AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ 09, ರಾತ್ರಿ 10 ಗಂಟೆ: ಆ ಘಟನೆ ನೆನಪಿಸಿಕೊಂಡ ನಟಿ ಶಾನ್ವಿ

ಡಿಸೆಂಬರ್ 08 ಶಾನ್ವಿ ಶ್ರೀವಾಸ್ತವ ಹುಟ್ಟುಹಬ್ಬ, ಕಳೆದ ವರ್ಷವೂ ಶಾನ್ವಿ ಶ್ರೀವಾಸ್ತವ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು ಆದರೆ ಅದಾದ ಮರುದಿನ ನಡೆದ ಘಟನೆ ಶಾನ್ವಿ ಜೀವನವನ್ನು ನೋಡುವ ದಿಕ್ಕನ್ನೆ ಬದಲು ಮಾಡಿತು, ಏನದು ಘಟನೆ?

ಡಿಸೆಂಬರ್ 09, ರಾತ್ರಿ 10 ಗಂಟೆ: ಆ ಘಟನೆ ನೆನಪಿಸಿಕೊಂಡ ನಟಿ ಶಾನ್ವಿ
ಮಂಜುನಾಥ ಸಿ.
|

Updated on: Jul 14, 2024 | 2:54 PM

Share

ಶಾನ್ವಿ ಶ್ರೀವಾಸ್ತವ್ ಕನ್ನಡದ ಜನಪ್ರಿಯ ಸಿನಿಮಾ ನಟಿಯರಲ್ಲಿ ಒಬ್ಬರು. ಯಶ್, ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ನಟಿಸಿ ಸೈ ಎನಿಸಿಕೊಂಡಿರುವ ಶಾನ್ವಿ ಶ್ರೀವಾಸ್ತವ್ ಕನ್ನಡ ಮಾತ್ರವೇ ಅಲ್ಲದೆ ತೆಲುಗು, ಮಲಯಾಳಂ, ಮರಾಠಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ, ನಟಿಸುತ್ತಿದ್ದಾರೆ. 30ರ ಆಸು-ಪಾಸಿನಲ್ಲಿರುವ ಶಾನ್ವಿ ಶ್ರೀವಾಸ್ತವ್ ಕಳೆದ ವರ್ಷ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದರ ಬಗ್ಗೆ ರ್ಯಾಪಿಡ್ ರಶ್ಮಿಯವರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆ ದಿನ ತಮ್ಮ ಜೀವನದ ಅತ್ಯಂತ ಮಹತ್ವದ ದಿನವಾಗಿತ್ತು ಎಂಬುದನ್ನು ಸಹ ಶಾನ್ವಿ ಹೇಳಿದ್ದಾರೆ.

ಡಿಸೆಂಬರ್ 08 ಶಾನ್ವಿ ಶ್ರೀವಾಸ್ತವ್ ಹುಟ್ಟುಹಬ್ಬ ಅದಾದ ಮರುದಿನ ಶಾನ್ವಿಗೆ ಜೀವನದಲ್ಲಿ ಮಹತ್ವದ ಸಂಗತಿಯೊಂದರ ಬಗ್ಗೆ ಜ್ಞಾನೋದವಯವಾಯ್ತಂತೆ. ಕಳೆದ ವರ್ಷ ಡಿಸೆಂಬರ್ 09ರಂದು ಇದ್ದಕ್ಕಿದ್ದಂತೆ ಶಾನ್ವಿಗೆ ಅವರ ಕಿಬ್ಬೊಟ್ಟೆಯಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತಂತೆ. ಒಂದು ಇಂಚು ಸಹ ಕದಲಲು ಸಾಧ್ಯವಿಲ್ಲದ ಸ್ಥಿತಿಗೆ ಶಾನ್ವಿ ತಲುಪಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪ್ರಾಥಮಿಕ ಪರೀಕ್ಷೆಯ ನಡೆಸಿದ ವೈದ್ಯರು, ಕೂಡಲೇ ಹೋಗಿ ಎಂಆರ್​ಐ, ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದಿದ್ದಾರೆ.

ಇದನ್ನು ಕೇಳಿದ ಶಾನ್ವಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಂಡಿರುವ ಅಸಾಧ್ಯ ನೋವಿನ ಮೂಲ ಕ್ಯಾನ್ಸರ್ ಆಗಿದೆಯೇ ಎಂಬ ಯೋಚನೆ ಅವರನ್ನು ಕಾಡಲಾರಂಭಿಸಿದೆ. ಅಯ್ಯೋ ನನಗೆ ಕ್ಯಾನ್ಸರ್ ಇದೆ ಎಂದಾದರೆ ಏನು ಕತೆ? ಅದರ ನೋವು, ಸತತ ಆಪರೇಷನ್​ಗಳು, ಕೀಮೋ ಥೆರಪಿಯ ಅಸಾಧ್ಯ ನೋವು, ಕೂದಲು ಉದುರುವುದು ಹೀಗೆ ಎಲ್ಲವೂ ಅವರ ಕಣ್ಮುಂದೆ ಒಂದು ಕ್ಷಣ ಹಾದು ಹೋಗಿದೆ. ನೋವು, ದುಗಡು, ಆತಂಕದಲ್ಲಿಯೇ ಶಾನ್ವಿ ಎಂಆರ್​ಐ ಸ್ಕ್ಯಾನ್ ಇತರೆ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮೈ ಚಳಿ ಬಿಟ್ಟು ಬೋಲ್ಡ್‌ ಅವತಾರದಲ್ಲಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ 

ಪರೀಕ್ಷೆಯ ವರದಿಗಳನ್ನು ವೈದ್ಯರಿಗೆ ಕಳಿಸಿದಾಗ, ಇದು ಕ್ಯಾನ್ಸರ್ ಅಲ್ಲ ಆದರೆ ನಿಮ್ಮ ಅಂಡಾಶಯದಲ್ಲಿ ಸಿಸ್ಟ್​ಗಳಾಗಿವೆ. ಅದರಲ್ಲಿ ಕೆಲವು ಒಡೆದಿವೆ ಅಂಡಾಶಯಕ್ಕೂ ಹಾನಿ ಆಗಿದೆ ಎಂದರಂತೆ. ಆದರೆ ಇದು ಕ್ಯಾನ್ಸರ್ ಅಲ್ಲ ಆದರೆ ಇದಕ್ಕೂ ದೀರ್ಘವಾಗಿ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ. ಅದರಂತೆ ಶಕ್ತಿಶಾಲಿ ಆಂಟಿಬಯೋಟಿಕ್​ಗಳು, ಇತರೆ ಔಷಧಗಳನ್ನು ಕಳೆದ ಡಿಸೆಂಬರ್​ನಿಂದಲೂ ಸೇವಿಸುತ್ತಿರುವುದಾಗಿ ಶಾನ್ವಿ ಹೇಳಿಕೊಂಡಿದ್ದಾರೆ. ಆ ಔಷಧಗಳಿಂದ ಕೆಲ ಸೈಡ್ ಎಫೆಕ್ಟ್​ಗಳನ್ನು ಸಹ ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ.

2012 ರಲ್ಲಿ ತೆಲುಗಿನ ‘ಲವ್​ಲಿ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶಾನ್ವಿ, ಕನ್ನಡದಲ್ಲಿ ಯಶ್​ರ ‘ಮಾಸ್ಟರ್ ಪೀಸ್’, ದರ್ಶನ್​ರ ‘ತಾರಕ್’, ಗಣೇಶ್ ಜೊತೆಗೆ ‘ಸುಂದರಾಂಗ ಜಾಣ’, ‘ಗೀತ’, ಶ್ರೀಮುರಳಿ, ಶಿವಣ್ಣರ ‘ಮಫ್ತಿ’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಕನ್ನಡದ ‘ತ್ರಿಶೂಲಂ’ ಮತ್ತು ಮಲಯಾಳಂನ ‘ರಾಂಟಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ