‘ಶಿವಾಜಿ ಸುರತ್ಕಲ್ 2’ ಯಶಸ್ಸು, ಮೂರನೇ ಪಾರ್ಟ್​; ಹಲವು ವಿಚಾರಗಳ ಬಗ್ಗೆ ರಾಧಿಕಾ ನಾರಾಯಣ್ ಮಾತು

Radhika Narayan Interview: ರಾಧಿಕಾ ನಾರಾಯಣ್ ಅವರು ‘ಶಿವಾಜಿ ಸುರತ್ಕಲ್​ 2’  ಗೆಲುವಿನ ಖುಷಿಯಲ್ಲಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ಹೊಸ ಸಿನಿಮಾಗಳ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘ಶಿವಾಜಿ ಸುರತ್ಕಲ್ 2’ ಯಶಸ್ಸು, ಮೂರನೇ ಪಾರ್ಟ್​; ಹಲವು ವಿಚಾರಗಳ ಬಗ್ಗೆ ರಾಧಿಕಾ ನಾರಾಯಣ್ ಮಾತು
ರಾಧಿಕಾ ನಾರಾಯಣ್
Follow us
ರಾಜೇಶ್ ದುಗ್ಗುಮನೆ
|

Updated on:Apr 25, 2023 | 1:14 PM

ನಟಿ ರಾಧಿಕಾ ನಾರಾಯಣ್ (Radhika Narayan) ಅವರು ‘ರಂಗಿ ತರಂಗ’ ಸಿನಿಮಾ ಮೂಲ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಯಶಸ್ಸು ಕಂಡಿತು. ‘ಯು ಟರ್ನ್​’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ಸದ್ಯ ಅವರು ‘ಶಿವಾಜಿ ಸುರತ್ಕಲ್​ 2’  ( Shivaji Surathkal 2) ಗೆಲುವಿನ ಖುಷಿಯಲ್ಲಿದ್ದಾರೆ. ರಮೇಶ್ ಅರವಿಂದ್ ನಟನೆಯ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ತಮ್ಮ ಜರ್ನಿ ಬಗ್ಗೆ, ಹೊಸ ಸಿನಿಮಾಗಳ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

‘ಶಿವಾಜಿ ಸುರತ್ಕಲ್ 2’ ಗೆಲುವು ಎಷ್ಟು ಖುಷಿ ತಂದಿದೆ?

ನಿಜಕ್ಕೂ ತುಂಬಾನೇ ಖುಷಿ ಇದೆ. ನಾವು ಥಿಯೇಟರ್ ವಿಸಿಟ್ ಮಾಡಿದಾಗ ಪ್ರೇಕ್ಷಕರ ಲೈವ್ ರಿಯಾಕ್ಷನ್ ಸಿಕ್ಕಿದೆ. ಮೊದಲ ವೀಕೆಂಡ್​ನಲ್ಲಿ ಅನೇಕ ಕಡೆ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ. ವಾರದ ದಿನಗಳಲ್ಲೂ ಜನರು ಸಿನಿಮಾ ವೀಕ್ಷಿಸಿದ್ದಾರೆ. ನಾಳೆಯಿಂದ (ಏಪ್ರಿಲ್ 26) ವಿಜಯ ಯಾತ್ರೆ ಆರಂಭಿಸುತ್ತಿದ್ದೇವೆ. ಮೊದಲ ದಿನ ರಾಮನಗರ, ಮೈಸೂರು, ಮಂಡ್ಯಕ್ಕೆ ತೆರಳುತ್ತಿದ್ದೇವೆ.

ಒಟಿಟಿಯತ್ತ ಜನರು ಒಲವು ತೋರಿಸುತ್ತಿರುವ ಮಧ್ಯೆಯೂ ನಿಮ್ಮ ಸಿನಿಮಾ ಗೆದ್ದಿದೆಯಲ್ಲ..

ಹೌದು, ಇತ್ತೀಚೆಗೆ ಜನರು ಹೆಚ್ಚು ಥಿಯೇಟರ್​ಗೆ ಬರುತ್ತಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲೂ ಜನರು ಬಂದು ಸಿನಿಮಾ ನೋಡುತ್ತಿದ್ದಾರೆ. ಇದು ಖುಷಿ ನೀಡಿದೆ. ಮೊದಲ ದಿನ ವೀರೇಶ್ ಥಿಯೇಟರ್​​​ನಲ್ಲಿ ಸಿನಿಮಾ ನೋಡಿದೆವು. ಜನರು ಸಿನಿಮಾ ನೋಡಿ ಶಿಳ್ಳೆ ಹೊಡೆದಿದ್ದಾರೆ. ಥಿಯೇಟರ್​ನಲ್ಲಿ ಕುಳಿತು ನಮ್ಮದೇ ಸಿನಿಮಾ ನೋಡುವಾಗ ಜನರ ರೆಸ್ಪಾನ್ಸ್ ಸಿಕ್ಕರೆ ಅದು ಕಲಾವಿದನಿಗೆ ಸಾಕಷ್ಟು ಖುಷಿ ನೀಡುತ್ತದೆ. ಈ ರೀತಿಯ ಸಿನಿಮಾಗಳನ್ನು ಪ್ರೇಕ್ಷಕರು ಥಿಯೇಟರ್​ನಲ್ಲೇ ನೋಡಬೇಕು. ಆಗ ನಿಜವಾದ ಅನುಭವ ಸಿಗುತ್ತದೆ.

‘ಶಿವಾಜಿ ಸುರತ್ಕಲ್ 3’ ಬರುತ್ತಾ?

‘ಶಿವಾಜಿ ಸುರತ್ಕಲ್ 2’ ಯಶಸ್ಸು ಕಂಡಿದೆ. ಹೀಗಾಗಿ, ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಮೂರು ಹಾಗೂ ನಾಲ್ಕನೇ ಪಾರ್ಟ್​ಗೆ ರೆಡಿ ಮಾಡಿಕೊಳ್ಳುತ್ತಿದ್ದಾರೆ. ಆ ಸರಣಿಯಲ್ಲಿ ನಾನು ಇರುತ್ತೇನೋ ಅಥವಾ ಇಲ್ಲವೋ ಎನ್ನುವ ಕ್ಲ್ಯಾರಿಟಿ ಸಿಕ್ಕಿಲ್ಲ. ಶೀಘ್ರದಲ್ಲೇ ಆ ವಿಚಾರ ತಿಳಿಸುತ್ತೇನೆ.

ಸಿನಿಮಾ ಆಯ್ಕೆಯಲ್ಲಿ  ನೀವು ಚ್ಯೂಸಿ ಏಕೆ?

ನಾನು ಉದ್ದೇಶಪೂರ್ವಕವಾಗಿ ಚ್ಯೂಸಿ ಆಗಿದ್ದಲ್ಲ. ಯಾವುದೇ ಸಿನಿಮಾದ ಕಥೆ ಕೇಳಿದಾಗ ನಾನು ಕಲ್ಪನೆ ಮಾಡಿಕೊಳ್ಳುತ್ತೇನೆ. ಆಗ ಸಿನಿಮಾ ಇಷ್ಟ ಆಗಬೇಕು. ಪ್ರೇಕ್ಷಕನಾಗಿ ನಾನು ಕಥೆ ಕೇಳುತ್ತೇನೆ. ನಿರ್ದೇಶಕರು, ಪಾತ್ರವರ್ಗ, ನನ್ನ ಪಾತ್ರ, ಸ್ಕ್ರಿಪ್ಟ್ ಇವುಗಳಲ್ಲಿ ಯಾವುದು ಚೆನ್ನಾಗಿದ್ದರೂ ನಾನು ಸಿನಿಮಾ ಒಪ್ಪಿಕೊಳ್ಳುತ್ತೇನೆ. ಒಳ್ಳೆಯ ಸಿನಿಮಾ ಮಾಡಿದ ಖುಷಿ ನನಗಿದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ.

ಫ್ರೀಟೈಮ್​ನಲ್ಲಿ ಏನು ಮಾಡ್ತೀರಾ?

ನಾನು ಹೆಚ್ಚುಹೆಚ್ಚು ಪುಸ್ತಕ ಓದುತ್ತೇನೆ. ಡಾನ್ಸ್ ಮಾಡುತ್ತೇನೆ. ನಿತ್ಯ ಯೋಗಾಭ್ಯಾಸ ಮಾಡುತ್ತೇನೆ. ಸಂಗೀತ ಕೇಳುತ್ತೇನೆ. ಆಡಿಯೋ ಬುಕ್ ಕೇಳುತ್ತೇನೆ.

ಕನ್ನಡ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆಯಲ್ಲ..

ಇದು ಖುಷಿಯ ವಿಚಾರ. ರಾಷ್ಟ್ರ ಮಟ್ಟದಲ್ಲಿ ನಮ್ಮ ಚಿತ್ರಗಳು ಸದ್ದು ಮಾಡುತ್ತಿರುವುದು ನಮಗೆ ಖುಷಿ ಆಗುತ್ತದೆ. ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ಒಂದೊಳ್ಳೆಯ ಟ್ರೆಂಡ್ ಸೆಟ್​ ಆಗಿದೆ.

ಮುಂದಿನ ಪ್ರಾಜೆಕ್ಟ್​​ಗಳ ಬಗ್ಗೆ ಹೇಳಿ..

ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿರುವ ‘ವೀರ ಕಂಬಳ’ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದ ಶೂಟಿಂಗ್​ ಕೂಡ ಮುಗಿದಿದೆ. ಹೊಸ ಹೊಸ ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ಯಾವುದನ್ನೂ ಫೈನಲ್ ಮಾಡಿಲ್ಲ.

Published On - 1:10 pm, Tue, 25 April 23

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ