125ನೇ ಚಿತ್ರದಲ್ಲಿ ಶಿವರಾಜ್​ಕುಮಾರ್​ ಡಿಫರೆಂಟ್​ ಲುಕ್​! ಶಿವರಾತ್ರಿ ದಿನವೇ ಸ್ಪೆಷಲ್​ ನ್ಯೂಸ್​

ಶಿವರಾತ್ರಿ ಹಬ್ಬದ ಪ್ರಯುಕ್ತ ‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅದರ ಫಸ್ಟ್​ ಲುಕ್​ ಕೂಡ ಬಹಿರಂಗ ಆಗಿದೆ.

125ನೇ ಚಿತ್ರದಲ್ಲಿ ಶಿವರಾಜ್​ಕುಮಾರ್​ ಡಿಫರೆಂಟ್​ ಲುಕ್​! ಶಿವರಾತ್ರಿ ದಿನವೇ ಸ್ಪೆಷಲ್​ ನ್ಯೂಸ್​
ಶಿವರಾಜ್​ಕುಮಾರ್​ ಹೊಸ ಸಿನಿಮಾ ವೇದ
Edited By:

Updated on: Mar 11, 2021 | 3:52 PM

ಕನ್ನಡದಲ್ಲಿ ನಟ ಶಿವರಾಜ್​ಕುಮಾರ್​ ಅವರು ಅತಿ ವೇಗದಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಪೂರೈಸುತ್ತ ಮುನ್ನುಗ್ಗುತ್ತಿರುವ ಅವರು ಈಗ 125ನೇ ಚಿತ್ರದ ಮೈಲಿಗಲ್ಲು ತಲುಪಿದ್ದಾರೆ. ಶಿವರಾತ್ರಿ ಹಬ್ಬದ ವಿಶೇಷ ದಿನದಂದು ಅವರು ತಮ್ಮ 125ನೇ ಸಿನಿಮಾ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ.

125ನೇ ಚಿತ್ರಕ್ಕೆ ‘ವೇದ’ ಶೀರ್ಷಿಕೆ
ಶಿವಣ್ಣನ 125ನೇ ಸಿನಿಮಾಗೆ ‘ವೇದ’ ಎಂದು ಟೈಟಲ್​ ಇಡಲಾಗಿದೆ. ಮಾ.11ರಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಅನ್ನು ಶಿವಣ್ಣ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ಪೋಸ್ಟರ್​ ಮೆಚ್ಚುಗೆ ಆಗಿದೆ. ವಿಶೇಷ ಏನೆಂದರೆ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಎ. ಹರ್ಷ.

ಹರ್ಷ-ಶಿವಣ್ಣ ನಾಲ್ಕನೇ ಸಿನಿಮಾ
ಈ ಹಿಂದೆ ‘ಭಜರಂಗಿ’ ಸಿನಿಮಾ ಮೂಲಕ ಶಿವರಾಜ್​ಕುಮಾರ್​ ಮತ್ತು ಎ. ಹರ್ಷ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದರು. ಆ ಚಿತ್ರ ಸೂಪರ್​ ಹಿಟ್​ ಆಗಿತ್ತು. ನಂತರ ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ವಜ್ರಕಾಯ’ ಸಿನಿಮಾ ಮೂಡಿಬಂತು. ಈಗ ಬಿಡುಗಡೆಗೆ ಸಜ್ಜಾಗಿರುವ ‘ಭಜರಂಗಿ 2’ ಚಿತ್ರಕ್ಕೂ ಎ. ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂರು ಸಿನಿಮಾಗಳ ಬಳಿಕ ‘ವೇದ’ ಚಿತ್ರದಲ್ಲೂ ಹರ್ಷ ಮತ್ತು ಶಿವಣ್ಣ ಒಂದಾಗುತ್ತಿದ್ದಾರೆ.

ಕೌತುಕ ಮೂಡಿಸಿದ ಫಸ್ಟ್​ಲುಕ್​ ಪೋಸ್ಟರ್​
ಸಿನಿಮಾ ಹೆಸರಿನ ಜೊತೆಗೆ ಫಸ್ಟ್​ಲುಕ್​ ಪೋಸ್ಟರ್​ ಅನ್ನು ಕೂಡ ಶಿವಣ್ಣ ಅನಾವರಣಗೊಳಿಸಿದ್ದಾರೆ. ಬಿಳಿ ಕೂದಲು ಮತ್ತು ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿರುವ ‘ಸೆಂಚುರಿ ಸ್ಟಾರ್​’ ಹೊಸ ಗೆಟಪ್​ ಗಮನ ಸೆಳೆಯುತ್ತಿದೆ. ಪೋಸ್ಟರ್​ ಮೇಲೆ The Brutal 1960’s ಎಂದು ಬರೆದಿರುವುದರಿಂದ ಈ ಸಿನಿಮಾದ ಕಥೆ 1960ರ ದಶಕದಲ್ಲಿ ಸಾಗಲಿದೆ ಎಂಬ ಸುಳಿವು ಸಿಕ್ಕಿದೆ. ಚಿತ್ರಕ್ಕೆ ‘ವೇದ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ಯಾವ ಥೀಮ್ ಮೇಲೆ ಸಿನಿಮಾ ತಯಾರಾಗುತ್ತಿದೆ? ಶಿವಣ್ಣನ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾದ ಕೆಲಸಗಳು ಈಗಾಗಲೇ ಮುಗಿದಿವೆ. ಮೇ 14ರಂದು ತೆರೆಕಾಣಲಿದ್ದು ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಆ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಈ ನಟ-ನಿರ್ದೇಶಕನ ಕಾಂಬಿನೇಷನ್​ನಲ್ಲಿ ‘ವೇದ’ ಅನೌನ್ಸ್​ ಆಗಿದೆ.

ಇದನ್ನೂ ಓದಿ: Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್​

ಶಿವರಾಜ್​ಕುಮಾರ್​ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ; 35 ಕೆಜಿ ತೂಕದ ಕೇಕ್​ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us