Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ

|

Updated on: Mar 13, 2023 | 7:04 PM

Satya Hegde Studios | Kannada Short Movie: ‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರು ಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Satya Hegde: ಹೊಸಬರಿಗೆ ಬೆನ್ನೆಲುಬಾಗಿ ನಿಂತ ‘ಸತ್ಯ ಹೆಗಡೆ ಸ್ಡುಡಿಯೋಸ್​’; ಕಿರುಚಿತ್ರಗಳಿಗೆ ಸಿಗುತ್ತಿದೆ ಬೆಸ್ಟ್​ ವೇದಿಕೆ
ಯುವ ಪ್ರತಿಭೆಗಳ ಜೊತೆ ಸತ್ಯ ಹೆಗಡೆ
Follow us on

ಕನ್ನಡ ಚಿತ್ರರಂಗದಲ್ಲಿ ಸತ್ಯ ಹೆಗಡೆ (Satya Hegde) ಅವರು ಛಾಯಾಗ್ರಾಹಕರಾಗಿ ದೊಡ್ಡ ಹೆಸರು ಗಳಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಬಹುಬೇಡಿಕೆಯ ಕ್ಯಾಮೆರಾಮ್ಯಾನ್​ ಆಗಿ ಅವರು ಗುರುತಿಸಿಕೊಂಡಿದ್ದಾರೆ. ಇಷ್ಟು ಬ್ಯುಸಿ ಆಗಿರುವುದರ ಜೊತೆಗೆ ಅವರು ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ಕಾಯಕವನ್ನೂ ಮಾಡುತ್ತಿದ್ದಾರೆ. ‘ಸತ್ಯ ಹೆಗಡೆ ಸ್ಟುಡಿಯೋಸ್​’ (Satya Hegde Studios) ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಆರಂಭಿಸಿ, ಆ ಮೂಲಕ ಉತ್ತಮವಾಗಿ ಕಿರುಚಿತ್ರಗಳನ್ನು ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಇದರಿಂದ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಕಿರುಚಿತ್ರಗಳ (Kannada Short Movie) ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಅತಿಥಿಗಳಾಗಿ ನಿರ್ದೇಶಕರಾದ ಆದರ್ಶ್​ ಈಶ್ವರಪ್ಪ, ಬಿ.ಎಂ. ಗಿರಿರಾಜ್​, ‘ಗುಳ್ಟು’ ಖ್ಯಾತಿಯ ನಟ ನವೀನ್ ಶಂಕರ್​ ಮುಂತಾದವರು ಹಾಜರಾಗಿದ್ದರು.

‘ಸತ್ಯ ಹೆಗಡೆ ಸ್ಟುಡಿಯೋಸ್​’ ಮೂಲಕ ಈಗಾಗಲೇ 11 ಕಿರುಚಿತ್ರಗಳು ಬಿಡುಗಡೆ ಆಗಿವೆ.‌ ಈಗ ಇನ್ನೂ ಮೂರು ಶಾರ್ಟ್​ ಫಿಲ್ಮ್​ಗಳು ರಿಲೀಸ್​ಗೆ ಸಿದ್ಧವಾಗಿವೆ. ಮಾರ್ಚ್​ 11ರಂದು ‘ಗ್ರಾಚಾರ’ ಶೀರ್ಷಿಕೆಯ ಕಿರುಚಿತ್ರ ರಿಲೀಸ್ ಆಗಿದೆ. ಮುಂದಿನ ದಿನಗಳಲ್ಲಿ ‘ಕಥೆಗಾರನ ಕತೆ’ ಮತ್ತು ‘ಅಹಂ ಪರಂ’ ಶಾರ್ಟ್ ಫಿಲ್ಮ್​ಗಳು ಬಿಡುಗಡೆ ಆಗಲಿವೆ. 9 ನಿಮಿಷಗಳ ಅವಧಿಯ ‘ಕತೆಗಾರನ ಕಥೆ’ ಕಿರುಚಿತ್ರವನ್ನು ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಹಾಸನ ಮೂಲದವರಾದ ಅವರು ‘ಹೃದಯದ ಮಾತು’ ಸೇರಿದಂತೆ 8 ಕಾದಂಬರಿಗಳನ್ನು ಬರೆದಿದ್ದಾರೆ. ‘ಗ್ರಾಚಾರ’ ಕಿರುಚಿತ್ರವನ್ನು ಸಾಗರ ಮೂಲದ ಅಜಯ್ ಪಂಡಿತ್ ನಿರ್ದೇಶನ ಮಾಡಿದ್ದಾರೆ. ವಿನಯ್ ಚಂದ್ರಹಾಸ ಅವರ ನಿರ್ದೇಶನದಲ್ಲಿ ‘ಅಹಂ ಪರಂ’ ಕಿರುಚಿತ್ರ ಸಿದ್ಧವಾಗಿದೆ.

ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

ಇದನ್ನೂ ಓದಿ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ
‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ
ಮತ್ತೊಬ್ಬರ ಸಂಕಟವನ್ನು ತಮಾಷೆ ಮಾಡುವ ಮೊದಲು Public Toilet ಕಿರುಚಿತ್ರ ನೋಡಿ

ಈ ಕಿರುಚಿತ್ರಗಳನ್ನು ನೋಡಿ ನಿರ್ದೇಶಕ ಗಿರಿರಾಜ್​ ಅವರು ಬೆನ್ನು ತಟ್ಟಿದ್ದಾರೆ. ‘ಇಂದಿನ ಯುವಕರಿಗೆ ಶಾರ್ಟ್ ಫಿಲ್ಮ್​ಗಳು ಒಂದು ಒಳ್ಳೆಯ ವೇದಿಕೆ ಆಗುತ್ತಿದೆ. ಯುವಕರ ಪ್ರಯತ್ನಗಳಿಗೆ ಸತ್ಯ ಹೆಗಡೆ ಸ್ಟುಡಿಯೋಸ್ ಸಾಕಷ್ಟು ಸಹಾಯ ಮಾಡುತ್ತಿದೆ. ನಮ್ಮ ಕಾಲದಲ್ಲಿ ಇಂತಹ ಅವಕಾಶ ಇರಲಿಲ್ಲ. ಈ ಮೂರು ಕಿರುಚಿತ್ರಗಳು ಚೆನ್ನಾಗಿ ಮೂಡಿಬಂದಿವೆ. ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಯುವ ಪ್ರತಿಭೆಗಳಿಗೆ ಶುಭವಾಗಲಿ’ ಎಂದು ಗಿರಿರಾಜ್​ ವಿಶ್ ಮಾಡಿದ್ದಾರೆ.

ಇದನ್ನೂ ಓದಿ: ‘ಕ್ರಿಕೆಟರ್​ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ

‘ನಾನು ಸಹ ಕಿರುಚಿತ್ರಗಳಲ್ಲಿ ನಟಿಸಿದವನು. ನಾವು ಶಾರ್ಟ್ ಫಿಲ್ಮ್​ ಮಾಡುವಾಗ ಸತ್ಯ ಹೆಗಡೆ ರೀತಿ ಯಾರ ಬೆಂಬಲವೂ ಸಿಕ್ಕಿರಲಿಲ್ಲ. ಆದರೆ ಈಗಿನವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಇಂತಹ ಅವಕಾಶ ಇನ್ನಷ್ಟು ಯುವ ಜನರಿಗೆ ಸಿಗಬೇಕು. ಅದರಿಂದ ಒಳ್ಳೆಯ ಚಿತ್ರಗಳು ತಯಾರಾಗಬೇಕು’ ಎಂದು ನಟ ನವೀನ್​ ಶಂಕರ್ ಆಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:26 pm, Mon, 13 March 23