ಪುನೀತ್‌ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ; ಅವರ ಸಾವಿನ ಸುದ್ದಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ- ನಟ ಅರ್ಜುನ್ ಸರ್ಜಾ
arjun sarja: ಪುನೀತ್ ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಪುನೀತ್‌ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟ. ನಟ ಪುನೀತ್ ನಿಧನದ ಸುದ್ದಿ ನಿಜಕ್ಕೂ ಶಾಕ್ ಆಗಿದೆ ಎಂದು ಪುನೀತ್ ಅಂತಿಮ ದರ್ಶನ ಬಳಿಕ ಅರ್ಜುನ್ ಸರ್ಜಾ ಭಾವುಕರಾಗಿ ನುಡಿದರು.
ಬೆಂಗಳೂರು: ಶುಕ್ರವಾರ ನಿಧನರಾದ ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಬಹುಭಾಷಾ ನಟ, ಕನ್ನಡದ ಕುವರ ಅರ್ಜುನ್ ಸರ್ಜಾ ಬೆಂಗಳೂರಿಗೆ ಆಗಮಿಸಿದ್ದಾರೆ. ನಗರಕ್ಕೆ ಆಗಮಿಸಿ, ನೇರ ಕಂಠೀರವ ಸ್ಟೇಡಿಯಂಗೆ ತೆರಳಿದ ನಟ ಅರ್ಜುನ್ ಸರ್ಜಾ ಪುನೀತ್ ಅಂತಿಮ ದರ್ಶನ, ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪುನೀತ್ ಸಾವಿನ ಸುದ್ದಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಪುನೀತ್‌ಗೆ ಯಾವುದೇ ಕೆಟ್ಟ ಹವ್ಯಾಸಗಳು ಇರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟ. ನಟ ಪುನೀತ್ ನಿಧನದ ಸುದ್ದಿ ನಿಜಕ್ಕೂ ಶಾಕ್ ಆಗಿದೆ ಎಂದು ಪುನೀತ್ ಅಂತಿಮ ದರ್ಶನ ಬಳಿಕ ಅರ್ಜುನ್ ಸರ್ಜಾ ಭಾವುಕರಾಗಿ ನುಡಿದರು.
ಅಂತ್ಯಕ್ರಿಯೆ ಒಂದು ವಾರವಾದರೂ ನಾವು ಇಲ್ಲೇ ಇರುತ್ತೇವೆ:
ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಎಲ್ಲಡೆಯಿಂದ ಅಶ್ರುತರ್ಪಣ ಹರಿದುಬರುತ್ತಿದೆ. ಸದ್ಯಕ್ಕೆ ಪುನೀತ್ ರಾಜ್ಕುಮಾರ್ ದೇಹ ಕಂಠೀರವ ಸ್ಟೇಡಿಯಂಲ್ಲಿದೆ. ಅಭಿಮಾನಿಗಳ ದಂಡು ಸ್ಟೇಡಿಯಂಗೆ ಹರಿದುಬರುತ್ತಿದೆ. ಆದರೆ ಇನ್ನು ಕೆಲವರು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಹಿನ್ನೆಲೆ ಪುನೀತ್ ಪಾರ್ಥಿವ ಶರೀರ ನೋಡಲು ಆಗಮಿಸುತ್ತಿದ್ದಾರೆ. ರಾಜ್ಯದ ನಾನಾ ಭಾಗದಿಂದ ಆಗಮಿಸಿರುವ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಸುತ್ತಮುತ್ತ ಬೀಡುಬಿಟ್ಟಿದ್ದಾರೆ. ಅಂತ್ಯಕ್ರಿಯೆ ಒಂದು ವಾರವಾದರೂ ನಾವು ಇಲ್ಲೇ ಇರುತ್ತೇವೆ. ಪುನೀತ್ ಅಂತಿಮ ದರ್ಶನ ಪಡೆದೇ ಇಲ್ಲಿಂದ ತೆರಳುತ್ತೇವೆ ಎಂದು ಕುಳಿತುಬಿಟ್ಟಿದ್ದಾರೆ. ಕಂಠೀರವ ಸ್ಟುಡಿಯೋ ಬಳಿ ಅಪ್ಪು ಅಭಿಮಾನಿಗಳ ಹೀಗೆ ಬಿಗಿ ಪಟ್ಟುಹಿಡಿರುವುದನ್ನು ಕಂಡು ಪೊಲೀಸ್ ಸಿಬ್ಬಂದಿಗೆ ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ.
ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ: ಗಮನಾರ್ಹವೆಂದರೆ ನಾಳೆ ಕಂಠೀರವ ಸ್ಟುಡಿಯೋದಲ್ಲಿ ನಿನ್ನೆ ಅಗಲಿದ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಆದರೆ ಅದು ಅವರ ಕುಟುಂಬಸ್ಥರು ಮತ್ತು ಆಪ್ತ ವಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದ ಒಳಗಡೆಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
Puneeth Rajkumar Death : ಅಪ್ಪು ಬಗ್ಗೆ ಅರ್ಜುನ್ ಸರ್ಜಾ ಭಾವುಕ ಮಾತು|Tv9 kannada
(sandalwood actor Puneeth Rajkumar actor arjun sarja pays Condolence)
Published On - 3:40 pm, Sat, 30 October 21