ಬಿಕಿನಿಯಲ್ಲಿ ರುಕ್ಮಿಣಿ ವಸಂತ್? ವೈರಲ್ ಫೋಟೋ, ವಿಡಿಯೋದಿಂದ ಫ್ಯಾನ್ಸ್ ಮನದಲ್ಲಿ ನೂರು ಪ್ರಶ್ನೆ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಟಿ ರುಕ್ಮಿಣಿ ವಸಂತ್ ಅವರದ್ದು ಎನ್ನಲಾದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಇದನ್ನು ನೋಡಿದ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಮೂಡಿವೆ. ಈ ಫೊಟೋ, ವಿಡಿಯೋಗಳು ನಿಜವೋ ಅಥವಾ ಎಐ ಮೂಲಕ ಸೃಷ್ಟಿಸಿದ್ದೋ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ಬಿಕಿನಿಯಲ್ಲಿ ರುಕ್ಮಿಣಿ ವಸಂತ್? ವೈರಲ್ ಫೋಟೋ, ವಿಡಿಯೋದಿಂದ ಫ್ಯಾನ್ಸ್ ಮನದಲ್ಲಿ ನೂರು ಪ್ರಶ್ನೆ
Viral Photo

Updated on: May 22, 2026 | 9:19 PM

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದಿಂದ ಅವರಿಗೆ ಅಷ್ಟು ಜನಪ್ರಿಯತೆ ಸಿಕ್ಕಿತು. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳಿಗೆ ಈಗ ಅವರು ನಾಯಕಿ ಆಗುತ್ತಿದ್ದಾರೆ. ಆ ಕಾರಣದಿಂದ ರುಕ್ಮಿಣಿ ವಸಂತ್ ಅವರ ಪ್ರತಿ ನಡೆಯ ಮೇಲೆ ಅಭಿಮಾನಿಗಳು ಗಮನ ಇಟ್ಟಿದ್ದಾರೆ. ಬಿಕಿನಿ ವಿಚಾರಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ರುಕ್ಮಿಣಿ ವಸಂತ್ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಕೆಲವು ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ. ರುಕ್ಮಿಣಿ ವಸಂತ್ ಅವರು ನಿಜಕ್ಕೂ ಬಿಕಿನಿ (Bikini) ಧರಿಸಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.

ಇದು ಎಐ ಜಮಾನ. ಯಾವುದನ್ನೂ ತಕ್ಷಣಕ್ಕೆ ನಂಬುವಂತಿಲ್ಲ. ಯಾವುದು ರಿಯಲ್? ಯಾವುದು ಎಐ ಎಂಬುದನ್ನು ಪತ್ತೆ ಹಚ್ಚಲು ಕಷ್ಟವಾಗುವ ಮಟ್ಟಕ್ಕೆ ಎಐ ತಂತ್ರಜ್ಞಾನ ಬೆಳೆದಿದೆ. ಇದರಿಂದಾಗಿ ನಟಿಯರಿಗೆ ತೊಂದರೆ ಆಗುತ್ತಿದೆ. ಸದ್ಯಕ್ಕೆ ರುಕ್ಮಿಣಿ ವಸಂತ್ ಅವರ ಬಿಕಿನಿ ಫೋಟೋ, ವಿಡಿಯೋ ಕೂಡ ಎಐ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

‘ಇದು ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್​ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದರಲ್ಲಿ ಇದೆ. ಅಕ್ಕಪಕ್ಕದಲ್ಲಿ ಕ್ಯಾಮೆರಾಮ್ಯಾನ್​ಗಳು ಕೂಡ ಇದ್ದಾರೆ.

ಇದು ನಿಜವಾಗಿಯೂ ರುಕ್ಮಿಣಿ ವಸಂತ್ ಅವರ ವಿಡಿಯೋನಾ ಅಥವಾ ಫೇಕ್ ಇರಬಹುದಾ ಎಂಬುದು ಖಚಿತವಾಗಿಲ್ಲ. ಮ್ಯಾಗಜಿನ್ ಫೋಟೋಶೂಟ್ ಸಲುವಾಗಿ ರುಕ್ಮಿಣಿ ವಸಂತ್ ಅವರು ಈ ರೀತಿ ಬೋಲ್ಡ್ ಆಗಿ ಪೋಸ್ ನೀಡಿರಬಹುದಾ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಒಂದು ವೇಳೆ ಫೇಕ್ ಆಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಈ ಪರಿ ವೈರಲ್ ಆಗಿದ್ದರೂ ಕೂಡ ರುಕ್ಮಿಣಿ ವಸಂತ್ ಅವರು ಇನ್ನೂ ಯಾಕೆ ಸ್ಪಷ್ಟನೆ ನೀಡಿಲ್ಲ ಎಂಬ ಪ್ರಶ್ನೆ ಕೂಡ ಮೂಡಿದೆ.

ಇದನ್ನೂ ಓದಿ: ಟಾಕ್ಸಿಕ್ ಟೀಸರ್: ಹಸಿಬಿಸಿ ದೃಶ್ಯ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ

ಸಿನಿಮಾ ವಿಚಾರಕ್ಕೆ ಬರುವುದಾದರೆ, ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಿವೆ. ಯಶ್ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಪ್ರಶಾಂತ್ ನೀಲ್, ಜೂನಿಯರ್ ಎನ್​ಟಿಆರ್ ಕಾಂಬಿನೇಷನ್​ನ ‘ಡ್ರ್ಯಾಗನ್’ ಸಿನಿಮಾಗೂ ರುಕ್ಮಿಣಿ ವಸಂತ್ ಅವರು ನಾಯಕಿ ಆಗಿದ್ದಾರೆ. ಪ್ಯಾನ್ ಇಂಡಿಯಾ ನಟಿಯಾಗಿ ಅವರು ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:18 pm, Fri, 22 May 26

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us