ಜಗ್ಗೇಶ್ ಜನ್ಮದಿನ: ಇವರ ಲವ್​ಸ್ಟೋರಿ ತುಂಬಾನೇ ಡಿಫರೆಂಟ್; ಕೋರ್ಟ್​ನಿಂದ ಸಿಕ್ಕಿತ್ತು ಸಮ್ಮತಿ

ಮದುವೆ ಏನೋ ಆಯಿತು. ಆದರೆ, ಮದುವೆಯಾಗಿ ಮೂರೇ ದಿನಕ್ಕೆ ಪರಿಮಳಾ ಅವರನ್ನು ತಂದೆ ಕರೆದುಕೊಂಡು ಮದ್ರಾಸ್ ಹೋದರು. ಆ ಬಳಿಕ ಇಬ್ಬರ ಮಧ್ಯೆ ಸಂಪರ್ಕವೇ ಇರಲಿಲ್ಲ. ಅದೂ ಒಂದೂವರೆ ವರ್ಷ. ನಂತರ ಜಗ್ಗೇಶ್ ಅವರು ಸುಮ್ಮನೆ ಕೂರಲಿಲ್ಲ. ಮದ್ರಾಸ್​ಗೆ ತೆರಳಿ ಪರಿಮಳಾ ಅವರನ್ನು ಕರೆತಂದೇ ಬಿಟ್ಟರು.

ಜಗ್ಗೇಶ್ ಜನ್ಮದಿನ: ಇವರ ಲವ್​ಸ್ಟೋರಿ ತುಂಬಾನೇ ಡಿಫರೆಂಟ್; ಕೋರ್ಟ್​ನಿಂದ ಸಿಕ್ಕಿತ್ತು ಸಮ್ಮತಿ
ಪರಿಮಳಾ-ಜಗ್ಗೇಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 17, 2024 | 6:30 AM

ಜಗ್ಗೇಶ್ (Jaggesh) ಅವರಿಗೆ ಇಂದು (ಮಾರ್ಚ್​ 17) 61ನೇ ವರ್ಷದ ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಜಗ್ಗೇಶ್​​ಗೆ ಶುಭಾಶಯ ತಿಳಿಸುತ್ತಿದ್ದಾರೆ. ಅವರ ನಟನೆಯ ‘ರಂಗನಾಯಕ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಕಾರಣಕ್ಕೆ ಅವರಿಗೆ ಬರ್ತ್​ಡೇ ವಿಶೇಷ ಎನಿಸಿಕೊಂಡಿದೆ. ಜಗ್ಗೇಶ್ ಅವರ ಜೀವನ ಅನೇಕರಿಗೆ ಮಾದರಿ ಆಗುವಂಥದ್ದು. ಅವರ ಬದುಕಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಸಾಕಷ್ಟು ಏಳುಬೀಳುಗಳನ್ನು ಕಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ನಟನಾಗಿ, ರಾಜಕೀಯ ನಾಯಕನಾಗಿ ಯಶಸ್ಸು ಕಂಡಿದ್ದಾರೆ. ಅವರ ಪ್ರೇಮ ವಿವಾಹ ಸಾಕಷ್ಟು ಸುದ್ದಿ ಆಗಿತ್ತು.

ಜಗ್ಗೇಶ್​ ಮತ್ತು ಪರಿಮಳಾ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರು ಮದುವೆ ಆಗಿದ್ದು 1984ರ ಮಾ.22ರಂದು. ಇವರದ್ದು ಅದ್ದೂರಿ ಮದುವೆ ಅಲ್ಲ. ಇವರು ರಿಜಿಸ್ಟರ್​ ಮ್ಯಾರೇಜ್​ ಆಗಿದ್ದರು. ಆಗ ಪರಿಮಳಾಗೆ ಕೇವಲ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19 ವರ್ಷ ವಯಸ್ಸು. ಈ ಮದುವೆಗೆ ಪರಿಮಳಾ ಮನೆಯವರ ವಿರೋಧ ಇತ್ತು. ಹೀಗಾಗಿ ರಿಜಿಸ್ಟರ್ ಮ್ಯಾರೇಜ್ ಆಗಬೇಕಾಯಿತು.

ಮದುವೆ ಏನೋ ಆಯಿತು. ಆದರೆ, ಮದುವೆಯಾಗಿ ಮೂರೇ ದಿನಕ್ಕೆ ಪರಿಮಳಾ ಅವರನ್ನು ತಂದೆ ಕರೆದುಕೊಂಡು ಮದ್ರಾಸ್ ಹೋದರು. ಆ ಬಳಿಕ ಇಬ್ಬರ ಮಧ್ಯೆ ಸಂಪರ್ಕವೇ ಇರಲಿಲ್ಲ. ಅದೂ ಒಂದೂವರೆ ವರ್ಷ. ನಂತರ ಜಗ್ಗೇಶ್ ಅವರು ಸುಮ್ಮನೆ ಕೂರಲಿಲ್ಲ. ಮದ್ರಾಸ್​ಗೆ ತೆರಳಿ ಪರಿಮಳಾ ಅವರನ್ನು ಕರೆತಂದೇ ಬಿಟ್ಟರು. ಪರಿಮಳಾ ತಂದೆ ಜಗ್ಗೇಶ್ ವಿರುದ್ಧ 6 ಕೇಸ್ ದಾಖಲಿಸಿದ್ದರು.ಈ ಕೇಸ್ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಅಲ್ಲಿ ಜಗ್ಗೇಶ್​-ಪರಿಮಳಾ ಪ್ರೀತಿಗೆ ಜಯ ಸಿಕ್ಕಿತು. ಜಗ್ಗೇಶ್ ಅವರ ವಿರುದ್ಧದ್ ಕೇಸ್​ಗಳನ್ನು ಕೋರ್ಟ್ ಖುಲಾಸೆ ಮಾಡಿತು.

‘ಇಬ್ಬನಿ ಕರಗಿತು’ ಜಗ್ಗೇಶ್ ನಟನೆಯ ಮೊದಲ ಸಿನಿಮಾ. ಈ ಚಿತ್ರ 1982ರಲ್ಲಿ ರಿಲೀಸ್ ಆಯಿತು. ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದ ಮೂಲಕ ಈ ಸೂಪರ್ ಹಿಟ್ ಆಯಿತು. ಇದು ರಿಲೀಸ್ ಆಗಿದ್ದು 1992ರಲ್ಲಿ. ಈ ಚಿತ್ರ ದೊಡ್ಡ ಗೆಲುವು ಕಂಡ ಬಳಿಕ ಜಗ್ಗೇಶ್ ಅವರನ್ನು ಹುಡುಕಿ ಹಲವು ಆಫರ್​ಗಳು ಬಂದವು. ಈ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲು 30ಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದರು ಅವರು. ವಿಲನ್ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದರು. ಜಗ್ಗೇಶ್ ಹೀರೋ ಆಗಿ ಒಪ್ಪಿಕೊಂಡ ಮೊದಲ ಚಿತ್ರ ‘ಭಂಡ ನನ್ನ ಗಂಡ’. ಆದರೆ, ಮೊದಲು ರಿಲೀಸ್ ಆಗಿದ್ದು, ‘ತರ್ಲೆ ನನ್ಮಗ’. ‘ಭಂಡ ನನ್ನ ಗಂಡ’ ಚಿತ್ರಕ್ಕೆ ಜಗ್ಗೇಶ್​ ಅವರ ಭಾವ ಹಣ ಹಾಕಿದ್ದರು. ಈ ಚಿತ್ರದಲ್ಲಿ ಅಂಬರೀಷ್ ಅವರು ಅತಿಥಿ ಪಾತ್ರ ಮಾಡಿ, ಜಗ್ಗೇಶ್​ಗೆ ಅವರಿಗೆ ಬೆಂಬಲವಾಗಿ ನಿಂತಿದ್ದರು.

ಜಗ್ಗೇಶ್ ಅವರು ಸ್ಯಾಂಡಲ್​ವುಡ್ ಬಿಟ್ಟು ಹೊರ ಹೋಗಿಲ್ಲ. ಪರಭಾಷೆಯಿಂದ ಹಲವು ಆಫರ್​​ಗಳು ಬಂದರೂ ಅವರು ಅಲ್ಲಿಗೆ ಹೋದವರಲ್ಲ. ಕಲಾ ಸೇವೆಯನ್ನು ಕೇವಲ ಕನ್ನಡಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ ಅವರು.  ಜಗ್ಗೇಶ್ ಅವರು ನಟನೆಯ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ‘ಗುರು’ ಹಾಗೂ ‘ಮೇಲುಕೋಟೆ ಮಂಜ’ ಹೆಸರಿನ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ಮೇಕಪ್​’ ಹೆಸರಿನ ಸಿನಿಮಾನ ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಅವರ ಮಗ ಗುರುರಾಜ್ ನಿರ್ದೇಶನ ಮಾಡಿದ್ದರು. ಸಿಂಗೀತಂ ಶ್ರೀನಿವಾಸರಾವ್ ಈ ಸಿನಿಮಾನ ನಿರ್ದೇಶನ ಮಾಡಿದ್ದರು. ಈ ಚಿತ್ರ ಅಂದುಕೊಂಡಷ್ಟು ದೊಡ್ಡ ಗೆಲುವು ಕಂಡಿಲ್ಲ.

ರಾಜ್​ಕುಮಾರ್ ಅವರ ಕುಟುಂಬದ ಜೊತೆ ಜಗ್ಗೇಶ್​ಗೆ ವಿಶೇಷ ಗೌರವ ಹಾಗೂ ಪ್ರೀತಿ ಇದೆ. ರಾಜ್​ಕುಮಾರ್​ ಅವರನ್ನು ಕಂಡರೆ ಜಗ್ಗೇಶ್​ಗೆ ಎಲ್ಲಿಲ್ಲದ ಗೌರವ. ಪುನೀತ್ ಜೊತೆ ಅವರಿಗೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅನೇಕ ಕಡೆಗಳಲ್ಲಿ ಇಬ್ಬರೂ ಒಟ್ಟಾಗಿ ಸುತ್ತಾಟ ಮಾಡಿದ್ದರು. ಇಬ್ಬರೂ ಹುಟ್ಟಿದ ದಿನಾಂಕ ಒಂದೇ ಅನ್ನೋದು ವಿಶೇಷ.

ಇದನ್ನೂ ಓದಿ: ಅವಹೇಳನಕಾರಿ ಸುದ್ದಿ ಪ್ರಕಟಿಸದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದ ಜಗ್ಗೇಶ್

ಜಗ್ಗೇಶ್ ರಾಘವೇಂದ್ರ ಸ್ವಾಮಿ ಭಕ್ತರು. ಯಶಸ್ಸು ಸಿಗಲು ಅವರಿಗೆ ರಾಯರ ಕೃಪೆ ಕಾರಣ ಎಂದು ಜಗ್ಗೇಶ್ ನಂಬುತ್ತಾರೆ. ಪ್ರತಿ ಹಂತದಲ್ಲೂ ರಾಘವೇಂದ್ರ ಸ್ವಾಮಿಯನ್ನು ಅವರು ನೆನೆಯುತ್ತಾರೆ. ಆಗಾಗ ಅವರು ಮಂತ್ರಾಲಯಕ್ಕೆ ತೆರಳುತ್ತಾರೆ. ಜಗ್ಗೇಶ್ ಮೊದಲು ಕಾಂಗ್ರೆಸ್​ನಲ್ಲಿದ್ದರು. ನಂತರ ಬಿಜೆಪಿಗೆ ಬಂದರು. ಸದ್ಯ ರಾಜ್ಯಸಭಾ ಸದಸ್ಯನಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ಕೂಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್