‘ಕಿಚ್ಚನಿಗೆ ಒಂದು ಅಚ್ಚರಿ ಕಾದಿದೆ’: ಸುದೀಪ್​ ಬರ್ತ್​ಡೇಗೂ ಮುನ್ನ ಸಿಹಿ ಸುದ್ದಿ ನೀಡಿದ ಪತ್ನಿ ಪ್ರಿಯಾ

|

Updated on: Sep 01, 2023 | 3:27 PM

ಈ ಬಾರಿ ಕಿಚ್ಚ ಸುದೀಪ್​ ಅವರ ಹುಟ್ಟುಹಬ್ಬಕ್ಕೆ ಹಲವು ಉಡುಗೊರೆಗಳು ಸಿಗುತ್ತಿವೆ. ಅವರ ಪತ್ನಿ ಪ್ರಿಯಾ ಸುದೀಪ್​ ಕೂಡ ಸರ್ಪ್ರೈಸ್​ ನೀಡುವುದಾಗಿ ತಿಳಿಸಿದ್ದಾರೆ. ನಂದಿ ಲಿಂಕ್​ ಗ್ರೌಂಡ್​ನಲ್ಲಿ ತಮ್ಮ ನೆಚ್ಚಿನ ನಟರ ಬರ್ತ್​ಡೇ ಸೆಲೆಬ್ರೇಟ್​ ಮಾಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಲಿದ್ದಾರೆ. ಅದಕ್ಕೆ ಈಗಾಗಲೇ ಸಕಲ ಸಿದ್ಧತೆ ಆಗಿದೆ.

‘ಕಿಚ್ಚನಿಗೆ ಒಂದು ಅಚ್ಚರಿ ಕಾದಿದೆ’: ಸುದೀಪ್​ ಬರ್ತ್​ಡೇಗೂ ಮುನ್ನ ಸಿಹಿ ಸುದ್ದಿ ನೀಡಿದ ಪತ್ನಿ ಪ್ರಿಯಾ
ಪ್ರಿಯಾ​, ಕಿಚ್ಚ ಸುದೀಪ್​
Follow us on

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಸೆಪ್ಟೆಂಬರ್ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಹಲವು ಕಾರಣಗಳಿಂದಾಗಿ ಈ ಬಾರಿಯ ಅವರ ಬರ್ತ್​ಡೇ (Sudeep Birthday) ವಿಶೇಷವಾಗಿರಲಿದೆ. ಬೆಂಗಳೂರಿನ ನಂದಿ ಲಿಂಕ್​​ ಗ್ರೌಂಡ್​ನಲ್ಲಿ ಅವರು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಆ ಸಂಭ್ರಮದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಭಾಗಿಯಾಗಲಿದ್ದಾರೆ. ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ವಿವಿಧ ಸಿನಿಮಾ ತಂಡಗಳು ಸುದೀಪ್​ ಅವರಿಗೆ ಜನ್ಮದಿನದ ವಿಶ್​ ಮಾಡಲಿವೆ. ಅದಕ್ಕೂ ಮುನ್ನವೇ ಸುದೀಪ್​ ಪತ್ನಿ ಪ್ರಿಯಾ ಅವರು ಒಂದು ಸರ್ಪ್ರೈಸ್​ ನೀಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಅವರು ಸೋಶಿಯಲ್​ ಮೀಡಿಯಾ ಮೂಲಕ ಗುಡ್​ ನ್ಯೂಸ್​ ನೀಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಪ್ರಿಯಾ ಸುದೀಪ್​ (Priya Sudeep) ನೀಡುವ ಸರ್ಪ್ರೈಸ್​ ಏನು ಎಂಬುದನ್ನು ತಿಳಿಯುವ ಕಾತರ ಮೂಡಿದೆ.

‘ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ’ ಎಂದು ಪ್ರಿಯಾ ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ.

ಪ್ರಿಯಾ ಸುದೀಪ್​ ಟ್ವೀಟ್​:

Kichcha 46 ಟೈಟಲ್​ ಏನು?

ಕಿಚ್ಚ ಸುದೀಪ್​ ಅವರು ‘ವಿಕ್ರಾಂತ್​ ರೋಣ’ ಸಿನಿಮಾ ಬಳಿಕ ತಮ್ಮ 46ನೇ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಈ ಸಿನಿಮಾದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಆದರೆ ಟೈಟಲ್​ ಏನು ಎಂಬುದು ಇನ್ನೂ ರಿವೀಲ್​ ಆಗಿಲ್ಲ. ಸದ್ಯಕ್ಕೆ ಇದನ್ನು Kichcha 46 ಎಂದು ಕರೆಯಲಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಶೀರ್ಷಿಕೆ ಅನಾವರಣ ಆಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. 2023ರಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಸುದೀಪ್​ ಅವರು ಗುರಿ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಸುದೀಪ್​ ಬಗ್ಗೆ ಹೇಳಿಕೆ ನೀಡದಂತೆ ಎಂ.ಎನ್​. ಕುಮಾರ್​ಗೆ ನ್ಯಾಯಾಲಯ ಆದೇಶ

ನಕ್ಷತ್ರಕ್ಕೆ ಸುದೀಪ್​ ಹೆಸರು:

ಹಲವು ರೀತಿಯಲ್ಲಿ ಜನರು ಸುದೀಪ್​ ಮೇಲೆ ಅಭಿಮಾನ ತೋರುತ್ತಿದ್ದಾರೆ. ಅವರ ಜನ್ಮದಿನದ ಹೊಸ್ತಿಲಿನಲ್ಲಿ ‘ಅರಸು ಕ್ರಿಯೇಷನ್ಸ್​’ ಸಂಸ್ಥೆ ಕಡೆಯಿಂದ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ. ಆಕಾಶದಲ್ಲಿನ ಒಂದು ನಕ್ಷತ್ರಕ್ಕೆ ಕಿಚ್ಚ ಸುದೀಪ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸುದೀಪ್​ಗೆ ವಿಶೇಷವಾದ ಗೌರವ ಸಲ್ಲಿಸಲಾಗಿದೆ. ರಿಯಲ್​ ನಕ್ಷತ್ರಕ್ಕೆ ತಮ್ಮ ನೆಚ್ಚಿನ ನಟನ ಹೆಸರನ್ನು ಇಟ್ಟಿರುವುದು ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಸುದೀಪ್​ ಅವರ ಮುಂಬರುವ ಸಿನಿಮಾಗಳ ಬಗ್ಗೆ ಕಾತರ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.