ಟಾಲಿವುಡ್ ನಟ ರಾಜ್ ತರುಣ್ ಪ್ರೇಯಸಿಯ ಹೈಡ್ರಾಮಾ, ಪೊಲೀಸರ ಮಧ್ಯ ಪ್ರವೇಶ

ಟಾಲಿವುಡ್ ನಟ ರಾಜ್ ತರುಣ್ ವಿರುದ್ಧ ವಂಚನೆ ದೂರು ದಾಖಲಿಸಿರುವ ಅವರ ಮಾಜಿ ಪ್ರೇಯಸಿ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಆತ್ಮಹತ್ಯೆಯನ್ನು ತಡೆದಿದ್ದಾರೆ.

ಟಾಲಿವುಡ್ ನಟ ರಾಜ್ ತರುಣ್ ಪ್ರೇಯಸಿಯ ಹೈಡ್ರಾಮಾ, ಪೊಲೀಸರ ಮಧ್ಯ ಪ್ರವೇಶ
Follow us
|

Updated on: Jul 14, 2024 | 8:08 AM

ತೆಲುಗು ಚಿತ್ರರಂಗದ ನಟ ರಾಜ್ ತರುಣ್ ಕಳೆ ಒಂದು ವಾರದಿಂದಲೂ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಗರ್ಲ್​ಫ್ರೆಂಡ್. ರಾಜ್ ತರುಣ್​ ಅವರ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ದೂರು ನೀಡಿದ್ದು, ರಾಜ್​ ಅನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಲಾವಣ್ಯ ಅವರ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ.

ಲಾವಣ್ಯ ಶನಿವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು ಸೂಕ್ತ ಸಮಯಕ್ಕೆ ಪೊಲೀಸರು ಮಧ್ಯ ಪ್ರವೇಶಿಸಿ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ತಮ್ಮ ವಕೀಲರನ್ನು ಭೇಟಿ ಆಗಿದ್ದ ಲಾವಣ್ಯ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್, ನಟ ರಾಜ್ ತರುಣ್, ತಮ್ಮ ವಿರುದ್ಧ ಮಾಡುತ್ತಿರುವ ಷಡ್ಯಂತ್ರ ಇನ್ನಿತರೆಗಳಿಂದ ಬೇಸತ್ತಿರುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ ಸಾವೇ ತಮಗೆ ಕೊನೆಯ ದಾರಿ ಎಂದು ಸಹ ಹೇಳಿಕೊಂಡಿದ್ದರಂತೆ.

ಅದೇ ದಿನ ರಾತ್ರಿ ವಕೀಲರಿಗೆ ಸಂದೇಶ ಕಳಿಸಿದ್ದ ಲಾವಣ್ಯ, ‘ಈ ಪ್ರಪಂಚದಲ್ಲಿ ನನ್ನ ದಿನಗಳು ಅಂತ್ಯವಾದವು’, ‘ಈ ಮೈಂಡ್ ಗೇಮ್, ಗಾಸಿಪ್​ಗಳಿಂದ ನನಗೆ ಸಾಕಾಗಿ ಹೋಗಿದೆ’ ಎಂದೆಲ್ಲ ಸಂದೇಶಗಳನ್ನು ಕಳಿಸಿದ್ದರಂತೆ. ಕೂಡಲೇ ಲಾವಣ್ಯರ ವಕೀಲರು ನರಸಂಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಲಾವಣ್ಯರ ಮನೆಗೆ ಧಾವಿಸಿದ ಪೊಲೀಸರು ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಟಾಲಿವುಡ್ ನಟ ರಾಜ್ ತರುಣ್ ವಿರುದ್ಧ ಎಫ್​ಐಆರ್, ಬಂಧನ ಸಾಧ್ಯತೆ

ನಟ ರಾಜ್ ತರುಣ್ ವಿರುದ್ಧ ಆರೋಪ ಮಾಡಿರುವ ಲಾವಣ್ಯ, ತಾವು ಹಾಗೂ ರಾಜ್, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರೇಮಿಗಳಾಗಿದ್ದು, ಆದರೆ ಇತ್ತೀಚೆಗೆ ರಾಜ್, ಬೇರೆ ನಟಿಯೊಂದಿಗೆ ಪ್ರೇಮಕ್ಕೆ ಬಿದ್ದು, ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತಮ್ಮೊಂದಿಗೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರೆ ಎಂದೆಲ್ಲ ಲಾವಣ್ಯ ಆರೋಪ ಮಾಡಿದ್ದಾರೆ. ನರ್ಸಂಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜ್ ವಿರುದ್ಧ ದೂರು ಸಹ ದಾಖಲಾಗಿದೆ.

ರಾಜ್ ತರುಣ್ ಟಾಲಿವುಡ್​ನಲ್ಲಿ ಕಳೆದ ಹತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಲಾವಣ್ಯ ಹೇಳುತ್ತಿರುವಂತೆ, ರಾಜ್ ನಟಿಸುತ್ತಿರುವ ‘ತಿರುಗಬಡರಾ ಸ್ವಾಮಿ’ ಸಿನಿಮಾದ ನಟಿಯೊಟ್ಟಿಗೆ ರಾಜ್ ಪ್ರೇಮಕ್ಕೆ ಬಿದ್ದಿದ್ದಾರಂತೆ. ಅದರಂತೆ ‘ತಿರುಗಬಡರಾ ಸ್ವಾಮಿ’ ಸಿನಿಮಾದ ನಟಿ, ಲಾವಣ್ಯ ವಿರುದ್ಧ ದೂರು ನೀಡಿದ್ದು, ಲಾವಣ್ಯ, ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ