ತರುಣ್​ ಸುಧೀರ್​ ಜತೆಗಿನ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಸೋನಲ್​

ತರುಣ್​ ಸುಧೀರ್​ ಹಾಗೂ ಸೋನಲ್​ ಮಾಂತೆರೋ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಶೀಘ್ರದಲ್ಲೇ ಅವರ ಮದುವೆ ನೆರವೇರಲಿದೆ. ಈ ಬಗ್ಗೆ ಸೋನಲ್​ ಮಾಂತೆರೋ ಅವರು ಇದೇ ಮೊದಲ ಬಾರಿಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಜುಲೈ 22ರಂದು ಬೆಳಗ್ಗೆ 11.08 ಗಂಟೆಗೆ ಈ ಜೋಡಿಯ ಕಡೆಯಿಂದ ಗುಡ್​ ನ್ಯೂಸ್​ ಸಿಗಲಿದೆ.

ತರುಣ್​ ಸುಧೀರ್​ ಜತೆಗಿನ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದ ಸೋನಲ್​
ಸೋನಲ್​ ಮಾಂತೆರೋ, ತರುಣ್​ ಸುಧೀರ್​

Updated on: Jul 21, 2024 | 5:34 PM

ನಟಿ ಸೋನಲ್​ ಮಾಂತೆರೋ ಅವರು ನಿರ್ದೇಶಕ ತರುಣ್​ ಸುಧೀರ್​ ಜೊತೆ ಮದುವೆ ಆಗುತ್ತಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈ ವಿಚಾರದ ಬಗ್ಗೆ ಸೋನಲ್​ ಅವರು ಮೌನವಾಗಿದ್ದರು. ಇದೇ ಮೊದಲ ಬಾರಿಗೆ ಅವರು ಮದುವೆ ಕುರಿತು ಮೌನ ಮುರಿದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರೊಂದು ಪೋಸ್ಟರ್​ ಹಂಚಿಕೊಂಡಿದ್ದು, ‘ಕಡೆಗೂ ನಟಿಗೆ ತನ್ನ ಬದುಕಿನ ನಿರ್ದೇಶಕ ಸಿಕ್ಕಾಯ್ತು’ ಎಂಬ ಕ್ಯಾಪ್ಷನ್​ ನೀಡಿದ್ದಾರೆ. ನಿರ್ದೇಶಕ ತರುಣ್​ ಸುಧೀರ್​ ಕುರಿತಾಗಿಯೇ ಅವರು ಈ ಪೋಸ್ಟ್ ಶೇರ್​ ಮಾಡಿಕೊಂಡಿರುವುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕೆಂದರೆ, ತರುಣ್​ ಸುಧೀರ್​ ಸಹ ಇದೇ ಪೋಸ್ಟ್​ ಹಂಚಿಕೊಂಡಿದ್ದಾರೆ.

‘ಕಡೆಗೂ ನಿರ್ದೇಶಕನಿಗೆ ತನ್ನ ಜೀವನದ ನಟಿ ಸಿಕ್ಕಳು’ ಎಂದು ತರುಣ್​ ಸುಧೀರ್​ ಅವರು ಕ್ಯಾಪ್ಷನ್​ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಂದ ಅಭಿನಂದನೆಯ ಕಮೆಂಟ್​ಗಳು ಹರಿದುಬರುತ್ತಿವೆ. ‘ರಾಬರ್ಟ್​’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಸೋನಲ್​ ಮಾಂತೆರೋ ಮತ್ತು ತರುಣ್​ ಸುಧೀರ್​ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಬಗ್ಗೆ ಅವರು ಶೀಘ್ರವೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ಸೋಮವಾರ (ಜುಲೈ 22) ಬೆಳಗ್ಗೆ 11.08 ಗಂಟೆಗೆ ಸೋನಲ್​ ಮಾಂತೆರೋ ಮತ್ತು ತರುಣ್​ ಸುಧೀರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮದುವೆಯ ಬಗ್ಗೆ ವಿಡಿಯೋ ಹಂಚಿಕೊಳ್ಳುವ ನಿರೀಕ್ಷೆ ಇದೆ. ಮದುವೆಯ ದಿನಾಂಕದ ಬಗ್ಗೆಯೂ ಅವರು ಮಾಹಿತಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಜೋಡಿಗೆ ವಿಶ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಮದುವೆ ಡೇಟ್ ಚೇಂಜ್ ಮಾಡಬೇಡ, ಅಷ್ಟರೊಳಗೆ ಬರ್ತೀನಿ’: ತರುಣ್​ಗೆ ದರ್ಶನ್​ ಭರವಸೆ

ದರ್ಶನ್​ ಅವರಿಗೆ ತರುಣ್​ ಸುಧೀರ್​ ಮತ್ತು ಸೋನಲ್​ ಅವರು ಆಪ್ತರು. ಆದರೆ ಮದುವೆಯ ದಿನಾಂಕ ಹತ್ತಿರ ಆಗುತ್ತಿರುವ ಈ ಸಂದರ್ಭದಲ್ಲಿ ದರ್ಶನ್​ ಅವರು ಜೈಲಿನಲ್ಲಿ ಇರುವುದು ಆಪ್ತರಿಗೆ ಬೇಸರ ಮೂಡಿಸಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರಕ್ಕೆ ತೆರಳಿ ತರುಣ್​ ಸುಧೀರ್​ ಅವರು ದರ್ಶನ್​ ಜೊತೆ ಮಾತನಾಡಿ ಬಂದಿದ್ದರು. ಯಾವುದೇ ಕಾರಣಕ್ಕೂ ಮದುವೆಯ ದಿನಾಂಕ ಬದಲಾಯಿಸುವುದು ಬೇಡ ಅಂತ ದರ್ಶನ್​ ಹೇಳಿರುವುದಾಗಿ ತರುಣ್​ ಸುಧೀರ್​ ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಅವರು ಗುಡ್​ ನ್ಯೂಸ್​ ನೀಡಲು ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us