AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಒಂದಾಗುತ್ತಿರುವ ‘ಪಾಪ್​ಕಾರ್ನ್’ ಜೋಡಿ: ಡಾಲಿ ಜೊತೆ ಸಪ್ತಮಿ

ಡಾಲಿ ಧನಂಜಯ್ ನಟನೆಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಸಪ್ತಮಿ ಗೌಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಇದೀಗ ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ ನಟಿಸಲಿದ್ದಾರೆ.

ಮತ್ತೆ ಒಂದಾಗುತ್ತಿರುವ ‘ಪಾಪ್​ಕಾರ್ನ್’ ಜೋಡಿ: ಡಾಲಿ ಜೊತೆ ಸಪ್ತಮಿ
ಮಂಜುನಾಥ ಸಿ.
|

Updated on: Oct 26, 2024 | 11:32 AM

Share

ದುನಿಯಾ ಸೂರಿ ನಿರ್ದೇಶಿಸಿದ್ದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ 2020 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದ್ದು ಮಾತ್ರವೇ ಅಲ್ಲದೆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ನಟಿಯೊಬ್ಬರ ಪರಿಚಯವಾಗಿತ್ತು, ಅವರೇ ಸಪ್ತಮಿ ಗೌಡ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸಪ್ತಮಿ ಗೌಡ, ಡಾಲಿ ಧನಂಜಯ್​ರ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು. ಬಲು ಘಾಟಿ, ಸಿಟ್ಟಿನ ಹೆಂಗಸಿನ ಪಾತ್ರವದು. ಸಿನಿಮಾದಲ್ಲಿ ಅವರು ಡಾಲಿಗೆ ಬೈದ ಬೈಗುಳಗಳು ಭಾರಿ ಹಿಟ್ ಆಗಿತ್ತು. ಆ ಪಾತ್ರದ ಮೂಲಕವೇ ಸಪ್ತಮಿ ಮೊದಲಿಗೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಪರಿಚಯವಾಗಿದ್ದರು.

‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದ ಬಳಿಕ ಡಾಲಿ ಧನಂಜಯ್ ಹಾಗೂ ಸಪ್ತಮಿ ಗೌಡ ಒಟ್ಟಿಗೆ ನಟಿಸಿರಲಿಲ್ಲ. ಆದರೆ ಈಗ ಸುಮಾರು ಐದು ವರ್ಷದ ಬಳಿಕ ಮತ್ತೆ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಒಂದಾಗುತ್ತಿದ್ದಾರೆ. ಒಂದು ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಡಾಲಿ ಧನಂಜಯ್ ಮತ್ತು ಸಪ್ತಮಿ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾದ ಕತೆ, ಪಾತ್ರವರ್ಗ ಅಂತಿಮವಾಗಿದ್ದು ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗಿದೆ.

ಇದನ್ನೂ ಓದಿ:ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಸಪ್ತಮಿ ಗೌಡ

ಸ್ವಾತಂತ್ರ್ಯಕ್ಕೂ ಮುಂಚಿನ 1857 ರಲ್ಲಿ ನಡೆದ ಘಟನೆಯನ್ನು ಆಧರಿಸಿದ ಸಿನಿಮಾ ಒಂದರಲ್ಲಿ ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿದ್ದು, ಸಪ್ತಮಿ ಗೌಡ ನಾಯಕಿಯಾಗಿ ನಟಿಸಲಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ದೇಶದಾದ್ಯಂತ ಹೊತ್ತಿದಾಗ ಬಾಗಲಕೋಟೆ ಜಿಲ್ಲೆ, ಮುಧೋಳದ ಹಲಗಲಿಯ ಬೇಡರು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ‘ಹಲಗಲಿ’ ಎಂದೇ ಹೆಸರಿಡಲಾಗಿದೆ. ಸಿನಿಮಾದಲ್ಲಿ ಹಲಗಲಿ ಬೇಡರ ಯುವಕನ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ.

‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾದಿಂದ ನಟನೆಗೆ ಎಂಟ್ರಿ ಕೊಟ್ಟ ಸಪ್ತಮಿ ಗೌಡಗೆ ‘ಕಾಂತಾರ’ ಸಿನಿಮಾ ಅದೃಷ್ಟ ಬದಲಾಯಿಸಿತು. ‘ಕಾಂತಾರ’ದ ಬಳಿಕ ಹಿಂದಿಯ ‘ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿಯೂ ಸಹ ನಟಿಸಿ ಬಂದ ಸಪ್ತಮಿ ಗೌಡ, ಹೊಂಬಾಳೆ ನಿರ್ಮಾಣದ ‘ಯುವ’ ಸಿನಿಮಾದಲ್ಲಿ ನಟಿಸಿದರು. ಅಂಬರೀಶ್ ಪುತ್ರನ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಈಗ ಡಾಲಿ ಧನಂಜಯ್​ಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ