ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್

ಪುತ್ರಿಗಾಗಿ ನಾನು ನನ್ನ ಹೆಂಡತಿ ಮನೆ ಮಠ ಮಾರಿ ಅಮೆರಿಕಗೆ ಕಳುಹಿಸಿ ಓದಿಸಿ ಪೈಲಟ್ ಮಾಡಿದ್ದೇವೆ. ಮಗಳು ನಮ್ಮ ಜತೆ ಇದ್ದಾಗ ಚೆನ್ನಾಗಿಯೇ ಇದ್ದಳು. ಒಂದು ದಿನ ಏಕಾಏಕಿ ಬಂದು ಆರ್ಕಿಟೆಕ್ಚರ್​ ಒಬ್ಬನನ್ನು ಮದುವೆ ಆಗುತ್ತೇನೆ ಅಂದಳು

ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್
ಸತ್ಯಜಿತ್​ ಹಾಗೂ ಅವರ ಮಗಳು ಸ್ವಲೇಹಾ
Edited By:

Updated on: Feb 12, 2021 | 4:44 PM

ಬೆಂಗಳೂರು: ನಾನು ಓದಿಸಿ ಬೆಳೆಸಿದ ಮಗಳೇ ಈಗ ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಆಕೆಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿ ಈಗ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಕನ್ನಡದ ಹಿರಿಯ ನಟ ಸತ್ಯಜಿತ್​ ಟಿವಿ9 ಕನ್ನಡದ ಎದುರು ಕಣ್ಣೀರಿಟ್ಟಿದ್ದಾರೆ.

ಪುತ್ರಿ ಸ್ವಲೇಹಾಗಾಗಿ ನಾನು ನನ್ನ ಹೆಂಡತಿ ಮನೆ ಮಠ ಮಾರಿ ಅಮೆರಿಕಗೆ ಕಳುಹಿಸಿ ಓದಿಸಿ ಪೈಲಟ್ ಮಾಡಿದ್ದೇವೆ. ಅವಳು ನಮ್ಮ ಜತೆ ಇದ್ದಾಗ ಚೆನ್ನಾಗಿಯೇ ಇದ್ದಳು. ಒಂದು ದಿನ ಏಕಾಏಕಿ ಆರ್ಕಿಟೆಕ್ಚರ್​ ಒಬ್ಬನನ್ನು ಮದುವೆ ಆಗುತ್ತೇನೆ ಅಂದಳು. ನಾನು, ಮಕ್ಕಳು ಹೋದರೆ ಹೋಗಲಿ ಎಂದು ಸುಮ್ಮನಾದೆ. ಮದುವೆ ನಂತರ ಮಗಳು ಬದಲಾಗಿದ್ದಾಳೆ ಎಂದು ಸತ್ಯಜಿತ್​ ದೂರಿದ್ದಾರೆ.

ಮನೆ ಸಾಲ, ಕಾರಿನ ಸಾಲ, ಕ್ರೆಡಿಟ್​ ಕಾರ್ಡ್​, ಪರ್ಸನಲ್ ಲೋನ್​ ಎಲ್ಲವೂ ಪುತ್ರಿ ಹೆಸರಿನಲ್ಲೇ ಇದೆ. ನನ್ನ ಪುತ್ರಿ ಸ್ವಲೇಹಾ ಹೆಸರಿನಲ್ಲಿ ಪತಿ ಲೋನ್ ಮಾಡಿದ್ದಾನೆ. ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿಕೊಂಡು ಬಾಡಿಗೆ ಬಂದು ಕೂತಿದ್ದೇವೆ. ಮನೆ ಬಾಡಿಗೆಯನ್ನಾದರೂ ಕೊಡು ಎಂದು ಮನವಿಮಾಡಿದ್ದೆ. ಆದರೆ ಯಾವುದಕ್ಕೂ ನನ್ನ ಮಗಳು ಸ್ಪಂದಿಸುತ್ತಿಲ್ಲ ಎಂದು ಸತ್ಯಜಿತ್ ಹೇಳಿದ್ದಾರೆ.

ಸ್ವಲೇಹಾ ಹೇಳೋದೆ ಬೇರೆ..
ತಂದೆಯ ಆರೋಪಕ್ಕೆ ಮಗಳು ಸ್ವಲೇಹಾ ಉತ್ತರಿಸಿದ್ದಾರೆ. ನನ್ನ ಓದಿಗೆ ತಂದೆ ಯಾವುದೇ ಹಣ ನೀಡಿಲ್ಲ. ನನ್ನ ಸ್ವಂತ ಹಣದಿಂದ ನಾನು ಓದಿಕೊಂಡಿದ್ದೇನೆ. ನನ್ನ ಗಂಡ ತಂದೆಗೆ ಯಾವುದೇ ಮಾಟ-ಮಂತ್ರ ಮಾಡಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಸಿಟ್ಟಾಗಿರುವ ಸತ್ಯಜಿತ್​,ನನ್ನ ಪುತ್ರಿ ಸ್ವಲೇಹಾ ಹೇಳುವುದೆಲ್ಲಾ ಸುಳ್ಳು. ನಾನು 40 ಲಕ್ಷ ರೂಪೂಯಿ ಲೋನ್ ಕಟ್ಟಿದ್ದೇನೆ. ನನಗೆ ನನ್ನ ಮಗಳಿಂದ ಯಾವ ವಿಚಾರವೂ ಬೇಕಿಲ್ಲ. ತಿಂಗಳಿಗೆ ಒಂದು ಲಕ್ಷ ಕೊಟ್ಟಿರುವುದಾಗಿ ಅವಳು ಹೇಳುತ್ತಿದ್ದಾಳೆ. ಹಣ ಕೊಟ್ಟಿರುವುದಕ್ಕೆ ದಾಖಲೆಗಳು ಇರಬೇಕಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮೋಸ ಮಾಡಿದ್ದ ಕಂಪನಿಯಿಂದಲೇ ಮತ್ತೆ ಮೋಸದ ಸಂಚು.. ವಂಚನೆಗೊಳಗಾಗಿದ್ದವರಿಂದಲೇ SPಗೆ ದೂರು

Published On - 4:26 pm, Fri, 12 February 21