AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟಗೌರಿಗೆ ಸಿಕ್ತು ‘ಗೌರಿ’ ಸಿನಿಮಾದಲ್ಲಿ ನಾಯಕಿ ಆಗುವ ಚಾನ್ಸ್​; ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಅಯ್ಯರ್​ ಹೇಳಿದ್ದೇನು?

‘ನನಗೆ ಇವತ್ತು ಖುಷಿ ತುಂಬ ಹೆಚ್ಚಾಗಿದೆ. ನಾನು ಕಂಡ ಕನಸೆಲ್ಲವೂ ಇಂದು ನನಸಾಗಿದೆ. ಅದಕ್ಕಾಗಿ ಇಂದ್ರಜಿತ್​ ಲಂಕೇಶ್​ ಅವರಿಗೆ ಧನ್ಯವಾದಗಳು. ಜನರೆಲ್ಲ ಇಷ್ಟಪಟ್ಟ ಪುಟ್ಟಗೌರಿಗೆ ಈ ಗೌರಿ ಸಿನಿಮಾವನ್ನು ತಂದುಕೊಟ್ಟಿದ್ದೀರಿ. ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡುತ್ತೇನೆ’ ಎಂದು ಬಿಗ್​ ಬಾಸ್​ ಬೆಡಗಿ ಸಾನ್ಯಾ ಅಯ್ಯರ್​ ಹೇಳಿದ್ದಾರೆ.

ಪುಟ್ಟಗೌರಿಗೆ ಸಿಕ್ತು ‘ಗೌರಿ’ ಸಿನಿಮಾದಲ್ಲಿ ನಾಯಕಿ ಆಗುವ ಚಾನ್ಸ್​; ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಅಯ್ಯರ್​ ಹೇಳಿದ್ದೇನು?
ಸಾನ್ಯಾ ಅಯ್ಯರ್​
ಮದನ್​ ಕುಮಾರ್​
|

Updated on: Sep 01, 2023 | 12:55 PM

Share

ನಟಿ ಸಾನ್ಯಾ ಅಯರ್​ (Saanya Iyer) ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಅವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಆ ಮೂಲಕ ಅವರಿಗೆ ಸಖತ್​ ಜನಪ್ರಿಯತೆ ಸಿಕ್ಕಿತ್ತು. ಆ ಬಳಿಕ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋನಲ್ಲಿ ಭಾಗವಹಿಸಿ ಫೇಮಸ್​ ಆದರು. ಸಿನಿಮಾದಲ್ಲಿ ಹೀರೋಯಿನ್​ ಆಗಬೇಕು ಎಂಬುದು ಅವರ ಬಹುದಿನಗಳ ಕನಸಾಗಿತ್ತು. ಅದು ಈಗ ನನಸಾಗುತ್ತಿದೆ. ಇಂದ್ರಜಿತ್​ ಲಂಕೇಶ್​ (Indrajit Lankesh) ಅವರ ಪುತ್ರ ಸಮರ್ಜಿತ್​ ಲಂಕೇಶ್​ ಹೀರೋ ಆಗಿ ನಟಿಸುತ್ತಿರುವ ‘ಗೌರಿ’ ಸಿನಿಮಾದಲ್ಲಿ (Gauri Movie) ಸಾನ್ಯಾ ಅಯ್ಯರ್​ ಅವರು ನಾಯಕಿ ಆಗಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಈ ಪ್ರಾಜೆಕ್ಟ್​ ತಮಗೆ ಸಿಕ್ಕಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ನನಗೆ ಇವತ್ತು ಖುಷಿ ತುಂಬ ಹೆಚ್ಚಾಗಿದೆ. ನಾನು ಕಂಡ ಕನಸೆಲ್ಲವೂ ಇಂದು ನನಸಾಗಿದೆ. ಅದಕ್ಕಾಗಿ ಇಂದ್ರಜಿತ್ ಲಂಕೇಶ್​​ ಅವರಿಗೆ ಧನ್ಯವಾದಗಳು. ಜನರೆಲ್ಲ ಇಷ್ಟಪಟ್ಟ ಪುಟ್ಟಗೌರಿಗೆ ಈ ಗೌರಿ ಸಿನಿಮಾವನ್ನು ತಂದುಕೊಟ್ಟಿದ್ದೀರಿ. ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ ಅಂತ ಭರವಸೆ ನೀಡುತ್ತೇನೆ. ನಾನು ಹುಟ್ಟಿದ್ದು ಬನಶಂಕರಿಯ ಸರ್ಕಾರಿ ಆಸ್ಪತ್ರೆಯಲ್ಲಿ. ನನ್ನ ಬೆಳವಣಿಗೆ ಆಗಿದ್ದು ಕತ್ರಿಗುಪ್ಪೆಯಲ್ಲಿ. ದೊಡ್ಡವಳಾದ ನಂತರ ಏನು ಆಗುತ್ತೀಯ ಅಂತ ಆಗ ಯಾರಾದರೂ ಕೇಳಿದರೆ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳಬೇಕು ಎಂದು ಹೇಳುತ್ತಿದ್ದೆ. ಚಿಕ್ಕ ವಯಸ್ಸಿನಿಂದ ಹೊತ್ತುಕೊಂಡು ಬಂದ ಆಸೆ ಈಗ ಇಷ್ಟು ದೊಡ್ಡ ಮಟ್ಟದಲ್ಲಿ ನೆರವೇರುತ್ತಿದೆ. ಹಾಗಾಗಿ ನಾನು ಭಾವುಕಳಾಗುತ್ತಿದ್ದೇನೆ’ ಎಂದು ಸಾನ್ಯಾ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ: ಗೌರಿ ಸಿನಿಮಾ ಮುಹೂರ್ತ: ನಟನಾಗಲು ಇಂದ್ರಜಿತ್ ಲಂಕೇಶ್ ಪುತ್ರ ರೆಡಿ, ಅಪ್ಪನದ್ದೇ ಆಕ್ಷನ್ ಕಟ್

‘ಈ ಸಿನಿಮಾದ ಹಿಂದೆ ಕಾಣಿಸದ ಹಲವು ಕೈಗಳು ಇವೆ. ಅವರಿಗೆಲ್ಲ ನನ್ನ ಧನ್ಯವಾದಗಳು. ಅವರು ಇಲ್ಲದೇ ನಾವು ಮುಂದೆ ಸಾಗಲು ಸಾಧ್ಯವಿಲ್ಲ. ಎಲ್ಲದೂ ಒಳ್ಳೆಯದೇ ಆಗುತ್ತದೆ. ನಾನು ಸಮರ್ಜಿತ್​ ಲಂಕೇಶ್​ ಜೊತೆ ನಾನು ಒಂದು ವಾರ ವರ್ಕ್​ಶಾಪ್​ ಮಾಡಿದೆ. ಆ ಸಮಯದಲ್ಲಿ ಹಲವಾರು ಪಾಠಗಳನ್ನು ಕಲಿತುಕೊಂಡೆ. ತಂದೆ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೂ ಕೂಡ ತಾವು ಸ್ವಂತ ಪರಿಶ್ರಮದಿಂದ ಬೆಳೆಯಬೇಕು ಎಂಬ ಉದ್ದೇಶವನ್ನು ಸಮರ್ಜಿತ್​ ಇಟ್ಟುಕೊಂಡಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ’ ಎಂದಿದ್ದಾರೆ ಸಾನ್ಯಾ ಅಯ್ಯರ್​.

ಇದನ್ನೂ ಓದಿ: ಮಗನ ಚಿತ್ರಕ್ಕೆ ‘ಗೌರಿ’ ಎಂದು ಶೀರ್ಷಿಕೆ ಇಟ್ಟಿದ್ದೇಕೆ? ಕಾರಣ ತಿಳಿಸಿದ ಇಂದ್ರಜಿತ್ ಲಂಕೇಶ್

‘ನಾನು ಈ ಸಂದರ್ಭದಲ್ಲಿ ಕುಟುಂಬದವರಿಗೆ ಧನ್ಯವಾದ ಹೇಳಬೇಕು. ನನ್ನ ಕನಸುಗಳಿಗೆ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ಹೆಮ್ಮೆ ಆಗುವ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇವೆ. ಇಂದ್ರಜಿತ್​ ಲಂಕೇಶ್ ಅವರ ಅನೇಕ ಸಿನಿಮಾಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ‘ಐಶ್ವರ್ಯಾ’ ಸಿನಿಮಾ ನನಗೆ ಬಹಳ ಇಷ್ಟ. ಅವರನ್ನು ಸ್ಟಾರ್​ ಡೈರೆಕ್ಟರ್​ ಎನ್ನುತ್ತಾರೆ. ಅವರ ಸಿನಿಮಾದಲ್ಲಿ ಪ್ರತಿ ಪಾತ್ರಕ್ಕೆ ಮಹತ್ವ ಇರುತ್ತದೆ’ ಎಂದು ಸಾನ್ಯಾ ಅಯ್ಯರ್​ ಹೇಳಿದ್ದಾರೆ. ‘ಗೌರಿ’ ಸಿನಿಮಾಗೆ ಇಂದ್ರಜಿತ್​ ಲಂಕೇಶ್​ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!