3ನೇ ವೀಕೆಂಡ್ ಕೂಡ ‘ಸು ಫ್ರಮ್ ಸೋ’ ಭರ್ಜರಿ ಕಲೆಕ್ಷನ್; ಒಟ್ಟು ಎಷ್ಟಾಯ್ತು?

ಜನಮೆಚ್ಚಿದ ‘ಸು ಫ್ರಮ್ ಸೋ’ ಸಿನಿಮಾ ಈಗಲೂ ನೂರಾರು ಪರದೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್​​ನಲ್ಲಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಸತತ ಮೂರನೇ ವಾರಾಂತ್ಯದಲ್ಲಿ ಈ ಸಿನಿಮಾ ಅಚ್ಚರಿಯ ಕಲೆಕ್ಷನ್ ಮಾಡಿದೆ. ಬೇರೆ ರಾಜ್ಯಗಳಲ್ಲಿ ಕೂಡ ಉತ್ತಮವಾಗಿ ಕಮಾಯಿ ಮಾಡುತ್ತಿದೆ.

3ನೇ ವೀಕೆಂಡ್ ಕೂಡ ‘ಸು ಫ್ರಮ್ ಸೋ’ ಭರ್ಜರಿ ಕಲೆಕ್ಷನ್; ಒಟ್ಟು ಎಷ್ಟಾಯ್ತು?
Su From So

Updated on: Aug 10, 2025 | 7:34 AM

‘ಸು ಫ್ರಮ್ ಸೋ’ ಸಿನಿಮಾ (Su From So) ಮಾಡಿರುವ ಮೋಡಿ ಎಂಥದ್ದು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಜೆ.ಪಿ. ತುಮಿನಾಡು (JP Thuminad) ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಿದೆ. ಕರ್ನಾಟಕದಲ್ಲೇ ಈ ಚಿತ್ರಕ್ಕೆ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಅಚ್ಚರಿ ಎಂದರೆ, ಸಿನಿಮಾ ಬಿಡುಗಡೆ ಆಗಿ 16 ದಿನ ಕಳೆದಿದರೂ ಅಬ್ಬರ ನಿಂತಿಲ್ಲ. 3ನೇ ವೀಕೆಂಡ್​​ನಲ್ಲಿ ಕೂಡ ‘ಸು ಫ್ರಮ್ ಸೋ’ ಸಿನಿಮಾಗೆ ಭರ್ಜರಿ ಕಲೆಕ್ಷನ್ (Su From So Collection) ಆಗುತ್ತಿದೆ. Sacnilk ವರದಿ ಪ್ರಕಾರ, ಆಗಸ್ಟ್ 9ರ ಶನಿವಾರ ಈ ಸಿನಿಮಾ ಬರೋಬ್ಬರಿ 5.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

16ನೇ ದಿನ 5.08 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯೇ ಅಲ್ಲ. ಬಿಡುಗಡೆ ಆಗಿರುವ ಹೊಸ ಸಿನಿಮಾಗಳಿಗೂ ಪೈಪೋಟಿ ನೀಡಿ ಈ ಚಿತ್ರ ಅಬ್ಬರಿಸುತ್ತಿದೆ. ಕರ್ನಾಟಕದಲ್ಲಿ 16 ದಿನಕ್ಕೆ ‘ಸು ಫ್ರಮ್ ಸೋ’ ಸಿನಿಮಾದ ಒಟ್ಟು ಕಲೆಕ್ಷನ್ 53.53 ಕೋಟಿ ರೂಪಾಯಿ ಆಗಿದೆ. ಮಲಯಾಳಂ, ತೆಲುಗು ಮತ್ತು ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ 64.5 ಕೋಟಿ ರೂಪಾಯಿ ಆಗುತ್ತದೆ.

ಇದೇ ವೇಗದಲ್ಲಿ ಕಲೆಕ್ಷನ್ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ‘ಸು ಫ್ರಮ್ ಸೋ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ತೆಲುಗಿನಲ್ಲಿ ಆಗಸ್ಟ್ 8ರಂದು ಈ ಸಿನಿಮಾ ಬಿಡುಗಡೆ ಆಗಿದೆ. ಉತ್ತಮ ಓಪನಿಂಗ್ ಪಡೆದುಕೊಂಡಿದೆ. ತೆಲುಗು ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಕೇಳರದಲ್ಲೂ ಅನೇಕ ಶೋಗಳು ಹೌಸ್​ಫುಲ್ ಆಗುತ್ತಿವೆ.

ಇದನ್ನೂ ಓದಿ
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
‘ಸು ಫ್ರಮ್ ಸೋ’ ಚಿತ್ರಕ್ಕೆ ಸೀಕ್ವೆಲ್ ಬರುತ್ತಾ? ರಾಜ್ ಪ್ಲ್ಯಾನೇ ಬೇರೆ
‘ಸು ಫ್ರಮ್ ಸೋ’ ನಿರ್ದೇಶಕ ಜೆಪಿ ತುಮ್ಮಿನಾಡ್ ಯಾರು? ಹಿನ್ನೆಲೆ ಏನು?
‘ಸು ಫ್ರಮ್ ಸೋ’ ಚಿತ್ರದಲ್ಲಿ ಈ ಪಾತ್ರಗಳೇ ಹೈಲೈಟ್; ಮಿಸ್ ಮಾಡಲೇಬಾರದು

ಸಂದ್ಯಾ ಅರಕೆರೆ, ಜೆ.ಪಿ. ತುಮಿನಾಡು, ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಸೇರಿದಂತೆ ಅನೇಕ ಕಲಾವಿದರು ‘ಸು ಫ್ರಮ್ ಸೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ಪಾತ್ರಗಳು ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿವೆ. ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಕ್ಕಿದ್ದರಿಂದ ಈ ಪರಿ ಕಲೆಕ್ಷನ್ ಆಗುತ್ತಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ಕಥೆ ಹುಟ್ಟಿದ್ದು ಹೇಗೆ? ಆ ಘಟನೆ ವಿವರಿಸಿದ ರಾಜ್ ಬಿ. ಶೆಟ್ಟಿ

ಭಾನುವಾರ (ಆಗಸ್ಟ್ 10) ಬೆಂಗಳೂರಿನಲ್ಲಿ 200ಕ್ಕೂ ಅಧಿಕ ಶೋಗಳು ಹೌಸ್​ಫುಲ್ ಪ್ರದರ್ಶನ ಕಾಣುತ್ತಿವೆ. 3ನೇ ವೀಕೆಂಡ್​​ನಲ್ಲಿ ಈ ರೀತಿ ರೆಸ್ಪಾನ್ಸ್ ಸಿಗುವುದು ನಿಜಕ್ಕೂ ಗ್ರೇಟ್. ಆಗಸ್ಟ್ 14ರಂದು ರಜನಿಕಾಂತ್ ಅಭಿನಯದ ‘ಕೂಲಿ’ ಹಾಗೂ ಜೂನಿಯರ್ ಎನ್​ಟಿಆರ್​, ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಆ ಬಳಿಕವೂ ‘ಸು ಫ್ರಮ್ ಸೋ’ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.