SIIMA 2020 Awards List: ‘ಲವ್​ ಮಾಕ್ಟೇಲ್’​ ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ, ಪೂರ್ತಿ ಪಟ್ಟಿ ಇಲ್ಲಿದೆ

| Updated By: ರಾಜೇಶ್ ದುಗ್ಗುಮನೆ

Updated on: Sep 20, 2021 | 6:25 PM

‘ಲವ್​ ಮಾಕ್ಟೇಲ್’​ ಅತ್ಯುತ್ತಮ ಸಿನಿಮಾ ಆಗಿ ಹೊರ ಹೊಮ್ಮಿದೆ. ಡಾಲಿ ಕೃಷ್ಣ, ಮಿಲನಾ ನಾಗರಾಜ್, ಡಾಲಿ ಧನಂಜಯ್​, ಪೃಥ್ವಿ ಅಂಬರ್​ ಸೇರಿ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

SIIMA 2020 Awards List: ‘ಲವ್​ ಮಾಕ್ಟೇಲ್’​ ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ, ಪೂರ್ತಿ ಪಟ್ಟಿ ಇಲ್ಲಿದೆ
SIIMA 2020 Awards List: ‘ಲವ್​ ಮಾಕ್ಟೇಲ್’​ ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ, ಪೂರ್ತಿ ಪಟ್ಟಿ ಇಲ್ಲಿದೆ
Follow us on

ಕೊವಿಡ್​ ಕಾರಣದಿಂದ 2019ರ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆಸೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ, 2019 ಹಾಗೂ 2020ರ ಸೈಮಾ ಅವಾರ್ಡ್​​ ಕಾರ್ಯಕ್ರಮವನ್ನು ಈ ಬಾರಿ ಒಟ್ಟಿಗೆ ಆಯೋಜನೆ ಮಾಡಲಾಗಿದೆ. 2019ರಲ್ಲಿ ರಕ್ಷಿತ್​ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿ ಸಾಕಷ್ಟು ಜನರಿಗೆ ಪ್ರಶಸ್ತಿ ಬಂದಿತ್ತು. 2020ರಲ್ಲಿ ಡಾಲಿ ಧನಂಜಯ್​ಗೆ ಅತ್ಯತ್ತಮ ನಟ ಪ್ರಶಸ್ತಿ ಸಿಕ್ಕಿದೆ. ‘ಲವ್​ ಮಾಕ್ಟೇಲ್’​ ಅತ್ಯುತ್ತಮ ಸಿನಿಮಾ ಆಗಿ ಹೊರ ಹೊಮ್ಮಿದೆ. ಡಾಲಿ ಕೃಷ್ಣ, ಮಿಲನಾ ನಾಗರಾಜ್, ಡಾಲಿ ಧನಂಜಯ್​, ಪೃಥ್ವಿ ಅಂಬರ್​ ಸೇರಿ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ನಟ: ಧನಂಜಯ್​ ‘ಪಾಪ್​ಕಾರ್ನ್​ ಮಂಕಿ ಟೈಗರ್’

ಅತ್ಯುತ್ತಮ ಸಿನಿಮಾ: ಲವ್​ ಮಾಕ್ಟೇಲ್​

ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪ್ರಜ್ವಲ್​ ದೇವರಾಜ್​, ‘ಜಂಟಲ್ ​ಮ್ಯಾನ್’

ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಖುಷಿ ರವಿ, ‘ದಿಯಾ’

ಅತ್ಯುತ್ತಮ ನಟ (ಮೊದಲ ಸಿನಿಮಾ): ಪೃಥ್ವಿ ಅಂಬರ್, ‘ದಿಯಾ’

ಅತ್ಯುತ್ತಮ ನಟಿ (ಮೊದಲ ಸಿನಿಮಾ): ಸಪ್ತಮಿ ಗೌಡ, ‘ಪಾಪ್​ಕಾರ್ನ್​ ಮಂಕಿ ಟೈಗರ್’

ಅತ್ಯುತ್ತಮ ಪೋಷಕ ನಟಿ: ಅಮೃತಾ ಅಯ್ಯಂಗಾರ್ ‘ಲವ್​ ಮಾಕ್ಟೇಲ್’

ಅತ್ಯುತ್ತಮ ಪೋಷಕ ನಟ: ಬಿ ಸುರೇಶ್​, ‘ಆ್ಯಕ್ಟ್​ 1978’​

ಅತ್ಯುತ್ತಮ ಹಿನ್ನೆಲೆ ಗಾಯನ: ಸಂಜಿತ್ ಹೆಗಡೆ, ಮರಳಿ ಮನಸಾಗಿದೆ.. ‘ಜಂಟಲ್‌ಮ್ಯಾನ್’

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಧಿತಿ ಸಾಗರ್, ಬೆಂದಕಾಳೂರು.. ‘ಫ್ರೆಂಚ್ ಬಿರಿಯಾನಿ’

ಅತ್ಯುತ್ತಮ ನಿರ್ದೇಶಕ (ಮೊದಲ ಸಿನಿಮಾ): ರಾಧಾ ಕೃಷ್ಣ, ‘ಮಾಯಾಬಜಾರ್ 2016’

ಇದನ್ನೂ ಓದಿ: SIIMA Awards 2021 Winners list: ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು; ಇಲ್ಲಿದೆ ಪ್ರಶಸ್ತಿ ಪಡೆದವರ ಲಿಸ್ಟ್​

SIIMA Awards 2021: ಸೈಮಾ ಅವಾರ್ಡ್ಸ್​​ ವೇದಿಕೆಯ ಕಲರ್​ಫುಲ್​ ಫೋಟೋಗಳು

Published On - 6:22 pm, Mon, 20 September 21