ಸಂಚಿತ್​ಗೆ ವೆಲ್​ಕಮ್​ ಟು ‘S’​ ಗ್ರೂಪ್ ಎಂದ ಶಿವಣ್ಣ, ರವಿಚಂದ್ರನ್ ಬೇಸರ; ಪ್ರಿಯಾ ಕೊಟ್ರು ಉತ್ತರ

ಈ ಕಾರ್ಯಕ್ರಮದಲ್ಲಿ ಶಿವಣ್ಣ ಆಡಿದ ಮಾತು ಗಮನ ಸೆಳೆಯಿತು. ಇದಕ್ಕೆ ರವಿಚಂದ್ರನ್ ಬೇಸರ ಮಾಡಿಕೊಂಡರು. ಪ್ರಿಯಾ ಸುದೀಪ್ ಸಮಾಧಾನ ಆಗುವಂಥ ಉತ್ತರ ಕೊಟ್ಟರು.

ಸಂಚಿತ್​ಗೆ ವೆಲ್​ಕಮ್​ ಟು ‘S’​ ಗ್ರೂಪ್ ಎಂದ ಶಿವಣ್ಣ, ರವಿಚಂದ್ರನ್ ಬೇಸರ; ಪ್ರಿಯಾ ಕೊಟ್ರು ಉತ್ತರ
ಜಿಮ್ಮಿ ಲಾಂಚ್​ ಇವೆಂಟ್

Updated on: Jun 26, 2023 | 7:13 AM

ಕಿಚ್ಚ ಸುದೀಪ್ (Kichcha Sudeep) ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಜಿಮ್ಮಿ’ ಚಿತ್ರದ ಮೂಲಕ ಅವರು ಪರಿಚಯಗೊಳ್ಳುತ್ತಿದ್ದಾರೆ. ನಟನೆಯ ಜೊತೆಗೆ ನಿರ್ದೇಶನ ಕೂಡ ಅವರದೇ. ಈ ಚಿತ್ರಕ್ಕೆ ಸುದೀಪ್ ಪತ್ನಿ ಪ್ರಿಯಾ ಕೂಡ ನಿರ್ಮಾಪಕಿ. ಈಗಾಗಲೇ ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಮಾಡಲಾಗಿದೆ. ಇದಕ್ಕಾಗಿ ಅದ್ದೂರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್, ರವಿಚಂದ್ರನ್, ಸುದೀಪ್ (Sudeep) ಆಗಮಿಸಿದ್ದರು. ಸುದೀಪ್ ತಂದೆ-ತಾಯಿ ಕೂಡ ಆಗಮಿಸಿ ಆಶೀರ್ವಾದ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಿವಣ್ಣ ಆಡಿದ ಮಾತು ಗಮನ ಸೆಳೆಯಿತು. ಇದಕ್ಕೆ ರವಿಚಂದ್ರನ್ ಬೇಸರ ಮಾಡಿಕೊಂಡರು. ಪ್ರಿಯಾ ಸುದೀಪ್ ಸಮಾಧಾನ ಆಗುವಂಥ ಉತ್ತರ ಕೊಟ್ಟರು.

ವೆಲ್​ಕಮ್​ ಟು ಎಸ್ ಗ್ರೂಪ್ ಎಂದ ಶಿವಣ್ಣ

ವೇದಿಕೆ ಏರಿದ ಶಿವರಾಜ್​ಕುಮಾರ್ ಅವರು ಸಂಚಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಸಂಚಿತ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು. ಶಿವರಾಜ್​ಕುಮಾರ್, ಸಂಚಿತ್ ಹಾಗೂ ಸುದೀಪ್ ಎಲ್ಲರ ಹೆಸರೂ ಆರಂಭ ಆಗೋದು ‘ಎಸ್​’ನಿಂದ. ಹೀಗಾಗಿ, ‘ವೆಲ್​ಕಮ್​ ಟು ಎಸ್​ ಗ್ರೂಪ್’ ಎಂದರು ಶಿವಣ್ಣ. ಈ ಮಾತಿಗೆ ಸುದೀಪ್ ಮೆಚ್ಚುಗೆ ಸೂಚಿಸಿದರು.

ರವಿಚಂದ್ರನ್ ಏನಂದ್ರು?

‘ಶಿವಣ್ಣ ಹೇಳಿದ್ರು S ಗ್ರೂಪ್ ಅಂತ. R ಮಾತನಾಡೋದು ವೇಸ್ಟ್​. ಸಂಚಿತ್, ಸುದೀಪ್​ ಹೆಸರಲ್ಲಿ ‘ಆರ್​’ ಕೂಡ ಇಲ್ಲ’ ಎಂದರು. ‘ಆರ್​ ಅಕ್ಷರದಲ್ಲಿ ರಾಜ್​ಕುಮಾರ್ ಇದಾರೆ, ಇನ್ನೇನು ಬೇಕು’ ಎಂದರು ಶಿವಣ್ಣ. ಇದಕ್ಕೆ ಸಖತ್ ಚಪ್ಪಾಳೆ, ಸಿಳ್ಳೆ ಬಿತ್ತು.

ಇದನ್ನೂ ಓದಿ: Kichcha Sudeep: ‘K46’ ಟೀಸರ್​ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ ನಟ ಕಿಚ್ಚ ಸುದೀಪ್  

ಪ್ರಿಯಾ ಕೊಟ್ರು ಉತ್ತರ

ಪ್ರಿಯಾ ಅವರು ಸಂಚಿತ್ ಬಗ್ಗೆ ಮಾತನಾಡೋಕೆ ವೇದಿಕೆ ಏರಿದರು. ಈ ವೇಳೆ ಅವರು ‘ಎಸ್​ ಹಾಗೂ ಆರ್’ ಗ್ರೂಪ್ ಬಗ್ಗೆ ಮಾತನಾಡಿದರು. ಈ ಚಿತ್ರ ನಿರ್ಮಾಣ ಆಗುತ್ತಿರುವುದು ‘Supriyanvi Picture Studio’ ಮೂಲಕ. ‘ರವಿಚಂದ್ರನ್ ಅವರೇ Supriyanvi ಅಲ್ಲಿ ಎಸ್ ಹಾಗೂ ಆರ್​ ಎರಡೂ ಇದೆ’ ಎಂದರು. ಪ್ರಿಯಾ ಮಾತಿಗೂ ಎಲ್ಲರೂ ಮೆಚ್ಚುಗೆ ಸೂಚಿಸಿದರು.

ನಿರ್ದೇಶನದ ಜೊತೆ ನಟನೆ

ಲಹರಿ ಫಿಲ್ಸ್ಮ್ಸ್​, ವೇನಸ್ ಎಂಟರ್​ಟೇನರ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಮೂಲಕ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ ಸಂಚಿತ್. ಶೀಘ್ರವೇ ತಂಡದ ಇತರರ ಬಗ್ಗೆ ಮಾಹಿತಿ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Mon, 26 June 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us