- Kannada News Photo gallery Late Rakesh Poojary Who Acted In Kantara Chapter 1 his face Shows in Kantara: Chapter 1
‘ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೇಲರ್ನಲ್ಲಿ ರಾಕೇಶ್ ಪೂಜಾರಿಯನ್ನು ಗಮನಿಸಿದ್ರಾ?
Rakesh Poojary: ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಸದ್ಯ ಸದ್ದು ಮಾಡುತ್ತಿದೆ. ಟ್ರೇಲರ್ ರಿಲೀಸ್ ಆದ ಕೆಲವೇ ಹೊತ್ತಿನಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಈ ಸಿನಿಮಾದ ಟ್ರೇಲರ್ನಲ್ಲಿ ರಾಕೇಶ್ ಪೂಜಾರಿ ಅವರನ್ನು ಕೂಡ ತೋರಿಸಲಾಗಿದೆ. ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ .
Updated on:Sep 22, 2025 | 2:51 PM

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ನಲ್ಲಿ ಹಲವು ವಿಚಾರಗಳನ್ನು ಹೇಳುವ ಪ್ರಯತ್ನವನ್ನು ರಿಷಬ್ ಶೆಟ್ಟಿ ಅವರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಲವು ಪಾತ್ರಗಳು ಬಂದು ಹೋಗಿವೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರಾಕೇಶ್ ಪೂಜಾರಿ ನಟಿಸಿದ್ದಾರೆ. ಅವರು ಶೂಟ್ನ ಕೆಲಸಗಳು ಬಾಕಿ ಇರುವಾಗಲೇ ನಿಧನ ಹೊಂದಿದ್ದರು. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಯಿತು. ಸಿನಿಮಾದ ಟ್ರೇಲರ್ನಲ್ಲಿ ಅವರ ಪಾತ್ರವನ್ನು ತೋರಿಸಲಾಗಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಕೇಶ್ ಪೂಜಾರಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಸಿನಿಮಾ ತಂಡದವರೇ ಮಾಹಿತಿ ನೀಡಿದ್ದರು. ಅವರ ಪಾತ್ರ ಯಾವ ರೀತಿಯಲ್ಲಿ ಇದೆ ಎಂಬುದರ ಝಲಕ್ ಟ್ರೇಲರ್ನಲ್ಲಿ ತೋರಿಸಲಾಗಿದೆ.

‘ಕಾಂತಾರ: ಚಾಪ್ಟರ್ 1’ ಶೂಟ್ ಪೂರ್ಣಗೊಳಿಸಿದ ಬಳಿಕ ಮದುವೆ ಒಂದಕ್ಕೆ ರಾಕೇಶ್ ತೆರಳಿದ್ದರು. ಈ ವೇಳೆ ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿ ನಿಧನ ಹೊಂದಿದರು.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರುಕ್ಮಿಣಿ ವಸಂತ್ ಹಾಗೂ ರಿಷಬ್ ಶೆಟ್ಟಿ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರಕ್ಕೆ ರಿಷಬ್ ನಿರ್ದೇಶನ ಇದೆ. ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದೆ.
Published On - 2:50 pm, Mon, 22 September 25




