ಈ ವಾರ ಹಲವು ಹೊಸ ಪ್ರಯತ್ನ; ರಿಲೀಸ್ ಆಗುತ್ತಿರುವ ಸಿನಿಮಾಗಳು ಯಾವವು?
ಈ ವಾರ ಕನ್ನಡ ಚಿತ್ರರಂಗದಲ್ಲಿ ಮೂರು ಹೊಸ ಚಿತ್ರಗಳು ತೆರೆಕಾಣುತ್ತಿವೆ. ‘ಫಾರೆಸ್ಟ್’,‘ರುದ್ರ ಗರುಡ ಪುರಾಣ’ ಮತ್ತು ‘ರಾಯಲ್’ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ‘ಫಾರೆಸ್ಟ್’ ಆ್ಯಕ್ಷನ್, ಕಾಮಿಡಿ ಮತ್ತು ಹಾರರ್ ಅಂಶಗಳನ್ನು ಹೊಂದಿದೆ. ‘ರಾಯಲ್’ ಚಿತ್ರಕ್ಕೆ ದರ್ಶನ್ ಸಹೋದರ ದಿನಕರ್ ನಿರ್ದೇಶನ ಮಾಡಿದ್ದಾರೆ.
ಶುಕ್ರವಾರ ಮತ್ತೆ ಬಂದಿದೆ. ಜನವರಿ 26 ಗಣರಾಜ್ಯೋತ್ಸವ ಭಾನುವಾರ ಬಂದ ಹಿನ್ನೆಲೆಯಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ಗೆ ಮುಂದಾಗುತ್ತಿಲ್ಲ. ಕನ್ನಡ ಮಾತ್ರವಲ್ಲದೆ, ಈ ವಾರ ಬಾಲಿವುಡ್ನಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾದರೆ ಕನ್ನಡದಲ್ಲಿ ಯಾವೆಲ್ಲ ಸಿನಿಮಾ ರಿಲೀಸ್ ಆಗುತ್ತಿದೆ? ಪರಭಾಷೆಯಲ್ಲಿ ಬಿಡುಗಡೆ ಕಾಣುತ್ತಿರುವ ಸಿನಿಮಾಗಳು ಯಾವವು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಫಾರೆಸ್ಟ್’
‘ಫಾರೆಸ್ಟ್’ ಹೆಸರಿನ ಕನ್ನಡ ಸಿನಿಮಾ ಜನವರಿ 24ರಂದು ತೆರೆಗೆ ಬರುತ್ತಿದೆ. ಆ್ಯಕ್ಷನ್, ಕಾಮಿಡಿ, ಹಾರರ್ ಹಾಗೂ ಥ್ರಿಲ್ ಅಂಶಗಳು ಈ ಚಿತ್ರದಲ್ಲಿ ಇವೆ. ಈ ಚಿತ್ರದಲ್ಲಿ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರು ನಂದನ್, ಶರಣ್ಯಾ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಚಂದ್ರ ಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಎನ್ಎಂ ಕಾಂತರಾಜ್ ಬಂಡವಾಳ ಹೂಡಿದ್ದಾರೆ. ಧರ್ಮ ವಿಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ರುದ್ರ ಗರುಡ ಪುರಾಣ
ರಿಷಿ, ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವಾ, ಅವಿನಾಶ್, ಕೆಎಸ್ ಶ್ರೀಧರ್, ಶಿವರಾಜ್ ಕೆಆರ್ ಪೇಟೆ ಮೊದಲಾದವರು ನಟಿಸಿರೋ ‘ರುದ್ರ ಗರುಡ ಪುರಾಣ’ ಈ ವಾರ (ಜನವರಿ 24 ) ತೆರೆಗೆ ಬರುತ್ತಿದೆ. ಕೆಎಸ್ ನಂದೀಶ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಶ್ವಿನಿ ವಿಜಯ್ ಲೋಹಿತ್, ವಿಜಯ್ ಲೋಹಿತ್ ನಿರ್ಮಾಣ ಮಾಡಿದ್ದಾರೆ.
ರಾಯಲ್
ಕಿರುತೆರೆ ಮೂಲಕ ಫೇಮಸ್ ಆದವರು ವಿರಾಟ್. ಅವರ ನಟನೆಯ ‘ರಾಯಲ್’ ಜನವರಿ 14ರಂದು ರಿಲೀಸ್ ಆಗುತ್ತಿದೆ. ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಈ ಚಿತ್ರ ನಿರ್ದೇಶನ ಮಾಡಿದ್ದು ನಿರೀಕ್ಷೆ ಇದೆ. ಜಯಣ್ಣ ಹಾಗೂ ಭೋಗೇಂದ್ರ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ 18 ಶೂಟ್ಗೆ ತಡವಾಗಿ ಬಂದ ಸಲ್ಮಾನ್; ಸಿಟ್ಟಿನಿಂದ ಹೊರ ನಡೆದ ಅಕ್ಷಯ್ ಕುಮಾರ್?
ಬಾಲಿವುಡ್ನಲ್ಲಿ
ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ಅವರು ಈ ಚಿತ್ರದ ಮೂಲಕ ಗೆಲುವು ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.