ಕೃಷ್ಣ ಅವರಿಗೆ ದೊಡ್ಮನೆಯೊಟ್ಟಿಗೆ ಇದ್ದ ಬಾಂಧವ್ಯ ವಿವರಿಸಿದ ಶಿವಣ್ಣ

Shiva Rajkumar: ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರು ಇಂದು ನಿಧನ ಹೊಂದಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ನಡುವೆಯೂ ಸಹ ಕೃಷ್ಣ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೊಡ್ಮನೆಯೊಟ್ಟಿಗೆ ಕೃಷ್ಣ ಅವರಿಗೆ ಇದ್ದ ಸಂಬಂಧದ ಬಗ್ಗೆ ಮಾತನಾಡಿದರು.

ಕೃಷ್ಣ ಅವರಿಗೆ ದೊಡ್ಮನೆಯೊಟ್ಟಿಗೆ ಇದ್ದ ಬಾಂಧವ್ಯ ವಿವರಿಸಿದ ಶಿವಣ್ಣ
ಶಿವರಾಜ್ ಕುಮಾರ್-ಕೃಷ್ಣ
Follow us
ಮಂಜುನಾಥ ಸಿ.
|

Updated on: Dec 10, 2024 | 3:14 PM

ಶಿವರಾಜ್ ಕುಮಾರ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಕೆಲವೇ ದಿನಗಳಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅನಾರೋಗ್ಯದ ನಡುವೆಯೂ ಶಿವಣ್ಣ, ಇಂದು (ಡಿಸೆಂಬರ್ 10) ನಿಧನರಾದ ಎಸ್​ಎಂ ಕೃಷ್ಣ ಅವರಿಗೆ ಅಂತಿಮ ದರ್ಶನಕ್ಕೆಂದು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೃಷ್ಣ ಅವರ ಬಗ್ಗೆ ಮಾತನಾಡಿದ ಶಿವಣ್ಣ, ದೊಡ್ಮನೆ ಕುಟುಂಬಕ್ಕೆ ಕೃಷ್ಣ ಅವರೊಟ್ಟಿಗೆ ಇರುವ ಬಾಂಧವ್ಯದ ಬಗ್ಗೆ ಮಾತನಾಡಿದರು. ರಾಜ್​ಕುಮಾರ್ ಅಪಹರಣದ ಸಮಯದಲ್ಲಿ ಕೃಷ್ಣ ಅವರು ನೀಡಿದ ನೆರವಿನ ಬಗ್ಗೆಯೂ ಮಾತನಾಡಿದರು.

‘ಕೃಷ್ಣ ಅವರೆಂದರೆ ತಂದೆಯವರಿಗೆ (ರಾಜ್​ಕುಮಾರ್) ಹಾಗೂ ನಮ್ಮ ಕುಟುಂಬಕ್ಕೆ ವಿಶೇಷ ಗೌರವ. ನಮ್ಮ ತಂದೆಯವರು ಯಾವಾಗಲೂ ಹೇಳುತ್ತಿದ್ದರು ಒಬ್ಬ ಸೊಫೆಸ್ಟಿಕೇಟೆಡ್ ವ್ಯಕ್ತಿಯೆಂದರೆ ಅದು ಎಸ್​ಎಂ ಕೃಷ್ಣ ರೀತಿಯಾಗಿರಬೇಕು ಎಂದು. ಶಿಸ್ತಿನ ಜೀವನ ನಡೆಸಿದರು, ಶಿಸ್ತಿನ ವ್ಯಕ್ತಿತ್ವ ಅವರದ್ದು. ಅಂತಹಾ ವ್ಯಕ್ತಿಗಳು ಬಹಳ ಅಪರೂಪ. ವೈಯಕ್ತಿಕವಾಗಿಯೂ ನಮಗೆ ಸಹ ಅವರೊಟ್ಟಿಗೆ ಬಹಳ ಆತ್ಮೀಯತೆ ಇತ್ತು. ಅವರ ಅಳಿಯ ಅವರೊಟ್ಟಿಗೂ ಆತ್ಮೀಯತೆ ಇತ್ತು, ಅವರ ಪತ್ನಿಯವರೊಟ್ಟಿಗೂ ಆತ್ಮೀಯತೆ ಇದೆ’ ಎಂದಿದ್ದಾರೆ ಶಿವರಾಜ್ ಕುಮಾರ್.

‘ಅಪ್ಪಾಜಿ ಅವರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಕೃಷ್ಣ ಅವರು ನೀಡಿದ ಸಹಾಯವನ್ನು ನಮ್ಮ ಕುಟುಂಬ ಎಂದಿಗೂ ಮರೆಯುವಂತಿಲ್ಲ. ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತವಾಗಿದ್ದಾರೆ. ವಯಸ್ಸಾಗಿತ್ತು ಎಂದೆಲ್ಲ ಹೇಳುತ್ತಾರೆ ಆದರೆ ಅಗಲಿದ ನೋವು ಅದನ್ನು ಇಲ್ಲ ಎಂದು ಹೇಳಲಾಗುವುದಿಲ್ಲ. ನೋವು ಆಗಿಯೇ ಆಗುತ್ತದೆ’ ಎಂದಿದ್ದಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ:http://ವೀರಪ್ಪನ್​ ಕಪಿಮುಷ್ಠಿಯಿಂದ ಅಣ್ಣಾವ್ರನ್ನು ಬಿಡಿಸಿ ತಂದರು ಕೃಷ್ಣ, ಆದರೆ…

ಡಾ ರಾಜ್​ಕುಮಾರ್ ಅವರ ಅಪಹರಣ ಆದ ಸಂದರ್ಭದಲ್ಲಿ ಎಸ್​ಎಂ ಕೃಷ್ಣ ಅವರು ಸಿಎಂ ಆಗಿದ್ದರು. ಆ ಸಮಯದಲ್ಲಿ ದೊಡ್ಮನೆ ಕುಟುಂಬದವರು ಬಹುತೇಕ ಪ್ರತಿದಿನವೂ ಸಿಎಂ ಅವರೊಟ್ಟಿಗೆ ಸಂಪರ್ಕದಲ್ಲಿದ್ದರು. ಡಾ ರಾಜ್​ಕುಮಾರ್ ಅವರನ್ನು ವೀರಪ್ಪನ್ ಸೆರೆಯಿಂದ ಬಿಡಿಸಿಕೊಂಡು ಬರಲು ಹಲವು ರೀತಿಯ ಪ್ರಯತ್ನಗಳನ್ನು ಕೃಷ್ಣ ಮಾಡಿದರು. 108 ದಿನಗಳ ಬಳಿಕ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ