AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dollarspete: ಸೌಮ್ಯ ಜಗನ್ ಮೂರ್ತಿ ನಟನೆಯ ‘ಡಾಲರ್ಸ್ ಪೇಟೆ’ ಚಿತ್ರದಿಂದ ಸಂಕ್ರಾಂತಿಗೆ ಹೊಸ ಪೋಸ್ಟರ್​ ರಿಲೀಸ್​

Sowmya Jaganmurthy: ಮೋಹನ್ ಎನ್. ಮುನಿನಾರಾಯಣಪ್ಪ ಅವರು ‘ಡಾಲರ್ಸ್ ಪೇಟೆ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಅವರಿಗೆ ಕ್ಯಾಶಿಯರ್​ ಪಾತ್ರವಿದೆ.

Dollarspete: ಸೌಮ್ಯ ಜಗನ್ ಮೂರ್ತಿ ನಟನೆಯ ‘ಡಾಲರ್ಸ್ ಪೇಟೆ’ ಚಿತ್ರದಿಂದ ಸಂಕ್ರಾಂತಿಗೆ ಹೊಸ ಪೋಸ್ಟರ್​ ರಿಲೀಸ್​
ಸೌಮ್ಯ ಜಗನ್ ಮೂರ್ತಿ
TV9 Web
| Updated By: ಮದನ್​ ಕುಮಾರ್​|

Updated on:Jan 15, 2023 | 6:59 PM

Share

ಮಕರ ಸಂಕ್ರಾಂತಿ (Sankranti) ಹಬ್ಬದ ಪ್ರಯುಕ್ತ ಅನೇಕ ಸಿನಿಮಾ ತಂಡಗಳು ಹೊಸ ಫೋಸ್ಟರ್​ಗಳನ್ನು ಹಂಚಿಕೊಂಡಿವೆ. ಆ ಪೈಕಿ ಕನ್ನಡದ ‘ಡಾಲರ್ಸ್​ ಪೇಟೆ’ ಸಿನಿಮಾದ ಪೋಸ್ಟರ್​ ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿ ಸೌಮ್ಯ ಜಗನ್​ ಮೂರ್ತಿ (Sowmya Jaganmurthy) ಅವರು ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್​ ಕುಮಾರ್​ ಅವರ ಪತ್ನಿಯಾದ ಸೌಮ್ಯ ಅವರು ಕೆಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅವುಗಳಲ್ಲಿ ‘ಡಾಲರ್ಸ್​ ಪೇಟೆ’ (Dollarspete Kannada Movie) ಸಿನಿಮಾ ಕೌತುಕ ಮೂಡಿಸಿದೆ. ಸಂಕ್ರಾಂತಿ ಪ್ರಯುಕ್ತ ರಿಲೀಸ್​ ಆಗಿರುವ ಈ ಪೋಸ್ಟರ್​ನಲ್ಲಿ ಅವರು ದೇವತೆ ರೀತಿ ಪೋಸ್​ ನೀಡಿದ್ದಾರೆ. ಕೈಯಲ್ಲಿ ದುಡ್ಡಿನ ಕಂತೆ ಹಿಡಿದು ನಿಂತಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರ ಮನದಲ್ಲಿ ಸಿನಿಮಾದ ಕಥೆ ಮತ್ತು ಸೌಮ್ಯ ಅವರ ಪಾತ್ರದ ಬಗ್ಗೆ ಕೌತುಕ ಹೆಚ್ಚಿದೆ.

ಮೋಹನ್ ಎನ್. ಮುನಿನಾರಾಯಣಪ್ಪ ಅವರ ಚೊಚ್ಚಲ ನಿರ್ದೇಶನದಲ್ಲಿ ‘ಡಾಲರ್ಸ್ ಪೇಟೆ’ ಸಿನಿಮಾ ಮೂಡಿಬರುತ್ತಿದೆ. ಈ ಹಿಂದೆ ‘ಮದಗಜ’ ಮುಂತಾದ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಅವರು ಈಗ ‘ಡಾಲರ್ಸ್ ಪೇಟೆ’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಕೂಡ ಇಂಟರೆಸ್ಟಿಂಗ್​ ಆಗಿದೆ.

‘ಡಾಲರ್ಸ್ ಪೇಟೆ’ ಸಿನಿಮಾದ ಚಿತ್ರೀಕರಣ ಮಕ್ತಾಯ ಆಗಿದೆ. ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರ ಮೊದಲ ಹಂತ ಎಂಬಂತೆ ಫಸ್ಟ್ ಲುಕ್ ಬಿಡುಗಡೆ ಮಾಡಿ ಗಮನ ಸೆಳೆಯಲಾಗಿತ್ತು. ಈಗ ಚಿತ್ರದಲ್ಲಿನ ಪ್ರಮುಖ ಪಾತ್ರದ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Kabir Bedi: ಕೊರಗಜ್ಜ ದೈವದ ಚಿತ್ರದಲ್ಲಿ ನಟಿಸಲು ಕಬೀರ್​ ಬೇಡಿ ಒಪ್ಪಿಕೊಂಡಿದ್ದು ಯಾಕೆ? ಇಲ್ಲಿದೆ ಪೂರ್ತಿ ವಿವರ

ಈ ಸಿನಿಮಾದಲ್ಲಿ ಹೈಪರ್ ಲಿಂಕ್ ಥ್ರಿಲ್ಲರ್ ಮಾದರಿಯ ಕಥೆ ಇರಲಿದೆ. ಕ್ಲಾಸಿಕಲ್​ ಡ್ಯಾನ್ಸರ್​ ಕೂಡ ಆಗಿರುವ ನಟಿ ಸೌಮ್ಯ ಜಗನ್ ಮೂರ್ತಿ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಕ್ಯಾರೆಕ್ಟರ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಅವರು ಕ್ಯಾಶಿಯರ್ ಪಾತ್ರ ಮಾಡುತ್ತಿದ್ದಾರೆ. ಆ ಕಾನ್ಸೆಪ್ಟ್​ಗೆ ತಕ್ಕಂತೆ ಈ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕಲಾವಿದರ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಇದನ್ನೂ ಓದಿ: Sankranti 2023: ಸಂಕ್ರಾಂತಿ ಸಂಭ್ರಮದಲ್ಲಿ ರಾಗಿಣಿ ದ್ವಿವೇದಿ; ಫ್ಯಾನ್ಸ್​ ಮನ ಸೆಳೆದ ಹೊಸ ಫೋಟೋಶೂಟ್​

‘ಡಾಲರ್ಸ್​ ಪೇಟೆ’ ಸಿನಿಮಾದಲ್ಲಿ ಸೌಮ್ಯ ಜಗನ್ ಮೂರ್ತಿ ಜೊತೆ ಆಕರ್ಷ್ ಕಮಲ, ವೆಂಕಟ್ ರಾಜು ಕೂಡ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಪೃಥ್ವಿ ಅಂಬರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಪೆಂಟ್ರಿಕ್ಸ್ ಎಂಟರ್​ಟೇನ್​ಮೆಂಟ್​ ಬ್ಯಾನರ್ ಮೂಲಕ ಪೂಜಾ ಟಿ.ವೈ. ಅವರು ‘ಡಾಲರ್ಸ್ ಪೇಟೆ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:48 pm, Sun, 15 January 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!