ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟಿ ನಟನೆಯ ‘45’ ಚಿತ್ರದ ಟೀಸರ್ ರಿಲೀಸ್​​ಗೆ ದಿನಾಂಕ ಫಿಕ್ಸ್

|

Updated on: Mar 22, 2025 | 10:39 AM

'45' ಚಿತ್ರವು ಶಿವರಾಜ್​ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರನ್ನು ಒಳಗೊಂಡಿದೆ ಮತ್ತು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಮಾರ್ಚ್ 30 ರಂದು ಯುಗಾದಿ ಹಬ್ಬದ ದಿನ ಬಿಡುಗಡೆಯಾಗಲಿದೆ. ಹಾಲಿವುಡ್ ತಂತ್ರಜ್ಞರು ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ ಎಂಬುದು ವಿಶೇಷ.

ಶಿವಣ್ಣ, ಉಪೇಂದ್ರ, ರಾಜ್ ಶೆಟ್ಟಿ ನಟನೆಯ ‘45’ ಚಿತ್ರದ ಟೀಸರ್ ರಿಲೀಸ್​​ಗೆ ದಿನಾಂಕ ಫಿಕ್ಸ್
ಶಿವಣ್ಣ-ರಾಜ್​ ಬಿ. ಶೆಟ್ಟಿ-ಉಪೇಂದ್ರ
Follow us on

ನಟ ಶಿವರಾಜ್​ಕುಮಾರ್, ಉಪೇಂದ್ರ (Upendra) ಹಾಗೂ ರಾಜ್​ ಬಿ. ಶೆಟ್ಟಿ ‘45’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಾಗಲೇ ಕುತೂಹಲ ಹೆಚ್ಚಿತ್ತು. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅದಕ್ಕೆ ಕೊನೆಗೂ ಉತ್ತರ ಸಿಗುವ ಸಮಯ ಬಂದಿದೆ. ಹೌದು, ಯುಗಾದಿ ಪ್ರಯುಕ್ತ ಮಾರ್ಚ್​ 30ರಂದು ‘45’ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

ಈವರೆಗೆ ‘45’ ಚಿತ್ರದ ವಿವಿಧ ಪೋಸ್ಟರ್​ಗಳು ರಿಲೀಸ್ ಆಗಿವೆ. ಎಲ್ಲರ ಅವತಾರವೂ ಭಿನ್ನವಾಗಿದೆ. ಇದರಲ್ಲಿ ವಿಲನ್ ಯಾರು, ಹೀರೋ ಯಾರು ಎಂಬಿತ್ಯಾದಿ ಡಾಟ್​ಗಳನ್ನು ಸೇರಿಸಲು ಪ್ರೇಕ್ಷಕ ವಿಫಲನಾಗುತ್ತಿದ್ದಾನೆ. ಈಗ ರಿಲೀಸ್ ಆಗುವ ಟೀಸರ್ ಮೂಲಕ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಪ್ರೇಕ್ಷಕ ತಿಳಿದುಕೊಳ್ಳಬಹುದು. ಇದಕ್ಕಾಗಿ ಮಾರ್ಚ್ 30ರವರೆಗೆ ಕಾಯಬೇಕಿದೆ.

ಇದನ್ನೂ ಓದಿ
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಸಲ್ಮಾನ್ ಸಿಕಂದರ್​ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು
ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
ಬಂದ್ ವೇಳೆ ಥಿಯೇಟರ್​ನಲ್ಲಿ ಸಿನಿಮಾ ನೋಡೋ ಪ್ಲ್ಯಾನ್ ಬೇಡ; ಪ್ರದರ್ಶನ ಸಮಯ?

ಹಬ್ಬ-ಹರಿದಿನ ಬಂದಾಗ ಸಿನಿಮಾ ತಂಡಗಳು ಅಭಿಮಾನಿಗಳಿಗೆ ಒಂದಷ್ಟು ಅಪ್​ಡೇಟ್ ನೀಡುತ್ತವೆ. ಅದೇ ರೀತಿ, ಯುಗಾದಿ ದಿನ ಸಂಜೆ 6.45ಕ್ಕೆ ‘45’ ಚಿತ್ರದ ಟೀಸರ್ ಬರಲಿದೆ. ಈ ಬಗ್ಗೆ ತಂಡದ ಕಡೆಯಿಂದ ಮಾಹಿತಿ ಹೊರ ಬಿದ್ದಿದೆ. ಅರ್ಜುನ್ ಜನ್ಯ ಅವರಿಗೆ ಇದು ನಿರ್ದೇಶನದಲ್ಲಿ ಮೊದಲ ಅನುಭವ. ಸಂಗೀತದ ಮೂಲಕ ಮೋಡಿ ಮಾಡಿದ ಅವರು, ಈಗ ಸಿನಿಮಾ ನಿರ್ದೇಶನದಲ್ಲಿ ಯಾವ ರೀತಿಯಲ್ಲಿ ಕೈ ಚಳಕ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಅಪ್ಪು’ ಸಿನಿಮಾ ಯಾಕೆ ನೋಡಿಲ್ಲ? ಬಲವಾದ ಕಾರಣ ಕೊಟ್ಟ ಶಿವರಾಜ್​ಕುಮಾರ್

ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್ ’ ಬ್ಯಾನರ್ ಅಡಿಯಲ್ಲಿ ‘45’ ಚಿತ್ರ ನಿರ್ಮಾಣ ಮಾಡಿದ್ದಾರೆ.  ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಚಿತ್ರದಲ್ಲಿ ನಟಿಸುತ್ತಿರುವುದೇ ವಿಶೇಷ. ಈ ಚಿತ್ರದಲ್ಲಿ ನುರಿತ ತಂತ್ರಜ್ಞರ ಜತೆಗೆ ಹಾಲಿವುಡ್​ನ ಪ್ರಸಿದ್ಧ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಅನ್ನೋದು ವಿಶೇಷ. ಈ ಸಿನಿಮಾ ಈ ವರ್ಷ ಆಗಸ್ಟ್ 15ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.