ಭೂಮಿಯಿಂದ 37 ಸಾವಿರ ಅಡಿ ಎತ್ತರದಲ್ಲಿ ಕನ್ನಡ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
‘ಜೂಮ್ ಕಾಲ್’ ತಂಡ ಫಸ್ಟ್ ಲುಕ್ ಪೋಸ್ಟರ್ನ ವಿಮಾನದಲ್ಲಿ ಬಿಡುಗಡೆ ಮಾಡಿದೆ. ವಿಮಾನ ಆಗಸದಲ್ಲಿ ಹಾರುತ್ತಿರುವಾಗ ಪೋಸ್ಟರ್ ರಿಲೀಸ್ ಮಾಡಿ ತಂಡ ಸಂಭ್ರಮಿಸಿದೆ.

ಸೆಲೆಬ್ರಿಟಿಗಳ ಕೈಯಲ್ಲಿ ಫಸ್ಟ್ ಪೋಸ್ಟರ್ ರಿಲೀಸ್ ಮಾಡೋದು ವಾಡಿಕೆ. ಇನ್ನೂ ಕೆಲವು ಸಂದರ್ಭಗಳಲ್ಲಿ ವಿಶೇಷ ರೀತಿಯಲ್ಲಿ ಪೋಸ್ಟರ್ ರಿಲೀಸ್ ಮಾಡಿ ಗಮನ ಸೆಳೆಯುವ ಕೆಲಸ ಆಗುತ್ತದೆ. ಆದರೆ, ‘ಜೂಮ್ ಕಾಲ್’ (Zoom Call) ಹೆಸರಿನ ಚಿತ್ರತಂಡ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಅಕ್ಷಯ ತೃತೀಯ (Akshaya Tritiya) ದಿನದಂದು ಸಿನಿಮಾದ ಮೊದಲ ಪೋಸ್ಟರ್ 37 ಸಾವಿರ ಅಡಿ ಎತ್ತರದಲ್ಲಿ ಬಿಡುಗಡೆ ಮಾಡಲಾಗಿದೆ. ಈ ರೀತಿಯ ಅಪರೂಪದ ಪ್ರಯತ್ನದ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡಲಾಗಿದೆ. ಅಷ್ಟಕ್ಕೂ ಏನಿದು ವಿಚಾರ? ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಜೂಮ್ ಕಾಲ್’ ತಂಡ ಫಸ್ಟ್ ಲುಕ್ ಪೋಸ್ಟರ್ನ ವಿಮಾನದಲ್ಲಿ ಬಿಡುಗಡೆ ಮಾಡಿದೆ. ವಿಮಾನ ಆಗಸದಲ್ಲಿ ಹಾರುತ್ತಿರುವಾಗ ಪೋಸ್ಟರ್ ರಿಲೀಸ್ ಮಾಡಿ ತಂಡ ಸಂಭ್ರಮಿಸಿದೆ. ಕನ್ನಡ ಸಿನಿಮಾದ ಪೋಸ್ಟರ್ ವಿಮಾನದಲ್ಲಿ ರಿಲೀಸ್ ಆಗಿದ್ದು ಇದೇ ಮೊದಲು ಎಂದು ‘ಜೂಮ್ ಕಾಲ್’ ತಂಡ ಹೇಳಿಕೊಂಡಿದೆ. ಈ ಕ್ಷಣ ವಿಶೇಷವಾಗಿತ್ತು ಎಂದು ನಿರ್ದೇಶಕ ಮಹೇಶ್ ಹೇಳಿಕೊಂಡಿದ್ದಾರೆ.
‘ಜೂಮ್’ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ಕೆಲವರು ಜೂಮ್ಕಾಲ್ನಲ್ಲಿ ಮಾತನಾಡುತ್ತಿರುವುದು ಪೋಸ್ಟರ್ನಲ್ಲಿದೆ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ವಿಡಿಯೋ ಕಾಲ್ಗೆ ಜೂಮ್ ಬಳಕೆ ಹೆಚ್ಚಿದೆ. ಹೀಗಾಗಿ, ಅದೇ ರೀತಿಯ ವಿಚಾರ ಇಟ್ಟುಕೊಂಡು ‘ಜೂಮ್ ಕಾಲ್’ ಸಿದ್ಧಗೊಳ್ಳುತ್ತಿರಬಹುದೇ ಎನ್ನುವ ಪ್ರಶ್ನೆ ಮೂಡಿದೆ. ಇದು ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಅನ್ನೋದು ವಿಶೇಷ.
‘ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್ನಲ್ಲಿ ಬಂದಿವೆ. ಆದರೆ ಕನ್ನಡದಲ್ಲಿ ‘ಜೂಮ್ ಕಾಲ್’ ಮೊದಲ ಸಿನಿಮಾ. ಹೊಸ ಫಾರ್ಮ್ಯಾಟ್ನಲ್ಲಿ ಸಿನಿಮಾ ನೋಡುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ವಿಭಿನ್ನ ಅನುಭವ ಸಿಗಲಿದೆ’ ಎಂದು ಮಾಹಿತಿ ಹಂಚಿಕೊಂಡರು ನಿರ್ದೇಶಕ ಮಹೇಶ್.
ಇದನ್ನೂ ಓದಿ: ‘ಶಿವಾಜಿ ಸುರತ್ಕಲ್ 2’ ಯಶಸ್ಸು, ಮೂರನೇ ಪಾರ್ಟ್; ಹಲವು ವಿಚಾರಗಳ ಬಗ್ಗೆ ರಾಧಿಕಾ ನಾರಾಯಣ್ ಮಾತು
‘ಜೂಮ್ ಕಾಲ್’ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. ಮಹೇಶ್ ಎಚ್.ಎಂ ‘ಜೂಮ್ ಕಾಲ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ಎಸ್. ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು ‘ಜೂಮ್ ಕಾಲ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Tue, 25 April 23