AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್​ 8ರಂದು ಭಾರತಕ್ಕೆ ರವಾನೆ ಆಗಲಿದೆ ಸ್ಪಂದನಾ ಮೃತದೇಹ; ಯಾವಾಗ ಅಂತ್ಯಕ್ರಿಯೆ?

Spandana Vijay Raghavendra: ಮಂಗಳವಾರ (ಆಗಸ್ಟ್​ 8) ಸಂಜೆ ವೇಳೆಗೆ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಪಾರ್ಥಿವ ಶರೀರವು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಆಗಸ್ಟ್​ 8ರಂದು ಭಾರತಕ್ಕೆ ರವಾನೆ ಆಗಲಿದೆ ಸ್ಪಂದನಾ ಮೃತದೇಹ; ಯಾವಾಗ ಅಂತ್ಯಕ್ರಿಯೆ?
ಸ್ಪಂದನಾ ವಿಜಯ್​ ರಾಘವೇಂದ್ರ
ಮದನ್​ ಕುಮಾರ್​
|

Updated on: Aug 07, 2023 | 4:44 PM

Share

ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ (Vijay Raghavendra) ಅವರ ಮಡದಿ ಸ್ಪಂದನಾ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಕುಟುಂಬದವರ ಜೊತೆ ಬ್ಯಾಂಕಾಕ್​ ತೆರಳಿದ್ದ ಸ್ಪಂದನಾಗೆ ಆ.6ರಂದು ಹೃದಯಾಘಾತ (Heart Attack) ಸಂಭವಿಸಿತು. ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಮಂಗಳವಾರ (ಆಗಸ್ಟ್​ 8) ಸಂಜೆ ವೇಳೆಗೆ ಪಾರ್ಥಿವ ಶರೀರವು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ, ಬುಧವಾರ (ಆಗಸ್ಟ್​ 9) ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಅಂತ್ಯಕ್ರಿಯೆ (Spandana Vijay Raghavendra Funeral) ನೆರವೇರಲಿದೆ. ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ.

ವಿಜಯ್​ ರಾಘವೇಂದ್ರ ಅವರದ್ದು ದೊಡ್ಡ ಕುಟುಂಬ. ಡಾ. ರಾಜ್​ಕುಮಾರ್​ ಅವರ ಹತ್ತಿರದ ಸಂಬಂಧಿಗಳಾದ ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ಶಿವರಾಜ್​ಕುಮಾರ್​ ಅವರು ಹೈದರಾಬಾದ್​ನಲ್ಲಿ ‘ಭೈರತಿ ರಣಗಲ್​’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಸ್ಪಂದನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಣ್ಣ ಬೆಂಗಳೂರಿಗೆ ವಾಪಸ್​ ಹೊರಟಿದ್ದಾರೆ. ವಿಜಯ್​ ರಾಘ​ವೇಂದ್ರ ಅವರ ನಿವಾಸಕ್ಕೆ ಎಲ್ಲರೂ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ವಿಜಯ್-ಸ್ಪಂದನಾ ಪ್ರೇಮಕ್ಕೆ ಮುನ್ನಡಿ ಹಾಡಿತ್ತು ಮಲ್ಲೇಶ್ವರದ ಕಾಫಿ ಡೇ

ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಒಂದರ ಹಿಂದೊಂದು ಆಘಾತ ಆಗುತ್ತಿದೆ. ಪುನೀತ್​ ರಾಜ್​ಕುಮಾರ್ ನಿಧನದಿಂದ ಈ ಕುಟುಂಬಕ್ಕೆ ತೀವ್ರ ನೋವು ಉಂಟಾಗಿತ್ತು. ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ತಂದೆ ರೇವನಾಥ್​ ನಿಧನ ಹೊಂದಿದರು. ಕೆಲವೇ ವಾರಗಳ ಹಿಂದೆ ಪಾರ್ವತಮ್ಮ ಅವರ ಸಂಬಂಧಿ, ಯುವ ನಟ ಸೂರಜ್​ ಅವರು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ.

ಇದನ್ನೂ ಓದಿ: ‘ನನ್ನ ಚಿನ್ನಾರಿ ಮುತ್ತನಿಗೆ ಹೀಗೆ ಆಗಿದ್ದು ನನಗೆ ಆಘಾತ ತಂದಿದೆ’: ಸ್ಪಂದನಾ ನಿಧನಕ್ಕೆ ನಾಗಾಭರಣ ಪ್ರತಿಕ್ರಿಯೆ

ಸ್ಪಂದನಾ ಅಗಲಿಕೆ ಬಗ್ಗೆ ಶ್ರೀಮರಳಿ ಪ್ರತಿಕ್ರಿಯೆ:

ವಿಜಯ್​ ರಾಘವೇಂದ್ರ ಸಹೋದರ ಶ್ರೀಮುರಳಿ ಅವರು ಸ್ಪಂದನಾ ನಿಧನದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದರು. ಫ್ಯಾಮಿಲಿ ಜೊತೆ ಅತ್ತಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಣ್ಣ ಕೂಡ ಈ ಟ್ರಿಪ್​ಗೆ ಅವರ ಜೊತೆ ಸೇರಿಕೊಳ್ಳುವವರಿದ್ದರು. ಅತ್ತಿಗೆ ನಿನ್ನೆ (ಆ.6) ರಾತ್ರಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಲೋ ಬಿಪಿ ಆಗಿದ್ದರಿಂದ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದುಬಂದಿದೆ. ನಾಳೆ ಇನ್ನಷ್ಟು ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ಮುರಳಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More