‘ರಾಧೆ’ ಬಳಿಕ ತನ್ನ ಮುಂದಿನ ಚಿತ್ರ ಘೋಷಿಸಿದ ಬಾಲಿವುಡ್‌ ಭಾಯ್‌ ಜಾನ್

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಸದ್ಯ ದಬಾಂಗ್ 3 ಮೂಲಕ ಅಬ್ಬರಿಸಿ ರಾಧೆ ಅವತಾರದಲ್ಲಿ ಕಮಾಲ್‌ ಮಾಡೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ರಾಧೆ ಸಿನಿಮಾ ನಂತ್ರ ಬಾಲಿವುಡ್‌ ಭಾಯ್‌ಜಾನ್ ಈಗಾಗಲೇ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಟೈಟಲ್‌ ಕೇಳಿ ಸಲ್ಮಾನ್ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಬಾಲಿವುಡ್‌ ಭಾಯ್‌ ಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್‌ 3 ಚಿತ್ರ ಇನ್ನೂ ಥಿಯೇಟರ್‌ನಲ್ಲಿ ಜರ್ನಿ ಮುಂದುವರಿಸಿ ಪ್ರೇಕ್ಷಕರನ್ನ ರಂಜಿಸ್ತಿದೆ. ಅಂದ್ಹಾಗೆ ಪ್ರತಿ ವರ್ಷ ಸಲ್ಮಾನ್‌ ಖಾನ್‌ ಹಬ್ಬಕ್ಕೆ […]

‘ರಾಧೆ’ ಬಳಿಕ ತನ್ನ ಮುಂದಿನ ಚಿತ್ರ ಘೋಷಿಸಿದ ಬಾಲಿವುಡ್‌ ಭಾಯ್‌ ಜಾನ್
Follow us
ಸಾಧು ಶ್ರೀನಾಥ್​
|

Updated on: Jan 13, 2020 | 6:56 AM

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಸದ್ಯ ದಬಾಂಗ್ 3 ಮೂಲಕ ಅಬ್ಬರಿಸಿ ರಾಧೆ ಅವತಾರದಲ್ಲಿ ಕಮಾಲ್‌ ಮಾಡೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ರಾಧೆ ಸಿನಿಮಾ ನಂತ್ರ ಬಾಲಿವುಡ್‌ ಭಾಯ್‌ಜಾನ್ ಈಗಾಗಲೇ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಟೈಟಲ್‌ ಕೇಳಿ ಸಲ್ಮಾನ್ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ.

ಬಾಲಿವುಡ್‌ ಭಾಯ್‌ ಜಾನ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್‌ 3 ಚಿತ್ರ ಇನ್ನೂ ಥಿಯೇಟರ್‌ನಲ್ಲಿ ಜರ್ನಿ ಮುಂದುವರಿಸಿ ಪ್ರೇಕ್ಷಕರನ್ನ ರಂಜಿಸ್ತಿದೆ. ಅಂದ್ಹಾಗೆ ಪ್ರತಿ ವರ್ಷ ಸಲ್ಮಾನ್‌ ಖಾನ್‌ ಹಬ್ಬಕ್ಕೆ ಗಿಫ್ಟ್ ಆಗಿ ಒಂದೊಂದು ಸಿನಿಮಾ ರಿಲೀಸ್ ಮಾಡ್ತಾನೆ ಇರ್ತಾರೆ. ಆದ್ರಲ್ಲಿ ಬಾಲಿವುಡ್‌ ಸಲ್ಲುಮಿಯಾಗೆ ರಂಜಾನ್ ಹಬ್ಬ ಬೇರೆ ಹಬ್ಬಕ್ಕಿಂತಲೂ ಸ್ಪೆಷಲ್‌ ಕೂಡ ಹೌದು.

ರಂಜಾನ್‌ ಹಬ್ಬಕ್ಕೆ ರಾಧೆ ಗಿಫ್ಟ್:  ಅಂದ್ಹಾಗೆ ಸಲ್ಮಾನ್ ಖಾನ್ ದಬ್ಬಾಂಗ್ 3 ನಂತ್ರ 2020ರ ರಂಜಾನ್‌ ಹಬ್ಬಕ್ಕೆ ಗಿಫ್ಟ್ ಆಗಿ ರಾಧೆ ರಿಲೀಸ್‌ಗೆ ರೆಡಿಯಾಗ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿರೋ ರಾಧೆ ಸಿನಿಮಾಗೆ ಪ್ರಭುದೇವ್ ಆ್ಯಕ್ಷನ್ ಕಟ್ ಹೇಳಿದ್ದು, ಮೇ ತಿಂಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಹಿಂದೆಯೂ ಕೂಡ ಸಲ್ಮಾನ್ ಖಾನ್‌ ಅಭಿನಯದ ವಾಂಟೆಡ್, ದಬ್ಬಾಂಗ್, ಏಕ್​ತಾ ಟೈಗರ್, ಭಜರಂಗಿ ಭಾಯ್ ಜಾನ್‌ ಕೂಡ ರಂಜಾನ್ ಹಬ್ಬಕ್ಕೆ ರಿಲೀಸ್ ಆಗಿದ್ದು ವಿಶೇಷ.

ರಾಧೆ ರಿಲೀಸ್‌ ನಂತ್ರ ಸಲ್ಮಾನ್ ಹೊಸ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿಗೂ ಬ್ರೇಕ್ ಬಿದ್ದಿದೆ. ಸದ್ಯ ಸಲ್ಮಾನ್ ಅಭಿನಯದ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ಸಿನಿಮಾಗೆ ಕಬೀ ಈದ್ ಕಬೀ ದಿವಾಲಿ ಅನ್ನೋ ಟೈಟಲ್ ಫಿಕ್ಸ್ ಆಗಿದೆ. ನಿರ್ದೇಶಕ ಫರಾನ್ ಸಂಜೀ ಆ್ಯಕ್ಷನ್‌ ಕಟ್ ಹೇಳ್ತಿದ್ದು, ಸಿನಿಮಾಗೆ ಭರ್ಜರಿ ತಯಾರಿ ನಡೆದಿದೆ. ಒಟ್ನಲ್ಲಿ ಸಲ್ಮಾನ್ ಖಾನ್‌ ರಾಧೇ ನಂತ್ರ ನಟಿಸ್ತಿರೋ ಸಿನಿಮಾದ ಟೈಟಲ್ ಮತ್ತಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ