AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kabzaa Trailer: ಮಾರ್ಚ್ 4ಕ್ಕೆ ಬಿಡುಗಡೆ ಆಗಲಿದೆ ‘ಕಬ್ಜ’ ಟ್ರೇಲರ್​; ಕಮಾಲ್​ ಮಾಡಲು ಸಜ್ಜಾದ ಆರ್​. ಚಂದ್ರು-ಉಪ್ಪಿ

Upendra | R. Chandru: ಉಪೇಂದ್ರ ಅಭಿನಯದ ‘ಕಬ್ಜ’ ಸಿನಿಮಾದ ಟ್ರೇಲರ್​ ಯಾವಾಗ ರಿಲೀಸ್​ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಾರ್ಚ್ 4ಕ್ಕೆ ಆನಂದ್​ ಆಡಿಯೋ ಮೂಲಕ ಟ್ರೇಲರ್​ ಅನಾವರಣ ಆಗಲಿದೆ.

Kabzaa Trailer: ಮಾರ್ಚ್ 4ಕ್ಕೆ ಬಿಡುಗಡೆ ಆಗಲಿದೆ ‘ಕಬ್ಜ’ ಟ್ರೇಲರ್​; ಕಮಾಲ್​ ಮಾಡಲು ಸಜ್ಜಾದ ಆರ್​. ಚಂದ್ರು-ಉಪ್ಪಿ
ಉಪೇಂದ್ರ
ಮದನ್​ ಕುಮಾರ್​
|

Updated on: Mar 02, 2023 | 4:09 PM

Share

ಬಿಗ್​​ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ‘ಕಬ್ಜ’ (Kabzaa Movie) ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ. ಟೀಸರ್​ ಮತ್ತು ಹಾಡುಗಳು ಧೂಳೆಬ್ಬಿಸಿವೆ. ಉಪೇಂದ್ರ (Upendra) ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾದಿದ್ದಾರೆ. ಮಾರ್ಚ್​ 17ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್​ ಆಗಲಿದೆ. ಈಗ ಟ್ರೇಲರ್​ ನೋಡುವ ಸಮಯ ಬಂದಿದೆ. ಹೌದು, ಮಾರ್ಚ್​ 4ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ ‘ಕಬ್ಜ’ ಚಿತ್ರದ ಟ್ರೇಲರ್​ (Kabzaa Movie Trailer) ರಿಲೀಸ್​ ಆಗಲಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಖ್ಯಾತ ನಿರ್ದೇಶಕ ಆರ್​. ಚಂದ್ರು ಅವರು ‘ಕಬ್ಜ’ ಸಿನಿಮಾವನ್ನು ಬಹಳ ಕಾಳಜಿ ವಹಿಸಿ ನಿರ್ದೇಶಿಸಿದ್ದಾರೆ. ತುಂಬ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ದೇಶದ ಬೇರೆ ಬೇರೆ ನಗರಗಳಲ್ಲಿ ಹಾಡುಗಳನ್ನು ರಿಲೀಸ್​ ಮಾಡಿ ಗಮನ ಸೆಳೆಯಲಾಗಿದೆ. ಈಗ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಟ್ರೇಲರ್​ ಬರಲಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶ್ರೀಯಾ ಶರಣ್​ ಮುಂತಾದವರು ನಟಿಸಿರುವ ಈ ಚಿತ್ರದ ಕ್ರೇಜ್​ ಜೋರಾಗಿದೆ.

ಇದನ್ನೂ ಓದಿ: Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ

ಇದನ್ನೂ ಓದಿ
Image
Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
Image
Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
Image
‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
Image
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

ತಾಂತ್ರಿಕ ಶ್ರೀಮಂತಿಕೆಯ ಕಾರಣದಿಂದಲೂ ‘ಕಬ್ಜ’ ಸಿನಿಮಾ ಕೌತುಕ ಮೂಡಿಸಿದೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತದಿಂದಾಗಿ ಈ ಚಿತ್ರಕ್ಕೆ ಹೆಚ್ಚಿನ ಮೆರುಗು ಬಂದಿದೆ. ಟೀಸರ್​ ಮೂಲಕ ತಾಂತ್ರಿಕ ಗುಣಮಟ್ಟದ ಝಲಕ್​ ಕಾಣಿಸಿದೆ. ಈಗ ಟ್ರೇಲರ್​ನಲ್ಲಿ ಯಾವೆಲ್ಲ ಅಂಶಗಳು ರಿವೀಲ್​ ಆಗಲಿವೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.

ಇದನ್ನೂ ಓದಿ: ‘ನಾನು ರಾಜ್ಯ ಕಟ್ಟೋದು ಕತ್ತಿಗಳಿಂದಲ್ಲ..’; ಖಡಕ್ ಆಗಿ ‘ಕಬ್ಜ’ ಡೈಲಾಗ್ ಹೇಳಿದ ಉಪೇಂದ್ರ

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಕನ್ನಡ ಚಿತ್ರರಂಗದ ಚಾರ್ಮ್​ ಹೆಚ್ಚಿತು. ಈಗ ‘ಕಬ್ಜ’ ಚಿತ್ರ ಕೂಡ ಅದೇ ರೀತಿಯಲ್ಲಿ ಮೂಡಿಬಂದಿದೆ. ಅನೇಕರು ಈ ಸಿನಿಮಾದ ದೃಶ್ಯಗಳನ್ನು ‘ಕೆಜಿಎಫ್​ 2’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ಟ್ರೇಲರ್​ ನೋಡಿದರೆ ಪ್ರೇಕ್ಷಕರಿಗೆ ಇನ್ನಷ್ಟು ಸ್ಪಷ್ಟತೆ ಸಿಗಲಿದೆ. ಹಾಗಾಗಿ ‘ಕಬ್ಜ’ ಟ್ರೇಲರ್​ ಬಿಡುಗಡೆ ಯಾವಾಗ ಎಂದು ಸಿನಿಪ್ರಿಯರು ಕೇಳುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ: Kabzaa Movie: ‘ಕಬ್ಜ’ ಆಡಿಯೋ ಬಿಡುಗಡೆ ಮಾಡಿದ ಗಣ್ಯರು; ಮಸ್ತ್​ ಮನರಂಜನೆ ನೀಡಿದ ಶಿವಣ್ಣ, ಉಪ್ಪಿ

ಕೆಲವೇ ದಿನಗಳ ಹಿಂದೆ ಶಿಡ್ಲಘಟ್ಟದಲ್ಲಿ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ ಚಳಿ..’ ಹಾಡನ್ನು ರಿಲೀಸ್​ ಮಾಡಲಾಯಿತು. ಈ ಗೀತೆ 4.5 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಅದಕ್ಕೂ ಮುನ್ನ ಬಿಡುಗಡೆ ಆಗಿದ್ದ ‘ನಮಾಮಿ..’ ಹಾಡು ಹಾಗೂ ‘ಕಬ್ಜ’ ಟೈಟಲ್​ ಟ್ರ್ಯಾಕ್​ ಕೂಡ ಸಹ ಜನಮೆಚ್ಚುಗೆ ಗಳಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು