ಶ್ರೀಲೀಲಾ ನಟಿಸಬೇಕಿದ್ದ ಆಫರ್ ರಶ್ಮಿಕಾ ಮಂದಣ್ಣ ಕೈ ಸೇರಿತ್ತು; ಸೂಪರ್ ಹಿಟ್ ಚಿತ್ರದ ಹಿಂದಿನ ಕಥೆ ಇದು
ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಶ್ರೀಲೀಲಾಗೆ ಬಂದಿದ್ದ ಆಫರ್ ರಶ್ಮಿಕಾ ಕೈ ಸೇರಿತ್ತು. ಆ ಚಿತ್ರ ಹಿಟ್ ಆಗಿತ್ತು ಎನ್ನುವ ವಿಚಾರ ಈಗ ರಿವೀಲ್ ಆಗಿದೆ.
ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ. ಅವರ ಕೈಯಲ್ಲಿ ಅರ್ಧ ಡಜನ್ಗೂ ಹೆಚ್ಚು ಚಿತ್ರಗಳಿವೆ. ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ಟಾಲಿವುಡ್ಗೆ ಪರಿಚಯಗೊಂಡ ಈ ನಟಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರವಿತೇಜ ಜೊತೆ ‘ಧಮಾಕ’ (Dhamaka Movie) ಚಿತ್ರದಲ್ಲಿ ನಟಿಸಿ ಬ್ಲಾಕ್ಬಸ್ಟರ್ ಹಿಟ್ ಪಡೆದರು. ಅವರಿಗೆ ಆಫರ್‌ಗಳು ಸಾಲು ಸಾಲುಗಟ್ಟಿ ನಿಂತಿವೆ. ಪವನ್ ಕಲ್ಯಾಣ್, ರಾಮ್ ಪೋತಿನೇನಿ, ಬಾಲಕೃಷ್ಣ, ಮಹೇಶ್ ಬಾಬು ಮುಂತಾದ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಒಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಶ್ರೀಲೀಲಾಗೆ ಬಂದಿದ್ದ ಆಫರ್ ರಶ್ಮಿಕಾ ಕೈ ಸೇರಿತ್ತು. ಆ ಚಿತ್ರ ಹಿಟ್ ಆಗಿತ್ತು ಎನ್ನುವ ವಿಚಾರ ಈಗ ರಿವೀಲ್ ಆಗಿದೆ.
ಶ್ರೀಲೀಲಾ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಕಿಸ್’ ಚಿತ್ರದ ಮೂಲಕ. ಇದಕ್ಕೂ ಒಂದು ವರ್ಷ ಮೊದಲೇ ತೆಲುಗಿನಲ್ಲಿ ‘ಚಲೋ’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ ಆಗಿದ್ದರು. ಅವರಿಗೆ ಟಾಲಿವುಡ್ನಲ್ಲಿ ಜನಪ್ರಿಯತೆ ಪಡೆಯಲು ಈ ಸಿನಿಮಾ ಸಹಕಾರಿ ಆಗಿತ್ತು. ಈ ಚಿತ್ರದ ಆಫರ್ ಮೊದಲ ಬಂದಿದ್ದು ಶ್ರೀಲೀಲಾಗೆ. ಆದರೆ, ಅವರು ಈ ಆಫರ್ನ ರಿಜೆಕ್ಟ್ ಮಾಡಿದ್ದರು. ಈ ವಿಷಯವನ್ನು ಸ್ವತಃ ‘ಚಲೋ’ ಚಿತ್ರದ ನಾಯಕ ನಾಗಶೌರ್ಯ ಹೇಳಿದ್ದಾರೆ.
ನಾಗಶೌರ್ಯ ‘ರಂಗಬಲಿ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶ್ರೀಲೀಲಾ ಬಗ್ಗೆ ಅವರು ಮಾತನಾಡಿದ್ದಾರೆ. ‘ಶ್ರೀಲೀಲಾ ಅವರನ್ನು ‘ಚಲೋ’ಕ್ಕೆ ನಾಯಕಿ ಆಗಿ ಪರಿಗಣಿಸಲಾಗಿತ್ತು. ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನೋ ಎಂದರು. ಆ ಬಳಿಕ ರಶ್ಮಿಕಾ ಅವರನ್ನು ಕರೆತರಲಾಯಿತು’ ಎಂದಿದ್ದಾರೆ ನಾಗಶೌರ್ಯ.
ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಿಂದ ಪೂಜಾ ಹೆಗ್ಡೆ ಹೊರಕ್ಕೆ: ಶ್ರೀಲೀಲಾ ಕಾರಣವೇ?
ನಾಗಶೌರ್ಯ ಅಭಿನಯದ ‘ಚಲೋ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಪರಿಚಯಗೊಂಡರು. ಆ ಸಮಯದಲ್ಲಿ ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಆ ನಂತರ ‘ಗೀತ ಗೋವಿಂದಂ’ ಚಿತ್ರದಲ್ಲಿ ನಟಿಸಿ ಫೇಮಸ್ ಆದರು. ಈ ಚಿತ್ರದಿಂದ ರಶ್ಮಿಕಾಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಬೇಡಿಕೆ ಹೆಚ್ಚಿತು. ಈಗ ರಶ್ಮಿಕಾಗೆ ಟಾಲಿವುಡ್ನಲ್ಲಿ ಶ್ರೀಲೀಲಾ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ