ರೊಚ್ಚಿಗೆದ್ದು ಆರ್​ಸಿಬಿ ಬಗ್ಗೆ ಶಿವಣ್ಣ ಮಾತನಾಡಿದ್ದು ನಿಮಗೆ ಅರ್ಥವಾಯ್ತಾ?

|

Updated on: Mar 16, 2024 | 10:24 AM

ಶಿವರಾಜ್​ಕುಮಾರ್ ಅವರ ಎದುರು ಮೂರು ಲಾಂಗ್​ಗಳನ್ನು ಇಡಲಾಗಿದೆ. ಒಂದರಲ್ಲಿ ರಾಯಲ್ ಇದ್ದರೆ, ಮತ್ತೊಂದು ಲಾಂಗ್​ನಲ್ಲಿ ಚಾಲೆಂಜರ್ಸ್ ಇದೆ. ಕೊನೆಯ ಲಾಂಗ್​ನಲ್ಲಿ Bangalore ಎಂದಿತ್ತು. ಶೀಘ್ರವೇ ಇದು ಬದಲಾಗಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.

ರೊಚ್ಚಿಗೆದ್ದು ಆರ್​ಸಿಬಿ ಬಗ್ಗೆ ಶಿವಣ್ಣ ಮಾತನಾಡಿದ್ದು ನಿಮಗೆ ಅರ್ಥವಾಯ್ತಾ?
ಶಿವಣ್ಣ
Follow us on

ಶಿವರಾಜ್​ಕುಮಾರ್ (Shivarajkumar) ಅವರಿಗೆ ಅಭಿಮಾನಿಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಫ್ಯಾನ್ಸ್ ಸೆಲ್ಫಿ ಕೇಳಿದಾಗ ಅವರು ಇಲ್ಲ ಎಂದು ಹೇಳಿದ್ದು ಕಡಿಮೆ. ಆದರೆ, ಕೆಲವೊಮ್ಮೆ ಅವರು ಸಿಟ್ಟಾದ ಉದಾಹರಣೆ ಇದೆ. ಈಗ ಅವರು ಮತ್ತೆ ರೊಚ್ಚಿಗೆದ್ದಿದ್ದಾರೆ. ಅಷ್ಟೇ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಅವರು ಒಂದು ವಿಚಾರ ಹೇಳಿದ್ದಾರೆ. ಬಹುತೇಕರಿಗೆ ಇದು ಅರ್ಥವಾಗಿದೆ. ಅಷ್ಟಕ್ಕೂ ಅವರು ಹೇಳಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದೇ ಕರೆಯಲಾಗುತ್ತಿದೆ. ಆದರೆ, ಇಂಗ್ಲಿಷ್​ನಲ್ಲಿ Bengaluru ಬದಲು Bangalore ಎನ್ನುವ ಸ್ಪೆಲ್ಲಿಂಗ್ ಇದೆ. ಇದನ್ನು ಬದಲಿಸಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಹಲವು ವರ್ಷಗಳಿಂದ ಇದನ್ನು ಹೇಳುತ್ತಲೇ ಬರಲಾಗುತ್ತಿತ್ತು. ಆದರೆ, ಅದು ಆಗಿರಲಿಲ್ಲ. ಈಗ ಕೊನೆಗೂ Bangalore ಎಂಬುದು Bengaluru ಎಂದಾಗುವ ಸಮಯ ಬಂದಿದೆ. ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಶಿವಣ್ಣ ಕೂಡ ಹೇಳಿದ್ದು ಇದನ್ನೇ. ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಅನ್​ಬಾಕ್ಸಿಂಗ್ ನಡೆಯುತ್ತಿದೆ. ಈ ವೇಳೆ ಹೆಸರು ಬದಲಿಸುವ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಶಿವಮೊಗ್ಗ ಹೋಗಿ ಗೀತಾ ಅವರನ್ನು ಗೆಲ್ಲಿಸಿಕೊಂಡು ಬರಬೇಕು’; ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರ ಎದುರು ಮೂರು ಲಾಂಗ್​ಗಳನ್ನು ಇಡಲಾಗಿದೆ. ಒಂದರಲ್ಲಿ ರಾಯಲ್ ಇದ್ದರೆ, ಮತ್ತೊಂದು ಲಾಂಗ್​ನಲ್ಲಿ ಚಾಲೆಂಜರ್ಸ್ ಇದೆ. ಕೊನೆಯ ಲಾಂಗ್​ನಲ್ಲಿ Bangalore ಎಂದಿತ್ತು. ಶೀಘ್ರವೇ ಇದು ಬದಲಾಗಲಿದೆ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಕೂಡ ಇದೇ ರೀತಿ ಜಾಹೀರಾತಲ್ಲಿ ಭಾಗಿ ಆಗಿದ್ದರು.

ಸಿನಿಮಾ ವಿಚಾರಕ್ಕೆ ಬರೋದಾದರೆ ಶಿವರಾಜ್​ಕುಮಾರ್ ನಟನೆಯ ‘ಕರಟಕ ದಮನಕ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಯೋಗರಾಜ್ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿವರಾಜ್​ಕುಮಾರ್ ಜೊತೆ ಪ್ರಭುದೇವ ಕೂಡ ನಟಿಸಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ರದ ರಿಲೀಸ್ ದಿನಾಂಕ ಇತ್ತೀಚೆಗೆ ಘೋಷಣೆ ಆಗಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ