ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್; ಅಚ್ಚರಿ ತಂದ ಮಲಯಾಳಂ ಗಳಿಕೆ

ಶುಕ್ರವಾರ (ಆಗಸ್ಟ್ 8) ಚಿತ್ರ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರ ಶುಕ್ರವಾರ ಒಂದೇ ದಿನ 3 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಅನ್ನೋದು ವಿಶೇಷ. ಇದರಲ್ಲಿ ತೆಲುಗು ಹಾಗೂ ಮಲಯಾಳಂ ಕಲೆಕ್ಷನ್ ಕೂಡ ಸೇರಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಗಳಿಕೆ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್; ಅಚ್ಚರಿ ತಂದ ಮಲಯಾಳಂ ಗಳಿಕೆ
ಸು ಫ್ರಮ್ ಸೋ

Updated on: Aug 09, 2025 | 6:57 AM

‘ಸು ಫ್ರಮ್ ಸೋ’ (Su From So) ಸಿನಿಮಾ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದಾಗ್ಯೂ ಚಿತ್ರದ ಅಬ್ಬರ ಮಾತ್ರ ನಿಲ್ಲುತ್ತಿಲ್ಲ. ಈ ಸಿನಿಮಾದ ಕಲೆಕ್ಷನ್ ಒಂದೇ ರೀತಿಯಲ್ಲಿ ಸಾಗುತ್ತಿದೆ. ಸತತ 10 ದಿನ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಈಗ ‘ಸು ಫ್ರಮ್ ಸೋ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 60 ಕೋಟಿ ರೂಪಾಯಿ ಗಳಿಕೆ ಮಾಡಿ ಗಮನ ಸೆಳೆದಿದೆ. 15 ದಿನಗಳಲ್ಲಿ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆದಿದೆ.

‘ಸು ಫ್ರಮ್ ಸೋ’ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಆಗಸ್ಟ್ 8ರಿಂದ ಸಿನಿಮಾ ಅಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಅಲ್ಲಿ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಇಷ್ಟ ಆದರೆ, ಕೆಲವರು ಸಿನಿಮಾನ ಎವರೇಜ್ ಎಂದು ಕರೆದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಸಿನಿಮಾದ ಭಾಷೆ. ಮಂಗಳೂರು ಕನ್ನಡ ಚಿತ್ರದ ಹೈಲೈಟ್. ಆದರೆ, ತೆಲುಗಿನಲ್ಲಿ ಆ ರೀತಿ ಡಬ್ ಮಾಡೋಕೆ ಸಾಧ್ಯವಿಲ್ಲ. ಇದು ಚಿತ್ರಕ್ಕೆ ಸ್ವಲ್ಪ ಹಿನ್ನಡೆ ತಂದಿರಬಹುದು.

ಶುಕ್ರವಾರ (ಆಗಸ್ಟ್ 8) ಚಿತ್ರ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರ ಶುಕ್ರವಾರ ಒಂದೇ ದಿನ 3 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಅನ್ನೋದು ವಿಶೇಷ. ಇದರಲ್ಲಿ ತೆಲುಗು ಹಾಗೂ ಮಲಯಾಳಂ ಕಲೆಕ್ಷನ್ ಕೂಡ ಸೇರಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಗಳಿಕೆ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ
ಮಾಲಿವುಡ್​ನ ಶ್ರೀಮಂತ ನಟ ಫಹಾದ್ ಫಾಸಿಲ್ ಆಸ್ತಿ ಎಷ್ಟು?
‘ಸು ಫ್ರಮ್ ಸೋ’ ಚಿತ್ರಕ್ಕೆ ಎರಡು ವಾರ; ವಿಶ್ವ ಬಾಕ್ಸ್ ಆಫೀಸ್​ ಲೆಕ್ಕ
‘ಹಣ ಕೊಟ್ಟು ಟ್ರೋಲ್ ಮಾಡಿಸಿದರು, ಬೆಳೆಯದಂತೆ ತಡೆದರು’; ರಶ್ಮಿಕಾ ಮಂದಣ್ಣ
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ‘ಸು ಫ್ರಮ್ ಸೋ’ ತೆಲುಗಿಗೆ ರಿಮೇಕ್ ಮಾಡಿದರೆ ಈ ಕಲಾವಿದರಿಗೆ ಮಣೆ ಹಾಕ್ತೀನಿ ಎಂದ ರಾಜ್ ಬಿ. ಶೆಟ್ಟಿ

‘ಸು ಫ್ರಮ್ ಸೋ’ ಸಿನಿಮಾ ಭಾರತದಲ್ಲಿ 56 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೊರ ದೇಶಗಳಿಂದ 4.4 ಕೋಟಿ ರೂಪಾಯಿ ಹರಿದು ಬಂದಿದೆ. ಮಲಯಾಳಂ ಕಲೆಕ್ಷನ್ ಅಚ್ಚರಿ ಮೂಡಿಸುವಂತೆ ಇದೆ. ದಿನವೂ ಚಿತ್ರಕ್ಕೆ 40 ಲಕ್ಷ ರೂಪಾಯಿಯಷ್ಟು ಗಳಿಕೆ ಆಗುತ್ತಿದೆ. ಈ ಮೂಲಕ ಮಲಯಾಳಂನಲ್ಲಿ ಸಿನಿಮಾದ ಒಟ್ಟೂ ಗಳಿಕೆ 2.15 ಕೋಟಿ ರೂಪಾಯಿ ಆಗಿದೆ. ತೆಲುಗು ಕಲೆಕ್ಷನ್ ಹೆಚ್ಚಿದರೆ ಸಿನಿಮಾಗೆ ಸಹಕಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.