Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಹೆಸರಿನವರಿಗೆ ರಾಜಯೋಗವಿದೆ, ಆ ಹೆಸರಿನವರು ಎಂದಿಗೂ ರಾಜರೇ: ಶಿವರಾಜ್ ಕುಮಾರ್ ಹೇಳಿದ್ದು ಯಾರ ಬಗ್ಗೆ?

Jailer: ರಜನೀಕಾಂತ್ ನಟನೆಯ 'ಜೈಲರ್' ಸಿನಿಮಾದಲ್ಲಿ ತಮ್ಮ ಅತಿಥಿ ಪಾತ್ರಕ್ಕೆ ಭಾರಿ ಜನಮನ್ನಣೆ ಸಿಗುತ್ತಿರುವ ಬಗ್ಗೆ ನಟ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಆ ಅಕ್ಷರದ ಹೆಸರಿರುವವರಿಗೆ ರಾಜಯೋಗವಿದೆ ಎಂಬ ಭವಿಷ್ಯವನ್ನೂ ನುಡಿದಿದ್ದಾರೆ.

ಆ ಹೆಸರಿನವರಿಗೆ ರಾಜಯೋಗವಿದೆ, ಆ ಹೆಸರಿನವರು ಎಂದಿಗೂ ರಾಜರೇ: ಶಿವರಾಜ್ ಕುಮಾರ್ ಹೇಳಿದ್ದು ಯಾರ ಬಗ್ಗೆ?
ರಜನೀಕಾಂತ್-ಶಿವರಾಜ್ ಕುಮಾರ್
Follow us
ಮಂಜುನಾಥ ಸಿ.
|

Updated on: Aug 12, 2023 | 8:07 PM

ರಜನೀಕಾಂತ್, (Rajinikanth) ಶಿವರಾಜ್ ಕುಮಾರ್ (Shiva Rajkumar) ಒಟ್ಟಿಗೆ ನಟಿಸಿರುವ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆ ಆಗಿದ್ದು ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಕೇವಲ ಎರಡು ದಿನಕ್ಕೆ ನೂರು ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದ್ದು 200 ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿದೆ. ಸಿನಿಮಾದಲ್ಲಿ ರಜನೀಕಾಂತ್​ರಷ್ಟೆ ಶಿವರಾಜ್ ಕುಮಾರ್ ಪಾತ್ರವೂ ಜನರನ್ನು ಸೆಳೆದಿದೆ. ಸಣ್ಣ ಅತಿಥಿ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರಾದರೂ ಅದರ ಪರಿಣಾಮ ದೊಡ್ಡದಾಗಿಯೇ ಆಗಿದೆ. ‘ಜೈಲರ್‘ (Jailer) ಸಿನಿಮಾದ ಭಾರಿ ದೊಡ್ಡ ಯಶಸ್ಸು ಹಾಗೂ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರೀತಿಯ ಬಗ್ಗೆ ಶಿವರಾಜ್ ಕುಮಾರ್, ಟಿವಿ9 ಜೊತೆ ಮಾತನಾಡಿದ್ದಾರೆ.

‘ರಜನೀಕಾಂತ್​ಗಿಂತಲೂ ನಿಮ್ಮನ್ನು ನೋಡಲೆಂದೇ ಜನ ಥಿಯೇಟರ್​ಗೆ ಬರುತ್ತಿದ್ದಾರೆ’ ಎಂದಿದ್ದಕ್ಕೆ ಮುಜುಗರದಿಂದಲೇ ಉತ್ತರಿಸಿದ ಶಿವಣ್ಣ ”ಅಯ್ಯೋ ಹಾಗನ್ನಬೇಡಿ, ನಮಗೆ ರಜನೀಕಾಂತ್ ಅವರನ್ನು ನೋಡುವುದೆಂದರೆ ಖುಷಿ, ಆಸೆ, ಇನ್ನು ಅವರ ಅಭಿಮಾನಿಗಳಿಗೆ ಹೇಗಿರಬೇಡ. ಅವರು ಈ ವಯಸ್ಸಿನಲ್ಲಿಯೂ ಶಕ್ತಿ ಇಟ್ಟುಕೊಂಡು ಪಾತ್ರಗಳನ್ನು ಮಾಡುತ್ತಿದ್ದಾರೆ. ಅವರಿಗೆ ಮಾತ್ರವೇ ಸಾಧ್ಯ, ಅಪ್ಪಾಜಿ ಇದ್ದರು ಅವರೂ ಸಹ ವಯಸ್ಸಾದರೂ ಸಿನಿಮಾಗಳಲ್ಲಿ ಮಾಡುತ್ತಿದ್ದರು. ರಜನೀ-ರಾಜ್​ಕುಮಾರ್ ಇಬ್ಬರ ಹೆಸರೂ ಆರ್​ ಇಂದ ಪ್ರಾರಂಭವಾಗುತ್ತದೆ. ಅವರಿಗೆ ರಾಜಯೋಗವಿದೆ. ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವೆರೆಲ್ಲ ರಾಜರೇ” ಎಂದಿದ್ದಾರೆ ಶಿವರಾಜ್ ಕುಮಾರ್.

”ರಜನೀಕಾಂತ್ ಅವರೊಟ್ಟಿಗೆ ನಟಿಸಲು ಸಾಧ್ಯವಾಗಿದ್ದೇ ನಮ್ಮ ಪುಣ್ಯ ಎಂದು ನಾನು ಭಾವಿಸುತ್ತೇನೆ. ಅತಿಥಿ ಪಾತ್ರ ಮಾಡಿ, ಅವರೊಟ್ಟಿಗೆ ತೆರೆ ಹಂಚಿಕೊಂಡಿದ್ದು ನನಗೆ ಬಹಳ ಖುಷಿ, ಅದನ್ನು ನೋಡಿ ಜನ ಖುಷಿ ಪಡುತ್ತಿದ್ದಾರಲ್ಲ ಅದು ನನಗೆ ಇನ್ನೂ ಖುಷಿ ಕೊಟ್ಟಿದೆ. ಜನರ ಈ ಖುಷಿ ಹೀಗೆಯೇ ಮುಂದುವರೆಸಿಕೊಂಡು ಹೋಗಬೇಕು ಎಂಬುದೇ ನನ್ನ ಆಸೆ. ಆ ಖುಷಿ ಪಾಸಿಟಿವ್ ಆಗಿ ಎಲ್ಲೆಡೆ ಹಬ್ಬಬೇಕು ಆಗಷ್ಟೆ ನಮಗೂ ಖುಷಿ ಇರುತ್ತದೆ” ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ:ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದ ‘ಜೈಲರ್’ ಸಿನಿಮಾ; ಮೊದಲ ದಿನದ ಕಲೆಕ್ಷನ್ ವಿವರ ಇಲ್ಲಿದೆ

‘ತಮಿಳುನಾಡಿನ ಸಿನಿಮಾ ಪ್ರೇಮಿಗಳು ಶಿವರಾಜ್ ಕುಮಾರ್ ಅವರನ್ನು ನಮಗೆ ಕೊಟ್ಟುಬಿಡಿ ಎನ್ನುತ್ತಿದ್ದಾರಲ್ಲ?’ ಎಂಬ ಪ್ರಶ್ನೆಗೆ ”ಅದೆಲ್ಲ ದೊಡ್ಡ ಮಾತು, ನಾವು ಎಲ್ಲೆ ಇದ್ದರೂ ನಾವು ಭಾರತೀಯರು, ಭಾರತದವರೆಲ್ಲರೂ ಒಂದೇ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಉತ್ತರ ಭಾರತವೇ ಆಗಲಿ ಆ ಹೆಮ್ಮೆ ಭಾರತಕ್ಕೆ ಸೇರುತ್ತದೆಯೇ ಹೊರತು ವ್ಯಕ್ತಿಗಳಿಗೆ ಅಲ್ಲ ಅಥವಾ ಒಂದು ರಾಜ್ಯಕ್ಕೆ ಸೀಮಿತ ಅಲ್ಲ. ಎಲ್ಲರೂ ನಮ್ಮ ಜನ, ಎಲ್ಲರೂ ಭಾರತೀಯರು ಅಷ್ಟೆ. ಅಲ್ಲದೆ ಕಲೆಗೆ ಭಾಷೆ ಇರಬಾರದು ಎಂಬುದೇ ನನ್ನ ಅಭಿಪ್ರಾಯ” ಎಂದರು.

ಟಿಶ್ಯೂ ಕೊಡೋ ಸೀನ್ ಆಗಿರಲಿ, ಎಂಟ್ರಿ ಸೀನ್​ಗಳು ಸಖತ್ ಟ್ರೆಂಡ್ ಆಗುತ್ತಿವೆ ಎಂಬುದಕ್ಕೆ, ”ನೀವೆಲ್ಲ ಹೇಳುತ್ತಿರುವಾಗಲೇ ನನಗೆ ಅದೆಲ್ಲ ಗೊತ್ತಾಗುತ್ತಿದೆ. ನಾನು ಈಗ ಸಿನಿಮಾ ನೋಡಲು ಬಂದಿದ್ದೇನೆ. ಅದನ್ನೆಲ್ಲ ನಾನು ಮಾಡಿದ್ದಲ್ಲ, ನಿರ್ದೇಶಕರು ನನ್ನಿಂದ ಮಾಡಿಸಿದ್ದು, ಅಷ್ಟೆಲ್ಲ ಚೆನ್ನಾಗಿ ಬಂದಿದೆ ಎಂದರೆ ಅದರಲ್ಲಿ ಎಲ್ಲರ ಶ್ರಮವೂ ಸೇರಿದೆ” ಎಂದು ವಿನಯದಿಂದ ಹೇಳಿದರು ಶಿವಣ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ