ಆಸ್ಕರ್​ ಕೃಷ್ಣ ‘ಕೃತ್ಯ’ಕ್ಕೆ ಸಾಥ್​ ನೀಡಿದ ನಟ ಶ್ರೀಮುರಳಿ; ಪೋಸ್ಟರ್​ ಬಿಡುಗಡೆ ಮಾಡಿದ ‘ರೋರಿಂಗ್​ ಸ್ಟಾರ್​’

‘ಕೃತ್ಯ’ ಸಿನಿಮಾದ ಪೋಸ್ಟರ್​ನಲ್ಲಿ ಗನ್​ ಕಾಣಿಸಿಕೊಂಡಿದೆ. ‘ಜೀವನದ ಕೆಲವು ಘಟನೆಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ’ ಎಂಬ ವಾಕ್ಯ ಕೂಡ ಈ ಪೋಸ್ಟರ್​ನಲ್ಲಿ ಹೈಲೈಟ್​ ಆಗಿದೆ.

ಆಸ್ಕರ್​ ಕೃಷ್ಣ ‘ಕೃತ್ಯ’ಕ್ಕೆ ಸಾಥ್​ ನೀಡಿದ ನಟ ಶ್ರೀಮುರಳಿ; ಪೋಸ್ಟರ್​ ಬಿಡುಗಡೆ ಮಾಡಿದ ‘ರೋರಿಂಗ್​ ಸ್ಟಾರ್​’
‘ಕೃತ್ಯ’ ಪೋಸ್ಟರ್​ ಬಿಡುಗಡೆ ಮಾಡಿದ ನಟ ಶ್ರೀಮುರಳಿ
Follow us
TV9 Web
| Updated By: ಮದನ್​ ಕುಮಾರ್​

Updated on: Mar 21, 2022 | 7:35 AM

ನಿರ್ದೇಶನ ಮತ್ತು ನಟನೆ ಎರಡರಲ್ಲೂ ತೊಡಗಿಕೊಂಡವರು ವಿರಳ. ಆ ಸಾಲಿನಲ್ಲಿ ‘ಆಸ್ಕರ್​’ ಸಿನಿಮಾ ಖ್ಯಾತಿಯ ಕೃಷ್ಣ ಕೂಡ ಇದ್ದಾರೆ. ಗಾಂಧಿನಗರದಲ್ಲಿ ಆಸ್ಕರ್​ ಕೃಷ್ಣ (Oscar Krishna) ಎಂದೇ ಅವರು ಗುರುತಿಸಿಕೊಂಡಿದ್ದಾರೆ. ಈ ಹಿಂದೆ ‘ಮಿಸ್​ ಮಲ್ಲಿಗೆ’, ‘ಮನಸಿನ ಮರೆಯಲಿ’ ಮುಂತಾದ ಸಿನಿಮಾ ಮಾಡಿದ್ದ ಅವರು ಈಗ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಕೃತ್ಯ’ ಎಂದು ಹೆಸರು ಇಡಲಾಗಿದೆ. ಶೀರ್ಷಿಕೆ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಶೀರ್ಷಿಕೆ ವಿನ್ಯಾಸವನ್ನು ತಿಳಿಸಲು ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ. ‘ಕೃತ್ಯ’ ಸಿನಿಮಾದ (Kruthya Kannada Movie) ಪೋಸ್ಟರ್​ ಅನ್ನು ಖ್ಯಾತ ನಟ ಶ್ರೀಮುರಳಿ (Sriimurali) ಅವರು ಅನಾವರಣ ಮಾಡಿದ್ದಾರೆ. ಈ ಪೋಸ್ಟರ್​ನಲ್ಲಿ ಇರುವ ಗನ್​ ಚಿತ್ರ ಮತ್ತು ಕ್ಯಾಪ್ಷನ್​ ನೋಡಿ ಸಿನಿಪ್ರಿಯರಲ್ಲಿ ಒಂದಷ್ಟು ಕೌತುಕ ಮೂಡುವಂತಾಗಿದೆ. ಹಲವು ವರ್ಷಗಳಿಂದ ಆಸ್ಕರ್​ ಕೃಷ್ಣ ಅವರು ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಅವರಿಗೆ ಆಸಕ್ತಿ ಇದೆ. ಅಷ್ಟೇ ಅಲ್ಲ, ಈಗ ಅವರು ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ‘ಕೃತ್ಯ’ ಚಿತ್ರಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ.

‘ಕೃತ್ಯ’ ಸಿನಿಮಾದ ಪೋಸ್ಟರ್​ನಲ್ಲಿ ಗನ್​ ಕಾಣಿಸಿಕೊಂಡಿದೆ. ‘ಜೀವನದ ಕೆಲವು ಘಟನೆಗಳು ನಮ್ಮ ನಿಯಂತ್ರಣದಲ್ಲಿ ಇಲ್ಲ’ ಎಂಬ ವಾಕ್ಯ ಕೂಡ ಈ ಪೋಸ್ಟರ್​ನಲ್ಲಿ ಹೈಲೈಟ್​ ಆಗಿದೆ. ಹಾಗಾದರೆ ಇದೊಂದು ಕ್ರೈಂ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಸಿನಿಮಾ ಇರಬಹುದಾ ಎಂಬ ಕೌತುಕ ಮೂಡಿದೆ. ಸಾಮಾನ್ಯವಾಗಿ ಅಪರಾಧಗಳ ಲೋಕದ ಬಗ್ಗೆ ಮಾತಾಡುವಾಗ ‘ಕೃತ್ಯ’ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಈ ಚಿತ್ರ ಕೂಡ ಅಂಥದ್ದೇ ಸ್ಟೋರಿ ಒಳಗೊಂಡಿಬಹುದು ಎನಿಸುತ್ತಿದೆ. ಆದರೆ ಸದ್ಯಕ್ಕೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇತ್ತೀಚೆಗೆ ಆಸ್ಕರ್​ ಕೃಷ್ಣ ಅವರ ಜನ್ಮದಿನದ (ಮಾ.14) ಪ್ರಯುಕ್ತ ‘ಕೃತ್ಯ’ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ನಟ ಶ್ರೀಮುರಳಿ ಅವರು ಈ ಪೋಸ್ಟರ್​ ಅನಾವರಣಗೊಳಿಸುವ ಮೂಲಕ ಚಿತ್ರತಂಡದ ಬೆನ್ನುತಟ್ಟಿದ್ದಾರೆ. ಶ್ರೀಮುರಳಿ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವ ಇದೆ. ಸ್ಟಾರ್​ ನಟನಾಗಿ ಅವರು ಮಿಂಚುತ್ತಿದ್ದಾರೆ. ಅನೇಕ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ಇತರೆ ಸಿನಿಮಾ ತಂಡಗಳಿಗೂ ಅವರು ಪ್ರೋತ್ಸಾಹ ನೀಡುತ್ತಾರೆ. ಈಗ ಅವರು ‘ಕೃತ್ಯ’ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಈ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ಯಶಸ್ಸು ಸಿಗಲಿ ಎಂದು ಶುಭ ಕೋರಿದ್ದಾರೆ.

‘ಕೃತ್ಯ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರಾದ ಬಾ.ಮಾ. ಹರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್, ಬಾ.ಮ. ಗಿರೀಶ್, ನರಸಿಂಹರಾಜು, ಡಾ. ಸುನಿಲ್‌ ಕುಮಾರ್, ವಿಜಯ್‌ಕುಮಾರ್‌ ಸಿಂಹ, ಟಿಪ್ಪುವರ್ಧನ್ ಮುಂತಾದವರು ಹಾಜರಿದ್ದರು. ಈ ಸಿನಿಮಾಗೆ ಸದ್ಯದಲ್ಲೇ ಮುಹೂರ್ತ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  ನಾಯಕಿ ಯಾರು? ಇನ್ನುಳಿದ ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ? ತಂತ್ರಜ್ಞರು ಯಾರು ಎಂಬಿತ್ಯಾದಿ ಮಾಹಿತಿಯನ್ನು ಮಹೂರ್ತದ ದಿನವೇ ಬಿಟ್ಟುಕೊಡಲು ‘ಕೃತ್ಯ’ ತಂಡ ನಿರ್ಧರಿಸಿದೆ.

ನಟ/ನಿರ್ದೇಶಕ ಆಸ್ಕರ್‌ ಕೃಷ್ಣ ಜೊತೆ ಅನೇಕ ವರ್ಷಗಳಿಂದ ಸ್ನೇಹ ಹೊಂದಿರುವ ಗೌತಮ್‌ ರಾಮಕೃಷ್ಣ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಸಾಥ್​ ನೀಡಿದ್ದಾರೆ. ಮೂಲತಃ ಸಾಫ್ಟ್​ವೇರ್​ ಉದ್ಯೋಗಿ ಆಗಿರುವ ಅವರು ಈಗ ನಿರ್ಮಾಪಕನಾಗುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಬೇಕು ಎಂಬ ಹಂಬಲ ಅವರದ್ದು. ಈಗ ಮೊದಲ ಹಂತವಾಗಿ ‘ಕೃತ್ಯ’ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿ ಆಸ್ಕರ್​ ಕೃಷ್ಣ ಜೊತೆ ಗೌತಮ್‌ ರಾಮಕೃಷ್ಣ ಅವರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ:

ಬಿಡುಗಡೆಗೆ ಸಿದ್ಧವಾಗಿದೆ ‘ಸ್ಕೂಲ್​ ಲವ್​ ಸ್ಟೋರಿ’; ಏನು ಈ ಕನ್ನಡ ಸಿನಿಮಾದ ಕಥೆ?

ಪುನೀತ್​ ನಟನೆಯ ‘ಜೇಮ್ಸ್’ ಮೂರು ದಿನಕ್ಕೆ ಗಳಿಸಿದ್ದೆಷ್ಟು? ಇಲ್ಲಿದೆ ಸಂಪೂರ್ಣ ರಿಪೋರ್ಟ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ