ಸುದೀಪ್ ಮುಂದಿನ ಚಿತ್ರ ಅನೂಪ್ ಭಂಡಾರಿ ಜೊತೆ; ಫೋಟೋ ಮೂಲಕ ಸೂಚನೆ ಕೊಟ್ಟ ನಿರ್ದೇಶಕ
Billa Ranga Baashaa Movie: ಅನೂಪ್ ಭಂಡಾರಿ ಜೊತೆ ಸುದೀಪ್ ಎರಡು ಸಿನಿಮಾ ಮಾಡುತ್ತಾರೆ ಅನ್ನೋದು ಈ ಮೊದಲೇ ಘೋಷಣೆ ಆಗಿತ್ತು. ಆ ಪೈಕಿ ‘ವಿಕ್ರಾಂತ್ ರೋಣ’ ಕಳೆದ ವರ್ಷ ರಿಲೀಸ್ ಆಗಿದೆ.
ಅನೂಪ್ ಭಂಡಾರಿ (Anup Bhandari) ಅವರು ‘ರಂಗಿ ತರಂಗ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದರು. ಕಳೆದ ವರ್ಷ ರಿಲೀಸ್ ಆದ ಕಿಚ್ಚ ಸುದೀಪ್ ಜೊತೆಗಿನ ‘ವಿಕ್ರಾಂತ್ ರೋಣ’ ಸಿನಿಮಾ ಯಶಸ್ಸು ಕಂಡಿತು. ಈಗ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಇದೆ. ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸುದೀಪ್ ಹಾಗೂ ಅನೂಪ್ ಭಂಡಾರಿ ‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ (Billa Ranga Baashaa) ಒಂದಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಯುಗಾದಿಗೆ ಈ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಇದೆ.
ಅನೂಪ್ ಭಂಡಾರಿ ಜೊತೆ ಸುದೀಪ್ ಎರಡು ಸಿನಿಮಾ ಮಾಡುತ್ತಾರೆ ಅನ್ನೋದು ಈ ಮೊದಲೇ ಘೋಷಣೆ ಆಗಿತ್ತು. ಆ ಪೈಕಿ ‘ವಿಕ್ರಾಂತ್ ರೋಣ’ ಕಳೆದ ವರ್ಷ ರಿಲೀಸ್ ಆಗಿದೆ. ಈಗ ಎಲ್ಲರ ದೃಷ್ಟಿ ‘ಬಿಲ್ಲ ರಂಗ ಬಾಷಾ’ ಮೇಲಿದೆ. ಸುದೀಪ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಿಚ್ಚನ ಮುಂದಿನ ಚಿತ್ರ ಇದೇ ಆಗಿರಲಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ.
ಹೊಸ ಪೋಸ್ಟ್ ಹಾಕಿರುವ ಅನೂಪ್ ಭಂಡಾರಿ, ‘ರಂಗಿತರಂಗ’, ‘ರಾಜರಥ’ ಹಾಗೂ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಬರುವ ತಮ್ಮ ಪಾತ್ರದ ಫೋಟೋನ ಜೋಡಿಸಿ ಹಂಚಿಕೊಂಡಿದ್ದಾರೆ. ನಾಲ್ಕನೇ ಚಿತ್ರ ಲೋಡಿಂಗ್ ಎಂದೂ ಬರೆಯಲಾಗಿದೆ. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು, ‘ನಿಮ್ಮ ಹಾರೈಕೆಗೆ ಧನ್ಯವಾದ. ‘ಬಿ’ಗಿಯಾಗ್ ಕೂತ್ಕೋಳಿ. ‘ರಂ’ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ‘ಬಾ’ಡೂಟದ್ ಜೊತೆ ಬರ್ತೀವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆ ಇರ್ಲಿ’ ಎಂದು ಕೋರಿದ್ದಾರೆ. ಇಲ್ಲಿ ಒಂದು ಸೂಚನೆಯೂ ಇದೆ. ಅವರು ಬರೆದ ಸಾಲುಗಳಲ್ಲಿ ‘ಬಿ, ರಂ, ಬಾ’ ಹೈಲೈಟ್ ಆಗಿದೆ. ಹೀಗಾಗಿ, ಅನೂಪ್ ಮುಂದಿನ ಚಿತ್ರ ‘ಬಿಲ್ಲ ರಂಗ ಬಾಷಾ’ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
Thanks to each one of you for the wonderful wishes! ಬಿ ಗಿಯಾಗ್ ಕೂತ್ಕೋಳಿ, ರಂ ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು ಬಾ ಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ – Be Right Back! pic.twitter.com/M9vfJvUJeo
— Anup Bhandari (@anupsbhandari) March 2, 2023
ಇದನ್ನೂ ಓದಿ: ‘ಮೈ ಆಟೋಗ್ರಾಫ್’ ಚಿತ್ರಕ್ಕೆ 17 ವರ್ಷ: ಎವರ್ಗ್ರೀನ್ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ವಿಶೇಷ ಮಾತು
ಕಿಚ್ಚ ಸುದೀಪ್ ಅವರು ‘ಕಬ್ಜ’ ಚಿತ್ರದ ಕೆಲಸ ಪೂರ್ಣಗೊಳಿಸಿದ್ದಾರೆ. ಉಪೇಂದ್ರ ಮುಖ್ಯಭೂಮಿಕೆ ನಿರ್ವಹಿಸಿರುವ ಈ ಚಿತ್ರದಲ್ಲಿ ಸುದೀಪ್ ಕೂಡ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುವ ಕಾರ್ಯ ಆಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ