್ದ ರಿಷಬ್ ಶೆಟ್ಟಿ; ವಿಧಿಯಾಟವೇ ಬೇರೆ ಇತ್ತು
Rishab Rakesh
Updated By: ರಾಜೇಶ್ ದುಗ್ಗುಮನೆ

Updated on: Oct 21, 2025 | 8:11 AM

ರಾಕೇಶ್ ಪೂಜಾರಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ (Kantara Chapter 1) ಕೆಲಸಗಳಲ್ಲಿ ಬ್ಯುಸಿ ಇದ್ದಾಗಲೇ ನಮ್ಮನ್ನು ಅಗಲಿದರು. ಅವರು ಸಿನಿಮಾ ಶೂಟ್ ಮುಗಿಸಿ, ಮದುವೆ ಒಂದಕ್ಕೆ ತೆರಳಿದಾಗ ಹೃದಯಾಘಾತದಿಂದ ನಿಧನ ಹೊಂದಿದರು. ಸಿನಿಮಾದ ಟ್ರೇಲರ್, ಸಿನಿಮಾ ನೋಡುವ ಮೊದಲೇ ಅವರು ಇಹಲೋಕ ತ್ಯಜಿಸಿದರು. ಆದರೆ, ಅವರಿಲ್ಲ ಎಂಬ ನೋವು ಯಾವಾಗಲೂ ಇರುವಂಥದ್ದು. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾತನಾಡಿದ್ದಾರೆ.

ರಾಕೇಶ್ ನಿಧನ ಹೊಂದಿದಾಗ ಅವರನ್ನು ನೋಡಲು ರಿಷಬ್ ತೆರಳಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ‘ನಗು ಮುಖದಲ್ಲಿ ರಾಕೇಶ್ ಅವರನ್ನು ನೋಡಿದ್ದೇನೆ. ಆ ನಗುಮುಖ ಹಾಗೆಯೇ ಇರಲಿ ಎಂಬ ಕಾರಣಕ್ಕೆ ನಾನು ಅವನನ್ನು ನೋಡಿಲ್ಲ’ ಎಂದು ರಿಷಬ್ ಈ ಮೊದಲು ಹೇಳಿದ್ದರು. ಈಗ ಅವರು ರಾಕೇಶ್​ನ ಮತ್ತೆ ನೆನಪಿಸಿಕೊಂಡಿದ್ದಾರೆ.  ಜೀ ಕನ್ನಡದ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್ ಅಲ್ಲಿ ರಿಷಬ್ ಮುಖ್ಯ ಅತಿಥಿ ಆಗಿದ್ದರು. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಿದರು. ಮುಂದಿನ ದಿನಗಳಲ್ಲಿ ರಾಕೇಶ್​ನ ಇಟ್ಟುಕೊಂಡು, ಹಲವು ಸಿನಿಮಾ ಮಾಡುವ ಪ್ಲ್ಯಾನ್ ಅವರಲ್ಲಿ ಇತ್ತು.

ಇದನ್ನೂ ಓದಿ
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪರಿಣಿತಿ ಚೋಪ್ರಾ
ಶಾಲಲ್ಲಿ ಚಪ್ಪಲಿ ಸುತ್ತಿ ಹೊಡೆದ ಗಿಲ್ಲಿ ನಟ; ಅಶ್ವಿನಿ-ಜಾನ್ವಿ ಗಪ್ ಚುಪ್
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

‘ಮನಸ್ಸಿಗೆ ತುಂಬಾ ನೋವಾಗುವಂತಹ ಘಟನೆ ನಡೆಯಿತು. ನಿಮ್ಮದೇ (ಜೀ ಕನ್ನಡ) ಕಲಾವಿದ ರಾಕೇಶ್ ಪೂಜಾರಿ ನಿಧನ ಹೊಂದಿದರು. ಅವನು ಇದನ್ನು ನೋಡಬೇಕಿತ್ತು ಅನಿಸ್ತಿದೆ. ಆದರೆ, ಎಲ್ಲೂ ಕುಳಿತು ಇದನ್ನು ಅವನು ನೋಡ್ತಾ ಇದಾನೆ. ಅದ್ಭುತ ಕಲಾವಿದ’ ಎಂದು ಭಾವುಕರಾಗಿ ಮಾತನಾಡಿದ ರಿಷಬ್ ಶೆಟ್ಟಿ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೇಲರ್​ನಲ್ಲಿ ರಾಕೇಶ್ ಪೂಜಾರಿಯನ್ನು ಗಮನಿಸಿದ್ರಾ?

ನಿರ್ದೇಶಕರಾದಾಗ ಒಳ್ಳೆಯ ಕಲಾವಿದರು ಸಿಕ್ಕಿದಾಗ ಖುಷಿ ಆಗುತ್ತದೆ. ಮತ್ತೆ ಹೊಸ ಹೊಸ ಪಾತ್ರಗಳನ್ನು ಅವರಿಗೆ ಬರೆಯಬಹುದು. ನನ್ನ ಸಿನಿಮಾಗಳಲ್ಲಿ ರಿಪೀಟ್ ಕಲಾವಿದರೇ ಇರೋದು. ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಎಲ್ಲರೂ ಆಸ್ತಾನ ಕಲಾವಿದರು. ರಾಕೇಶ್ ಅವರನ್ನು ಕೂಡ ನನ್ನ ಜೊತೆ ಸೇರಿಸಿಕೊಂಡು ಬಿಟ್ಟಿದ್ದೆ. ಒಂದು ಮನುಷ್ಯ ತುಂಬಾ ಒಳ್ಳೆಯವನಾಗಬಾರದು. ರಾಕೇಶ್ ತುಂಬಾ ಒಳ್ಳೆಯವನು ಎಂದು ರಿಷಬ್ ಬೇಸರ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.