ಶಿವರಾಜ್ಕುಮಾರ್ (Shivarajkumar Birthday) ಅವರು ಇಂದು (ಜುಲೈ 12) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವರಾಜ್ಕುಮಾರ್ (Shivarajkumar )ಅವರು ಈ ವಯಸ್ಸಿನಲ್ಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ಡ್ಯಾನ್ಸ್ ಹಾಗೂ ಫೈಟಿಂಗ್ ದೃಶ್ಯಗಳನ್ನು ನೀರು ಕುಡಿದಂತೆ ಮಾಡುತ್ತಾರೆ. ಅವರ ಎನರ್ಜಿ ಅನೇಕರಿಗೆ ಇಷ್ಟವಾಗುತ್ತದೆ. ಶಿವರಾಜ್ಕುಮಾರ್ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಳ್ಳುತ್ತಿಲ್ಲ. ಆದಾಗ್ಯೂ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಬರುತ್ತಿವೆ.
ಶಿವಣ್ಣ ಪ್ರತಿ ವರ್ಷ ಕುಟುಂಬ ಹಾಗೂ ಫ್ಯಾನ್ಸ್ ಜತೆ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೊವಿಡ್ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಅವರು ಫ್ಯಾಮಿಲಿ ಜತೆ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ, ಈ ಬಾರಿ ಅವರ ಮನೆಯಲ್ಲಿ ಬರ್ತ್ಡೇ ಸಂಭ್ರಮ ಇಲ್ಲ. ಸಹೋದರ ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಶಿವರಾಜ್ಕುಮಾರ್ ಅವರು ಬರ್ತ್ಡೇ ಆಚರಿಸಿಕೊಳ್ಳದಿದ್ದರೂ ಫ್ಯಾನ್ಸ್ ಸಂಭ್ರಮ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್ಡೇ ಶುಭಾಶಯ ತಿಳಿಸಲಾಗುತ್ತಿದೆ. ಶಿವಣ್ಣ ಅವರ ಕಾಮನ್ ಡಿಪಿ ಕೂಡ ವೈರಲ್ ಆಗುತ್ತಿದೆ. ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಶಿವರಾಜ್ಕುಮಾರ್ ಫೋಟೋ ಪೋಸ್ಟ್ ಮಾಡಿ ವಿಶ್ ತಿಳಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಮಾಜಮುಖಿ ಕೆಲಸಗಳು ಕೂಡ ಆಗುತ್ತಿವೆ.
ಶಿವರಾಜ್ಕುಮಾರ್ ಬರ್ತ್ಡೇಗೆ 11 ದಿನ ಇರುವಾಗ ಅವರ ನಟನೆಯ ‘ಬೈರಾಗಿ’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಧನಂಜಯ್ ಹಾಗೂ ಶಿವರಾಜ್ಕುಮಾರ್ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಯಿತು. ಇದು ಶಿವಣ್ಣ ಫ್ಯಾನ್ಸ್ಗೆ ಅಡ್ವಾನ್ಸ್ ಗಿಫ್ಟ್ ಎಂದು ಚಿತ್ರತಂಡದವರೇ ಹೇಳಿಕೊಂಡಿದ್ದರು. ಬರ್ತ್ಡೇ ಪ್ರಯುಕ್ತ ಅವರ ನಟನೆಯ ಸಿನಿಮಾಗಳ ಪೋಸ್ಟರ್ಗಳು ರಿಲೀಸ್ ಆಗುತ್ತಿವೆ.
ಇದನ್ನೂ ಓದಿ: ‘ಡಾ. ಶಿವರಾಜ್ಕುಮಾರ್ ವೃತ್ತ’: ಮಾನ್ಯತಾ ರೆಸಿಡೆನ್ಸಿ ಸರ್ಕಲ್ಗೆ ಶಿವಣ್ಣನ ಹೆಸರಿಟ್ಟ ನಿವಾಸಿಗಳು
ಪುನೀತ್ ರಾಜ್ಕುಮಾರ್ ಇಂದು ಇದ್ದಿದ್ದರೆ ಶಿವರಾಜ್ಕುಮಾರ್ ಅವರ ಬರ್ತ್ಡೇ ಆಚರಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯಿಂದ ಅವರಿಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದರು. ಅವರು ಇಲ್ಲ ಎಂಬ ನೋವು ರಾಜ್ ಕುಟುಂಬಕ್ಕೆ ಹಾಗೂ ಅವರ ಫ್ಯಾನ್ಸ್ಗೆ ಬಹುವಾಗಿ ಕಾಡುತ್ತಿದೆ.
Published On - 6:30 am, Tue, 12 July 22