AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಶಿವಣ್ಣನೊಂದಿಗೆ ಕೈ ಜೋಡಿಸಿದ ‘ಕಿಲ್ಲಿಂಗ್ ವೀರಪ್ಪನ್’ ನಿರ್ಮಾಪಕ

ಈ ಹಿಂದೆ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ನಿರ್ಮಾಣ ಮಾಡಿದ್ದ ಸುಧೀರ್ ಈಗ ಮತ್ತೊಮ್ಮೆ ಶಿವರಾಜ್ ಕುಮಾರ್ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಕಳೆದ ಬಾರಿ ತೆಲುಗಿನಿಂದ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆತಂದಿದ್ದ ಸುಧೀರ್ ಈ ಬಾರಿ ತಮಿಳಿನಿಂದ ನಿರ್ದೇಶಕನ ಕರೆ ತಂದಿದ್ದಾರೆ.

ಮತ್ತೆ ಶಿವಣ್ಣನೊಂದಿಗೆ ಕೈ ಜೋಡಿಸಿದ ‘ಕಿಲ್ಲಿಂಗ್ ವೀರಪ್ಪನ್’ ನಿರ್ಮಾಪಕ
ಮಂಜುನಾಥ ಸಿ.
|

Updated on: Jul 13, 2024 | 9:31 PM

Share

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿ ಶಿವರಾಜ್ ಕುಮಾರ್ ನಟಿಸಿದ್ದ ‘ಕಿಲ್ಲಿಂಗ್ ವೀರಪ್ಪನ್’ ಯಾರಿಗೆ ನೆನಪಿಲ್ಲ. ಶಿವಣ್ಣ ಆ ಸಿನಿಮಾದಲ್ಲಿ ಟೀ ಕಪ್ ಹಿಡಿದಿದ್ದ ರೀತಿಯೇ ಸಖತ್ ಟ್ರೆಂಡ್ ಆಗಿ ಹೋಗಿತ್ತು, ಆ ನಂತರ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಆ ಸಿನಿಮಾದಲ್ಲಿ ರಾಮ್ ಗೋಪಾಲ್ ವರ್ಮಾ ಹಾಗೂ ಶಿವಣ್ಣನನ್ನು ಒಟ್ಟಿಗೆ ಸೇರಿಸಿದ್ದ ನಿರ್ಮಾಪಕ ಸುಧೀರ್ ಈಗ ಮತ್ತೊಮ್ಮೆ ಶಿವಣ್ಣನ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಾರಿಯೂ ಸಹ ವಿಶೇಷ ತಂಡದೊಟ್ಟಿಗೆ ಹಾಗೂ ಕತೆಯನ್ನು ಹುಡುಕಿಕೊಂಡು ಸುಧೀರ್ ಬಂದಿದ್ದಾರೆ. ಶಿವಣ್ಣನ 131 ನೇ ಸಿನಿಮಾವನ್ನು ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ. ಕಳೆದ ಬಾರಿ ತೆಲುಗಿನ ರಾಮ್ ಗೋಪಾಲ್ ವರ್ಮಾ ಅವರನ್ನು ಕನ್ನಡಕ್ಕೆ ತಂದಿದ್ದರೆ ಈ ಬಾರಿ ತಮಿಳಿನ ನಿರ್ದೇಶಕನನ್ನು ಶಿವಣ್ಣನಿಗಾಗಿ ಕರೆತಂದಿದ್ದಾರೆ. ತಮಿಳಿನ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ದೊಡ್ಮನೆ ದೊರೆಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಶಿವಣ್ಣನ ಜನ್ಮದಿನದಂದು ಅವರ ನಟನೆಯ 131ನೇ ಸಿನಿಮಾದ ಮೊದಲ ತುಣುಕು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್ ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋ ಇಂಟ್ರೂಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುತ್ತಿರುವ ದೃಶ್ಯವನ್ನು ವಿಡಿಯೋನಲ್ಲಿ ತೋರಿಸಲಾಗಿದೆ. ಆದರೆ ಶಿವಣ್ಣ ವಿಡಿಯೋದಲ್ಲಿ ತೋರಿಸಲಾಗಿಲ್ಲ. ‘ಐ ಆಮ್ ಕಮಿಂಗ್’ ಎನ್ನುವ ಕರುನಾಡ ಕಿಂಗ್ ನ ಫೋಟೋ ಬಿಟ್ಟು ಚಿತ್ರತಂಡ ಥ್ರಿಲ್ ಹೆಚ್ಚಿಸಿದೆ. ಚಂಡಮಾರುತ ಮೊದಲ ಮೌನ ಎಂಬ ಅಡಿಬರಹದೊಂದಿಗೆ ಶಿವಣ್ಣನ 131ನೇ ಚಿತ್ರದ ವಿಡಿಯೋ ಝಲಕ್ ಬಿಡುಗಡೆ ಮಾಡಲಾಗಿದ್ದು, ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ

ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಗೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಭಿನ್ನ ಲುಕ್​ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಇತರ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳು ಎದುರು ನೋಡುತ್ತಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ನಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಶಿವಣ್ಣ ನಟನೆಯ ‘ಭೈರತಿ ರಣಗಲ್’ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ‘45’ ಸಿನಿಮಾ ಸಹ ತೆರೆಗೆ ಬರಲಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನದಲ್ಲಿ ಶಿವಣ್ಣ ನಟಿಸಲಿದ್ದು ಈ ಸಿನಿಮಾದ ಚಿತ್ರೀಕರಣ ಇನ್ನೇನು ಪ್ರಾರಂಭ ಆಗಬೇಕಿದೆ. ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಜೊತೆಗೆ ಹೊಸದೊಂದು ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ಇನ್ನೂ ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ