
2015ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ ಸಿನಿಮಾ ಎಂದರೆ ಅದು ‘ಕೆಂಡ ಸಂಪಿಗೆ’. ಈ ಸಿನಿಮಾ ಸೀಕ್ವೆಲ್ಗೆ ‘ಕಾಗೆ ಬಂಗಾರ’ ಎಂದು ಟೈಟಲ್ ಇಡಲಾಗಿತ್ತು. ಈ ಸಿನಿಮಾ ಸೆಟ್ಟೇರಲು ಬಹಳ ಸಮಯ ತೆಗೆದುಕೊಂಡಿದೆ. ನಿರ್ದೇಶಕ ಸೂರಿ ಅವರು ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಖ್ಯಾತ್ ಸೂರ್ಯ, ರಿಥನ್ಯಾ ವಿಜಯ್ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ನಟೇಶ್ ಹೆಗಡೆ ಅವರು ರೂಬಿ ಹೆಸರಿನ ವಿಲನ್ ಪಾತ್ರ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ನಟೇಶ್ ಹೆಗಡೆ ಅವರು ನಿರ್ದೇಶನ ಹಾಗೂ ನಟನೆ ಎರಡರಲ್ಲೂ ಬ್ಯುಸಿ ಇದ್ದಾರೆ. ‘ಪೆದ್ರೊ’, ‘ವಾಘಚಿಪಾಣಿ’ ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಇನ್ನು ‘ಬಂದರ್’ ಹಾಗೂ ‘ರೈಫಲ್ ಕ್ಲಬ್’ ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ಕಾಗೆ ಬಂಗಾರ’ ಸಿನಿಮಾಗೆ ಅವರು ವಿಲನ್ ಆಗಿದ್ದಾರೆ.
‘ಕಾಗೆ ಬಂಗಾರ’ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರ ಸೆಟ್ಟೇರಿದೆ ಎನ್ನುವ ವಿಷಯ ಸಿನಿಪ್ರಿಯರಲ್ಲಿ ಖುಷಿ ಮೂಡಿಸಿದೆ.ಈ ಸಿನಿಮಾದಲ್ಲಿ ನಟೇಶ್ ಜೊತೆ ಪ್ರಶಾಂತ್ ಸಿದ್ಧಿ, ಪ್ರಖ್ಯಾತ್ ಸೂರ್ಯ, ರಿಥನ್ಯಾ, ನಂದ ಕಿಶೋರ್ ಮೊದಲಾದವರುನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ. ಎಚ್ಆರ್ಜಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಇದನ್ನೂ ಓದಿ: ಕೊನೆಗೂ ನಿಗದಿಯಾಯ್ತು ‘ಕಾಗೆ ಬಂಗಾರ’ಕ್ಕೆ ಮುಹೂರ್ತ, ನಾಯಕ ಯಾರು?
ನಟೇಶ್ ಅವರು ನಿರ್ದೇಶನದ ಜೊತೆಗೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ಅನುರಾಗ್ ಕಶ್ಯಪ್ ಜೊತೆ ಅವರು ಒಳ್ಳೆಯ ಒಡನಾಟ ಹೊಂದಿದ್ದಾರೆ. ಅನುರಾಗ್ ಅವರು ರಾ ಶೈಲಿಯ ಸಿನಿಮಾಗನ್ನು ತೆಗೆಯೋದ್ರಲ್ಲಿ ಸ್ಪೆಷಲಿಸ್ಟ್. ಸೂರಿ ಕೂಡ ಇದೇ ರೀತಿಯ ಸಿನಿಮಾ ಮಾಡುತ್ತಾರೆ. ಈ ಕಾರಣದಿಂದ ನಟೇಶ್ ಪಾತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಗಣೇಶ್ ಹೆಗಡೆ ನಿರ್ದೇಶನದ ‘ಕುರ್ಕ’ ಸಿನಿಮಾದಲ್ಲಿ ನಟೇಶ್ ಹೆಗಡೆ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಇದೇ ವರ್ಷ ತೆರೆಗೆ ತರುವ ಪ್ಲ್ಯಾನ್ ತಂಡ ಹೊಂದಿದೆ. ಶೀಘ್ರದಲ್ಲೇ ತಂಡ ಟ್ರೇಲರ್ ರಿಲೀಸ್ ಮಾಡಲು ಪ್ಲ್ಯಾನ್ ರೂಪಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:57 am, Mon, 12 October 26