ಶಿವಣ್ಣ-ಉಪೇಂದ್ರರ ಸಿನಿಮಾ ತಂಡ ಸೇರಿದ ಹಾಲಿವುಡ್ ತಂತ್ರಜ್ಞರು
Shiva Rajkumar: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿ, ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ‘45’ ಸಿನಿಮಾಕ್ಕೆ ಹಾಲಿವುಡ್ ತಂತ್ರಜ್ಞರು ವಿಎಫ್ಎಕ್ಸ್ ಒದಗಿಸಲಿದ್ದಾರೆ. ಹಲವು ಟಾಪ್ ಹಾಲಿವುಡ್ ಸಿನಿಮಾ, ವೆಬ್ ಸರಣಿಗಳಿಗೆ ಕೆಲಸ ಮಾಡಿರುವ ಸಂಸ್ಥೆಯೊಂದರೊಟ್ಟಿಗೆ ಒಪ್ಪದ ಮಾಡಿಕೊಂಡಿದ್ದಾರೆ ಅರ್ಜುನ್ ಜನ್ಯ.
ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಟ-ನಿರ್ದೇಶಕ ಜೋಡಿ. ಇವರು ನೀಡಿರುವ ‘ಓಂ’ ಸಿನಿಮಾ ಕನ್ನಡ ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು. ನಿರ್ದೇಶಕ ಮತ್ತು ನಟರಾಗಿ ಮಾತ್ರವೇ ಅಲ್ಲದೆ, ಕೇವಲ ನಟರಾಗಿಯೂ ಸಹ ಶಿವಣ್ಣ-ಉಪೇಂದ್ರ ಜೋಡಿ ಕೆಲ ಬಹಳ ಒಳ್ಳೆ ಸಿನಿಮಾಗಳನ್ನು ನೀಡಿದೆ. ‘ಪ್ರೀತ್ಸೆ’, ‘ಲವ ಕುಶ’ ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಾರೆ. ಉಪೇಂದ್ರ ಅವರ ‘ಕಬ್ಜ’ ಸಿನಿಮಾನಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ‘45’ ಸಿನಿಮಾನಲ್ಲಿ. ಈ ಸಿನಿಮಾನಲ್ಲಿ ಇವರಿಬ್ಬರ ಜೊತೆಗೆ ರಾಜ್ ಬಿ ಶೆಟ್ಟಿ ಸಹ ಸೇರಿಕೊಂಡಿದ್ದಾರೆ.
ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸುತ್ತಿರುವ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಜನ್ಯ ಅವರ ಮೊದಲ ನಿರ್ದೇಶನದ ಸಿನಿಮಾ ಇದು. ಸಿನಿಮಾವನ್ನು ತಾಂತ್ರಿಕವಾಗಿ ರಿಚ್ ಆಗಿರುವಂತೆ ಜನ್ಯ ನೋಡಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಮುನ್ನವೇ ಕತೆಯನ್ನು ಕಾರ್ಟೂನ್ ರೂಪದಲ್ಲಿ ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದರಂತೆ. ಇದೀಗ ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ರಿಚ್ ಮಾಡಲು ಹಾಲಿವುಡ್ಗೆ ಹಾರಿದ್ದಾರೆ ಅರ್ಜುನ್ ಜನ್ಯ.
‘45’ ಸಿನಿಮಾದ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಜಾರಿಯಲ್ಲಿದೆ. ಸಿನಿಮಾದ ವಿಎಫ್ಎಕ್ಸ್ ಕೆಲಸವನ್ನು ಹಾಲಿವುಡ್ನ ನುರಿತ ತಜ್ಞರಿಂದ ಮಾಡಿಸಲು ಅರ್ಜುನ್ ಜನ್ಯ ಮುಂದಾಗಿದ್ದಾರೆ. ಹಾಲಿವುಡ್ನ ಹಲವು ಸಿನಿಮಾಗಳಿಗೆ ವಿಎಫ್ಎಕ್ಸ್ ಮತ್ತು ಗ್ರಾಫಿಕ್ಸ್ ಕೆಲಸ ಮಾಡಿರುವ ಮಾರ್ಜ್ (MARZ) ಅನ್ನು ಸಂಪರ್ಕ ಮಾಡಿರುವ ಅರ್ಜುನ್ ಜನ್ಯ. ‘45’ ಸಿನಿಮಾದ ವಿಎಫ್ಎಕ್ಸ್ ಕೆಲಸವನ್ನು ಸಂಸ್ಥೆಯ ನುರಿತ ತಂತ್ರಜ್ಞರಾದ ಮಿಸ್ಟರ್ ರಾಫೆಲ್ ಹಾಗೂ ಮಿಸ್ಟರ್ ಜಸ್ಟಿನ್ ಅವರ ನೇತೃತ್ವದಲ್ಲಿ ಮಾಡಿಸುತ್ತಿದೆ.
ಇದನ್ನೂ ಓದಿ:‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಹಾಲಿವುಡ್ನ ಜನಪ್ರಿಯ ಸಿನಿಮಾಗಳಾದ ‘ಸ್ಪೈಡರ್ಮ್ಯಾನ್ ನೋ ವೇ ಹೋಮ್’, ‘ಆಂಟ್ಮ್ಯಾನ್’, ‘ವಾಂಡಾ ವಿಷನ್’, ‘ಮೂನ್ ಲೈಟ್’, ‘ವೆಡ್ನಸ್ ಡೇ’, ‘ಸ್ಟ್ರೇಂಜರ್ ಥಿಂಗ್ಸ್ 4’, ‘ಫ್ಯಾಂಟಸಿ ಐಲೆಂಡ್’ ಇನ್ನೂ ಹಲವಾರು ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸರಣಿಗಳಿಗೆ ಈ ಸಂಸ್ಥೆ ಕೆಲಸ ಮಾಡಿದೆ. ಕೆಲವು ಆಸ್ಕರ್ ನಾಮಿನೇಷನ್ಗಳನ್ನು ಸಹ ಈ ಸಂಸ್ಥೆ ಪಡೆದುಕೊಂಡಿದೆ.
‘45’ ಸಿನಿಮಾದ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ಚಿತ್ರತಂಡ ಮುಗಿಸಿದೆ. ಮೂವರು ಚಾಲಾಕಿ ಕಳ್ಳರ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ನಾಯಕಿಯರ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಸಿನಿಮಾದಲ್ಲಿ ನಾಯಕಿಯರು ಇಲ್ಲ ಎನ್ನಲಾಗುತ್ತಿದೆ. ಸಿನಿಮಾ ಜನವರಿ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ