Bhajarangi 2: ಅಭಿಮಾನಿಗಳೊಂದಿಗೆ ಭಜರಂಗಿ 2 ಚಿತ್ರ ವೀಕ್ಷಿಸಲಿರುವ ಶಿವಣ್ಣ; ಯಾವಾಗ ಮತ್ತು ಎಲ್ಲಿ? ಇಲ್ಲಿದೆ ಮಾಹಿತಿ
Shiva Rajkumar: ನಟ ಶಿವರಾಜ್ ಕುಮಾರ್ ಇದೇ ಭಾನುವಾರ (ನವೆಂಬರ್ 14)ರಂದು ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಕೊರೊನಾ ಎರಡನೇ ಅಲೆಯ ನಂತರ ‘ಕೋಟಿಗೊಬ್ಬ 3’, ‘ಸಲಗ’, ‘ಭಜರಂಗಿ 2’ ಚಿತ್ರಗಳು ಬಿಡುಗಡೆಯಾಗಿ ಚಿತ್ರರಂಗಕ್ಕೆ ಚೇತರಿಕೆ ನೀಡಿದ್ದವು. ಇವುಗಳಲ್ಲಿ ‘ಭಜರಂಗಿ 2’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸುವ ಹಂತದಲ್ಲಿರುವಾಗಲೇ, ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಅಲ್ಲಿಂದ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಕಳೆಗುಂದಿದ್ದವು. ಇದೀಗ ಮತ್ತೆ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಂದು ಹೊಸ ಚಿತ್ರಗಳೂ ಬಿಡುಗಡೆಯಾಗಿವೆ. ಈ ಮಧ್ಯೆ ‘ಭಜರಂಗಿ 2’ ಚಿತ್ರತಂಡದಿಂದ ಹೊಸ ಅಪ್ಡೇಟ್ ಬಂದಿದ್ದು, ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ‘ಭಜರಂಗಿ 2’ ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್ ಟ್ವಿಟರ್ನಲ್ಲಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಇದೇ ಭಾನುವಾರ (ನವೆಂಬರ್ 14) ಶಿವರಾಜ್ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ. ಇದು ಶಿವಣ್ಣನ ಅಭಿಮಾನಿಗಳಿಗೆ ಖುಷಿ ನೀಡಿದೆ.
ಜಯಣ್ಣ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿ, ‘ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಶಿವರಾಜ್ ಕುಮಾರ್ ಈ ಭಾನುವಾರದಂದು (ನವೆಂಬರ್ 14) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ’ ಎಂದು ತಿಳಿಸಿದೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ.
ಈ ಕುರಿತು ಚಿತ್ರತಂಡ ಹಂಚಿಕೊಂಡ ಮಾಹಿತಿ ಇಲ್ಲಿದೆ:
ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ
Hattrick Hero ಶಿವಣ್ಣ ? to watch #Bhajarangi2 with fans, This Sunday.
? Anupama Theatre, Gandhinagar.#Bhajarangi2 @NimmaShivanna @NimmaAHarsha @ArjunJanyaMusic #BhavanaMenon @dskcuts #JayannaBhogendra pic.twitter.com/hTJMFwnU3q
— Jayanna Films (@JayannaFilms) November 12, 2021
ಇತ್ತೀಚೆಗೆ ಟಿವಿ9ನೊಂದಿಗೆ ಮಾತನಾಡಿದ್ದ ಶಿವರಾಜ್ ಕುಮಾರ್, ಭಜರಂಗಿ 2 ಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ್ದರು. ‘‘ಈ ನೋವಿನಲ್ಲೂ ಅಭಿಮಾನಿಗಳು ಭಜರಂಗಿ 2 ನೋಡುತ್ತಿದ್ದಾರೆ. ನಮ್ಮ ಕಷ್ಟದಲ್ಲಿ ಅಭಿಮಾನಿಗಳು ಜೊತೆಯಾಗಿದ್ದಾರೆ. ಈ ಕಷ್ಟದ ಸಮಯದಲ್ಲೂ ಚಿತ್ರ ನೋಡಿ ನಮ್ಮ ಜೊತೆ ಅಭಿಮಾನಿಗಳು ನಿಂತಿದ್ದಾರೆ. ಪ್ರೇಕ್ಷಕರು ನಮಗೆ ನೀಡಿರುವ ಈ ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ’’ ಎಂದು ಶಿವರಾಜ್ ಕುಮಾರ್ ನುಡಿದಿದ್ದರು.
ಭಜರಂಗಿ 2 ಚಿತ್ರದಲ್ಲಿ ಭಾವನಾ ಮೆನನ್, ಶ್ರುತಿ, ಭಜರಂಗಿ ಲೋಕಿ, ಶಿವರಾಜ್ ಕೆ.ಆರ್. ಪೇಟೆ, ಚೆಲುವ ರಾಜು ಮೊದಲಾದವರು ನಟಿಸಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎ.ಹರ್ಷ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೂರನೇ ಚಿತ್ರ ಇದಾಗಿದೆ.
ಇದನ್ನೂ ಓದಿ:
Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್
Published On - 12:20 pm, Fri, 12 November 21




