‘ಕಬ್ಜ’ ಸಿನಿಮಾ (Kabzaa Movie) ಬಗ್ಗೆ ಇರುವ ನಿರೀಕ್ಷೆ ದಿನಕಳೆದಂತೆ ಹೆಚ್ಚುತ್ತಿದೆ. ಉಪೇಂದ್ರ ನಟನೆಯ ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೋರ್ವ ಸ್ಟಾರ್ ನಟ ಇರಲಿದ್ದಾರೆ ಎಂಬ ಸೂಚನೆ ಈ ಮೊದಲು ಸಿಕ್ಕಿತ್ತು. ಈಗ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ‘ಕಬ್ಜ’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಕೂಡ ನಟಿಸುತ್ತಿದ್ದಾರೆ. ಇಂದು (ಮಾರ್ಚ್ 3) ಹೊಸ ಪೋಸ್ಟರ್ ರಿವೀಲ್ ಆಗಿದೆ.
ಶಿವರಾಜ್ಕುಮಾರ್ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಕಬ್ಜ’ ಚಿತ್ರ ಸೇರಿಕೊಂಡಿರುವ ಮಾಹಿತಿ ರಿವೀಲ್ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇಂದು ರಿಲೀಸ್ ಆದ ಪೋಸ್ಟರ್ನಲ್ಲಿ ಶಿವರಾಜ್ಕುಮಾರ್ ಅವರು ನಾಡ ಬಂದೂಕು ಹಿಡಿದು ನಿಂತಿದ್ದಾರೆ. ಸುದೀಪ್ ಅವರು ಸಣ್ಣ ಗನ್ ಹಿಡಿದ್ದಾರೆ. ಬ್ಯಾಕ್ಗ್ರೌಂಡ್ನಲ್ಲಿ ಉಪೇಂದ್ರ ಕೂಡ ಇದ್ದಾರೆ. ಮೂವರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
‘ಕಬ್ಜ’ ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ಸಿದ್ಧಗೊಂಡಿದೆ. ಶನಿವಾರ (ಮಾರ್ಚ್ 4) ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಈ ಟ್ರೇಲರ್ನಲ್ಲಿ ಸಿನಿಮಾದ ಕಥೆ ರಿವೀಲ್ ಆಗಬಹುದು ಎನ್ನುವ ನಿರೀಕ್ಷೆ ಇದೆ.
You all know that Kabzaa features Superstar upendra and Kicha sudeep , But I want to give you all another good news … You have been asking for so long…YES…Kabzaa also features our beloved Karunada Chakravarthy Shiva Rajkumar , Thank you Shivanna for your continued support pic.twitter.com/kCgJUv8I9b
— R.Chandru (@rchandru_movies) March 3, 2023
ಇದನ್ನೂ ಓದಿ: Kabzaa Movie: ‘ಕಬ್ಜ’ ಆಡಿಯೋ ಬಿಡುಗಡೆ ಮಾಡಿದ ಗಣ್ಯರು; ಮಸ್ತ್ ಮನರಂಜನೆ ನೀಡಿದ ಶಿವಣ್ಣ, ಉಪ್ಪಿ
ಅದ್ದೂರಿ ಬಜೆಟ್ನಲ್ಲಿ ಆರ್.ಚಂದ್ರು ಅವರು ‘ಕಬ್ಜ’ ಚಿತ್ರವನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರಿಗೆ ಜೊತೆಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಸಾಕಷ್ಟು ವೀವ್ಸ್ ಪಡೆದುಕೊಂಡಿದೆ. ಈ ಚಿತ್ರದ ಟ್ರೇಲರ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 37 ವರ್ಷ; ವಿಶೇಷವಾಗಿ ಧನ್ಯವಾದ ಹೇಳಿದ ಶಿವಣ್ಣ
ಶಿವರಾಜ್ಕುಮಾರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ವೇದ’ ಸಿನಿಮಾ ಯಶಸ್ಸು ಕಂಡಿದೆ. ಶಿವರಾತ್ರಿ ಹಬ್ಬದಂದು ನಿರ್ದೇಶಕ ನರ್ತನ್ ಜೊತೆಗಿನ ಸಿನಿಮಾ ‘ಭೈರತಿ ರಣಗಲ್’ ಘೋಷಣೆ ಆಗಿದೆ. ‘ಸತ್ಯಮಂಗಲ’, ‘45’ ಮೊದಲಾದ ಚಿತ್ರಗಳು ಅವರ ಕೈಯಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ