ಕನ್ನಡ ಚಿತ್ರರಂಗದ ಹಿರಿಯ ನಟ ಟಿ ತಿಮ್ಮಯ್ಯ ನಿಧನ

ಚಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಾಲೆ, ಕಾಮನ ಬಿಲ್ಲು ಸೇರಿದಂತೆ ಕನ್ನಡ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಟಿ ತಿಮ್ಮಯ್ಯ ಅವರು ಇಂದು (ನವೆಂಬರ್ 16) ನಿಧನ ಹೊಂದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಟಿ ತಿಮ್ಮಯ್ಯ ನಿಧನ
Follow us
ಮಂಜುನಾಥ ಸಿ.
|

Updated on:Nov 16, 2024 | 7:45 PM

ಡಾ ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನಡದ ಹಲವು ಹಿರಿಯ ನಟರೊಡನೆ ನಟಿಸಿದ್ದ ಹಿರಿಯ ಕಲಾವಿದರ ಡಿ ತಿಮ್ಮಯ್ಯ ಅವರು ಇಂದು (ನವೆಂಬರ್ 16) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು, ಇವರಿಗೆ 4 ಜನ ಮಕ್ಕಳು, ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಮತ್ತು ಅನೇಕರೊಂದಿಗೆ ಕೆಲಸ ಮಾಡಿದ್ದಾರೆ.

ಚೆಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಾಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ಈ ಜೀವ ನಿನಗಾಗಿ, ಕುರುಕ್ಷೇತ್ರ, ನಿಶ್ರ್ಕರ್ಷ, ಬೆಳದಿಂಗಳ ಬಾಲೆ ಚಿತ್ರಗಳಲ್ಲಿ ನಟಿಸಿದ್ದರು. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ರಂಗಭೂಮಿ ಮೂಲಕ ನಟನೆ ಆರಂಭಿಸಿದ ತಿಮ್ಮಯ್ಯನವರು ಚಿತ್ರರಂಗದ ಸೆಳೆತಕ್ಕೆ ಸಿಕ್ಕಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 80 ರ ದಶಕದಲ್ಲಿ ನಟನೆ ಆರಂಭಿಸಿದ ತಿಮ್ಮಯ್ಯನವರು ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಕಳೆದ ಹಲ ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಚಿತ್ರರಂಗದಿಂದ ದೂರ ಉಳಿಸಿದ್ದರು ತಿಮ್ಮಯ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Sat, 16 November 24

ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಜಮೀರ್ ಪದಬಳಕೆ ವಿಷಯವನ್ನು ಶಿವಕುಮಾರ್ ನೋಡಿಕೊಳ್ಳುತ್ತಾರೆ: ಪರಮೇಶ್ವರ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಸಂಜು ಸಿಕ್ಸರ್​ಗೆ ಮಹಿಳೆ ಕಣ್ಣೀರು: ಕ್ಷಮೆ ಕೇಳಿದ ಸ್ಯಾಮ್ಸನ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್
ಜಮೀರ್ ಮಾತಾಡಿದ್ದು ತಪ್ಪು ಎಂದು ಕೊನೆಗೂ ಅಂಗೀಕರಿಸಿದ ಡಿಕೆ ಶಿವಕುಮಾರ್