ಕ್ಲೈಮ್ಯಾಕ್ಸ್ ಹಂತದಲ್ಲಿ ಶಿವಣ್ಣ-ಪ್ರಭುದೇವ ಸಿನಿಮಾ; ಕುತೂಹಲ ಮೂಡಿಸಿದ ‘ಕರಟಕ ದಮನಕ’ ಚಿತ್ರ

ಇತ್ತೀಚೆಗೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ಹಂಚಿಕೊಂಡರು. ಚಿತ್ರದ ಶೀರ್ಷಿಕೆ ‘ಕರಟಕ ದಮನಕ’ದ ಗುಟ್ಟನ್ನು ರಿವೀಲ್ ಮಾಡಿದರು. ‘ಇದು ಎರಡು ಕುತಂತ್ರಿ ನರಿಗಳ ಹೆಸರು. ಇಬ್ಬರು ಹೆಚ್ಚುಸಲ ಒಟ್ಟಾಗಿ ಕಾಣಿಸಿಕೊಂಡರೆ ‘ಕರಟಕ ದಮನಕ’ ಎಂದು ಕರೆಯಲಾಗುತ್ತದೆ’ ಎಂದರು ಯೋಗರಾಜ್ ಭಟ್.

ಕ್ಲೈಮ್ಯಾಕ್ಸ್ ಹಂತದಲ್ಲಿ ಶಿವಣ್ಣ-ಪ್ರಭುದೇವ ಸಿನಿಮಾ; ಕುತೂಹಲ ಮೂಡಿಸಿದ ‘ಕರಟಕ ದಮನಕ’ ಚಿತ್ರ
ಶಿವರಾಜ್​ಕುಮಾರ್-ಪ್ರಭುದೇವ

Updated on: Aug 24, 2023 | 12:07 PM

ನಟ ಶಿವರಾಜ್​ಕುಮಾರ್ ಅವರು ಸದ್ಯ ‘ಜೈಲರ್’ ಚಿತ್ರದ (Jailer Movie) ಗೆಲುವಿನ ಖುಷಿಯಲ್ಲಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಪಡೆಯೋಕೆ ಅವರ ಪಾಲು ಕೂಡ ಇದೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಯೋಗರಾಜ್ ಭಟ್ (Yogaraj Bhat) ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬೇಗ ತೆರೆಮೇಲೆ ಬರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇತ್ತೀಚೆಗೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ಹಂಚಿಕೊಂಡರು. ಚಿತ್ರದ ಶೀರ್ಷಿಕೆ ‘ಕರಟಕ ದಮನಕ’ದ ಗುಟ್ಟನ್ನು ರಿವೀಲ್ ಮಾಡಿದರು. ‘ಇದು ಎರಡು ಕುತಂತ್ರಿ ನರಿಗಳ ಹೆಸರು. ಇಬ್ಬರು ಹೆಚ್ಚುಸಲ ಒಟ್ಟಾಗಿ ಕಾಣಿಸಿಕೊಂಡರೆ ‘ಕರಟಕ ದಮನಕ’ ಎಂದು ಕರೆಯಲಾಗುತ್ತದೆ’ ಎಂದರು ಯೋಗರಾಜ್ ಭಟ್. ಶಿವಣ್ಣ ಹಾಗೂ ಪ್ರಭುದೇವ ಅವರ ಎನರ್ಜಿ ನೋಡಿ ಅವರು ಖುಷಿಪಟ್ಟಿದ್ದಾರೆ. ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಲು ರಾಕ್​ಲೈನ್ ಅವರು ಭರ್ಜರಿ ಹಣ ಹೂಡುತ್ತಿದ್ದಾರೆ.

ವಿ. ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಏಳು ಹಾಡುಗಳಿವೆ. ಶಿವರಾಜ್​ಕುಮಾರ್, ಪ್ರಭುದೇವ ಜೊತೆ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ತನಿಕೆಲ್ಲ ಭರಣಿ ಸೇರಿ ಅನೇಕ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ‘ಕರಟಕ ದಮನಕ’ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಸಿನಿಮಾದಲ್ಲಿ ಯೋಗರಾಜ್ ಭಟ್ ಹಾಗೂ ರಾಕ್​ಲೈನ್ ವೆಂಕಟೇಶ್ ಕೂಡ ನಟಿಸಿದ್ದಾರೆ. ಈಗಾಗಲೇ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ: ‘ಜಾಲಿವುಡ್​’ಗೆ ಶುಭಕೋರಿದ ಶಿವರಾಜ್​ಕುಮಾರ್​, ಡಿಕೆಶಿ; ಇಲ್ಲಿದೆ ಹತ್ತು ಹಲವು ಬಗೆಯ ಮನರಂಜನೆ

ರಾಕ್​ಲೈನ್ ನಿರ್ಮಾಣ ಸಂಸ್ಥೆಯಲ್ಲಿ ಶಿವರಾಜ್​ಕುಮಾರ್ ಅವರು ಈ ಮೊದಲು ನಟಿಸಿದ್ದರು. ಆದರೆ, ಇತ್ತೀಚೆಗೆ ಇವರಿಗೆ ಒಟ್ಟಾಗಿ ಕೆಲಸ ಮಾಡೋಕೆ ಸಾಧ್ಯವಾಗಿರಲಿಲ್ಲ. ಪ್ರಭುದೇವ ಚಿತ್ರಕ್ಕೆ ಬಂಡವಾಳ ಹೂಡಬೇಕು ಎಂಬುದು ರಾಕ್​ಲೈನ್ ಅವರ ಕನಸಾಗಿತ್ತು. ‘ಕರಟಕ ದಮನಕ’ ಸಿನಿಮಾ ಮೂಲಕ ಈ ಕನಸು ನನಸಾಗಿದೆ. ಪ್ರಭುದೇವ ಜೊತೆ ತೆರೆಹಂಚಿಕೊಂಡಿದ್ದಕ್ಕೆ ಶಿವಣ್ಣ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us