AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಚುಲ್​ಬುಲ್ ಪಾಂಡೆ, ಬಲ್ಲಿ ಸಿಂಗ್ ದಬಾಂಗ್-3 ದರ್ಬಾರ್ ಶುರು

ಬಾಲಿವುಡ್‌ ಬಾಯ್‌ ಜಾನ್‌ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‌ವುಡ್ ಪೈಲ್ವಾನ್‌ ಫೈಟ್‌ ದಬಾಂಗ್‌-3 ಸಿನಿಮಾದಲ್ಲಿ ಹೇಗಿರುತ್ತೆ ಅಂತ ಕಣ್ಣಿಗೆ ಎಣ್ಣೆ ಬಿಟ್ಕೊಂಡ್ ಕಾದು ಕುಳಿತಿದ್ದವರಿಗೆ ಇಂದು ದಬಾಂಗ್‌-3 ದರ್ಶನವಾಗಲಿದೆ. ಅಂದ್ಹಾಗೆ ದಬಾಂಗ್‌ ದರ್ಬಾರ್‌ ಕರ್ನಾಟಕದಲ್ಲಿ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿಗೆ ಬ್ರೇಕ್‌ ಬೀಳಲಿದೆ. ಪ್ರೇಕ್ಷಕರ ನಿರೀಕ್ಷೆ ರೀಚ್‌ ಮಾಡುತ್ತಾ ಅನ್ನೋದಕ್ಕೂ ಉತ್ತರ ಸಿಗಲಿದೆ. ಕರ್ನಾಟಕದಲ್ಲಿ ಶುರುವಾಗಲಿದೆ ದಬಾಂಗ್-3 ದರ್ಬಾರ್! ಬಾಲಿವುಡ್‌ ಬಾಯಿಜಾನ್‌ ಸಲ್ಮಾನ್‌ ಖಾನ್‌ ಹಾಗೂ ಸ್ಯಾಂಡಲ್‌ವುಡ್‌ ಪೈಲ್ವಾನ್‌ ಸುದೀಪ್‌ ಅಭಿನಯದ ದಬಾಂಗ್‌-3 ಸಿನಿಮಾ ಒಂದಲ್ಲಾ ಒಂದು ಕಾರಣಕ್ಕೆ […]

ಇಂದಿನಿಂದ ಚುಲ್​ಬುಲ್ ಪಾಂಡೆ, ಬಲ್ಲಿ ಸಿಂಗ್ ದಬಾಂಗ್-3 ದರ್ಬಾರ್ ಶುರು
ಸಾಧು ಶ್ರೀನಾಥ್​
|

Updated on:Dec 20, 2019 | 9:11 AM

Share

ಬಾಲಿವುಡ್‌ ಬಾಯ್‌ ಜಾನ್‌ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‌ವುಡ್ ಪೈಲ್ವಾನ್‌ ಫೈಟ್‌ ದಬಾಂಗ್‌-3 ಸಿನಿಮಾದಲ್ಲಿ ಹೇಗಿರುತ್ತೆ ಅಂತ ಕಣ್ಣಿಗೆ ಎಣ್ಣೆ ಬಿಟ್ಕೊಂಡ್ ಕಾದು ಕುಳಿತಿದ್ದವರಿಗೆ ಇಂದು ದಬಾಂಗ್‌-3 ದರ್ಶನವಾಗಲಿದೆ. ಅಂದ್ಹಾಗೆ ದಬಾಂಗ್‌ ದರ್ಬಾರ್‌ ಕರ್ನಾಟಕದಲ್ಲಿ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿಗೆ ಬ್ರೇಕ್‌ ಬೀಳಲಿದೆ. ಪ್ರೇಕ್ಷಕರ ನಿರೀಕ್ಷೆ ರೀಚ್‌ ಮಾಡುತ್ತಾ ಅನ್ನೋದಕ್ಕೂ ಉತ್ತರ ಸಿಗಲಿದೆ.

ಕರ್ನಾಟಕದಲ್ಲಿ ಶುರುವಾಗಲಿದೆ ದಬಾಂಗ್-3 ದರ್ಬಾರ್! ಬಾಲಿವುಡ್‌ ಬಾಯಿಜಾನ್‌ ಸಲ್ಮಾನ್‌ ಖಾನ್‌ ಹಾಗೂ ಸ್ಯಾಂಡಲ್‌ವುಡ್‌ ಪೈಲ್ವಾನ್‌ ಸುದೀಪ್‌ ಅಭಿನಯದ ದಬಾಂಗ್‌-3 ಸಿನಿಮಾ ಒಂದಲ್ಲಾ ಒಂದು ಕಾರಣಕ್ಕೆ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಇಬ್ಬರ ಜುಗಲ್‌ ಬಂದಿ ಬೆಳ್ಳಿಪರದೆ ಮೇಲೆ ಹೇಗೆ ಕಮಾಲ್‌ ಮಾಡುತ್ತೆ ಅನ್ನೋ ಕ್ಯೂರಿಯಾಸಿಟಿಗೆ ಬ್ರೇಕ್ ಬೀಳಲಿದೆ.

ಹೌದು ಸದ್ಯ ಎಲ್ಲಿ ನೋಡಿದ್ರೂ ದಬಾಂಗ್-3 ಚಿತ್ರವೇ ಬಾರಿ ಸದ್ದು ಮಾಡ್ತಿದೆ. ಅಂದ್ಹಾಗೆ ಮೊದಲ ಬಾರಿಗೆ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ದಬಾಂಗ್‌-3ನಲ್ಲಿ ಸ್ಯಾಂಡಲ್‌ವುಡ್‌ನ ಪೈಲ್ವಾನ್‌ ಫೈಟ್ ಮಾಡಿರೋದು ಸಿನಿಮಾದ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ.

ಅಂದ್ಹಾಗೆ ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾವೊಂದು ಕರ್ನಾಟಕದಲ್ಲಿ ಈ ಮಟ್ಟಿಗೆ ಸೌಂಡ್‌ ಮಾಡ್ತಿದೆ. ಪ್ರಭುದೇವ ಆಕ್ಷನ್ ಕಟ್‌ ಹೇಳಿರೋ ಸಿನಿಮಾದಲ್ಲಿ ಸೋನಾಕ್ಷಿ ಹಾಗೂ ಸಾಯಿ ಮಾಂಜ್ರೇಕರ್‌ ಕೂಡ ಸಖತ್ತಾಗೇ ಅಭಿನಯಿಸಿದ್ದಾರೆ.

ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ. ಇನ್ನು ಹಿಂದಿ ಸಿನಿಮಾ ಕೂಡ ಡಿಸೆಂಬರ್‌ ಇದೇ ತೆರೆಗೆ ಬರ್ತಿದ್ದು, 250ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ದಬಾಂಗ್‌-3 ದರ್ಬಾರ್ ಶುರುವಾಗಲಿದೆ.

ಒಟ್ಟಿನಲ್ಲಿ ಸಲ್ಲುಮಿಯಾ ಚುಲ್‌ಬುಲ್‌ ಪಾಂಡೆ ಆಗಿ ಸ್ಯಾಂಡಲ್‌ವುಡ್ ಪೈಲ್ವಾನ್‌ ಬಲ್ಲಿ ಸಿಂಗ್‌ ಆಗಿ ಹೇಗೆ ತೆರೆ ಮೇಲೆ ಅಬ್ಬರಿಸ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ. ಕನ್ನಡದಲ್ಲಿ ಡಬ್‌ ಆಗಿ ತೆರೆಗೆ ಬರ್ತಿರೋ ಚಿತ್ರ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗುತ್ತಾ ಅನ್ನೋ ಕುತೂಹಲಕ್ಕೆ ತೆರೆಬೀಳಲಿದೆ.

Published On - 7:45 am, Fri, 20 December 19

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್