‘ಮಾರ್ಕ್​’ಗೆ ಸಂಕಷ್ಟ; ಟೈಟಲ್ ವಿಚಾರದಲ್ಲಿ ಭುಗಿಲೆದ್ದ ವಿವಾದ

ಕಿಚ್ಚ ಸುದೀಪ್ ಅವರ 47ನೇ ಚಿತ್ರವಾದ 'ಮಾರ್ಕ್' ಸಿನಿಮಾದ ಹೆಸರಿನಲ್ಲಿ ವಿವಾದ ಉದ್ಭವಿಸಿದೆ. KRG ಸ್ಟುಡಿಯೋ ಮತ್ತು ಗೌರವ್ ಫಿಲ್ಮ್ಸ್ ಎರಡೂ ಸಂಸ್ಥೆಗಳು ಈ ಹೆಸರನ್ನು ನೋಂದಾಯಿಸಿರುವುದು ವಿವಾದಕ್ಕೆ ಕಾರಣ. ಸುದೀಪ್ ಚಿತ್ರದ ಶೂಟಿಂಗ್ 60% ಪೂರ್ಣಗೊಂಡಿದ್ದು, ಡಿಸೆಂಬರ್ 25ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.

‘ಮಾರ್ಕ್​’ಗೆ ಸಂಕಷ್ಟ; ಟೈಟಲ್ ವಿಚಾರದಲ್ಲಿ ಭುಗಿಲೆದ್ದ ವಿವಾದ
ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳಲಿದ್ದಾರೆ. ಟೀಸರ್​​ನಲ್ಲಿ ಈ ವಿಷಯ ಬಹಿರಂಗ ಆಗಿದೆ. ಚಿತ್ರದಲ್ಲಿ ಸುದೀಪ್ ಗೆಟಪ್ ಹೇಗಿರಲಿದೆ ಎಂಬುದು ಗೊತ್ತಾಗಿದೆ.

Updated on: Sep 05, 2025 | 2:35 PM

ಕಿಚ್ಚ ಸುದೀಪ್ (Kichcha Sudeep) ಬರ್ತ್​ಡೇ ಪ್ರಯುಕ್ತ ‘ಮಾರ್ಕ್’ ಸಿನಿಮಾ ಟೈಟಲ್ ರಿವೀಲ್ ಆಯಿತು. ಇದು ಅವರ ನಟನೆಯ 47ನೇ ಸಿನಿಮಾ. ಈ ಮೊದಲು ಸುದೀಪ್ ಅವರು ಮ್ಯಾಕ್ಸ್ ಆಗಿ ಎಲ್ಲರ ಗಮನ ಸೆಳೆದಿದ್ದರು. ಈಗ ಅವರು ‘ಮಾರ್ಕ್’ ಸಿನಿಮಾ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಈಗಾಗಲೇ ಸಿನಿಮಾದ ಶೂಟ್ ಕೂಡ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ಹೀಗಿರುವಾಗ ಸಿನಿಮಾದ ಟೈಟಲ್ ವಿವಾದ ಭುಗಿಲೆದ್ದಿದೆ.

‘ಮಾರ್ಕ್’ ಸಿನಿಮಾ ಟೈಟಲ್ ಕರ್ನಾಟಕ ಫಿಲ್ಮ್  ಚೇಂಬರ್​ನಲ್ಲಿ ರಿಜಿಸ್ಟರ್ ಆಗಿದೆ. ಈ ಟೈಟಲ್ ನೋಂದಣಿ ಮಾಡಿಸಿದ್ದು ಕೆಆರ್​ಜಿ ಸ್ಟುಡಿಯೋದವರು. ಎರಡು ವರ್ಷಗಳ ಹಿಂದೆ ಟೈಟಲ್ ಪಡೆದುಕೊಂಡಿದ್ದರು. ಆದರೆ, ಸುದೀಪ್​ಗಾಗಿ ಶೀರ್ಷಿಕೆಯನ್ನು ಅವರು ಬಿಟ್ಟುಕೊಟ್ಟಿದ್ದರು. ಈಗ ಈ ಟೈಟಲ್ ‘ಸತ್ಯ ಜ್ಯೋತಿ ಫಿಲ್ಮ್ಸ್’ಗೆ ಹಸ್ತಾಂತರ ಆಗಿದೆ. ಇದೇ ಸಂಸ್ಥೆಯ ಜೊತೆ ಸುದೀಪ್ ‘ಮಾರ್ಕ್’ ಮಾಡುತ್ತಿದ್ದಾರೆ.

ಆದರೆ, ಈಗ ‘ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ಯಲ್ಲೂ ‘ಮಾರ್ಕ್’ ಟೈಟಲ್ ನೋಂದಣಿ ಆಗಿದೆ. ಇದೇ ವರ್ಷದ ಮೇ 19ರಂದು ಈ ಸಿನಿಮಾ ಹೆಸರಲ್ಲಿ ಟೈಟಲ್ ನೋಂದಣಿ ಆಗಿದೆ. ‘ಗೌರವ್ ಫಿಲ್ಮ್ಸ್’ ಹೆಸರಿನ ಸಂಸ್ಥೆ ಈ ಟೈಟಲ್ ರಿಜಿಸ್ಟರ್ ಮಾಡಿಸಿದೆ. ಹೀಗಾಗಿ  ಈ ಟೈಟಲ್ ನಮ್ಮದು ಎಂದು ಗೌರವ್ ಫಿಲ್ಮ್ಸ್ ಹೇಳುತ್ತಿದೆ.

ಇದನ್ನೂ ಓದಿ
ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಯಾರ ಪಾಲಾಗಲಿದೆ?

ಈ ರೀತಿಯ ಟೈಟಲ್ ಗೊಂದಲ ಮೂಡುತ್ತಿರುವುದು ಸ್ಯಾಂಡಲ್​ವುಡ್​ನಲ್ಲಿ ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಈ ರೀತಿಯ ಹಲವು ವಿವಾದಗಳು ಭುಗಿಲೆದ್ದಿದ್ದವು. ಈಗ ಕೆಆರ್​ಜಿ ಅವರೇ ಈ ಟೈಟಲ್​ನ ಮೊದಲು ನೋಂದಣಿ ಮಾಡಿಸಿರುವುದರಿಂದ ‘ಮಾರ್ಕ್​’ ಟೈಟಲ್ ಸುದೀಪ್​ಗೆ ಸಿಗೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಸುದೀಪ್ 47ನೇ ಸಿನಿಮಾ ಹೆಸರು ‘ಮಾರ್ಕ್’: ಸಖತ್ ಮಾಸ್ ಆಗಿದೆ ಟೈಟಲ್ ಟೀಸರ್

ಡಿಸೆಂಬರ್​ಗೆ ರಿಲೀಸ್

ಕಿಚ್ಚ ಸುದೀಪ್ ಅವರು ಜುಲೈನಲ್ಲಿ ಈ ಸಿನಿಮಾ ಘೋಷಣೆ ಮಾಡಿದರು. ನಂತರ ಸಿನಿಮಾ ಶೂಟ್ ಕೂಡ ಆರಂಭಿಸಿದರು. ಈಗಾಗಲೇ ಸಿನಿಮಾದ ಶೇ.60ರಷ್ಟು ಶೂಟ್ ಪೂರ್ಣಗೊಂಡಿದೆ. ಡಿಸೆಂಬರ್​​ 25ರಂದು ಸಿನಿಮಾನ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 2:34 pm, Fri, 5 September 25