AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2022: ದೇವರ ಕೋಣೆಯಲ್ಲಿ ಭಕ್ತಿಯಿಂದ ಕುಳಿತ ನಾಯಿ; ಸುಧಾರಾಣಿ ಮನೆಯಲ್ಲಿ ದೀಪಾವಳಿ ಪೂಜೆ ಶುರು

Sudharani | Diwali 2022: ‘ದೀಪಾವಳಿ ಹಬ್ಬದ ಆಚರಣೆ ಶುರು ಮಾಡುತ್ತಿದ್ದೇವೆ. ನಾವಿಬ್ಬರೂ ಒಟ್ಟಿಗೆ ಆಶೀರ್ವಾದ ಪಡೆದೆವು’ ಎಂದು ಈ ವಿಡಿಯೋಗೆ ಸುಧಾರಾಣಿ ಕ್ಯಾಪ್ಷನ್​ ನೀಡಿದ್ದಾರೆ.

Deepavali 2022: ದೇವರ ಕೋಣೆಯಲ್ಲಿ ಭಕ್ತಿಯಿಂದ ಕುಳಿತ ನಾಯಿ; ಸುಧಾರಾಣಿ ಮನೆಯಲ್ಲಿ ದೀಪಾವಳಿ ಪೂಜೆ ಶುರು
ಸುಧಾರಾಣಿ
TV9 Web
| Updated By: ಮದನ್​ ಕುಮಾರ್​|

Updated on:Oct 24, 2022 | 8:38 AM

Share

ಎಲ್ಲೆಡೆ ದೀಪಾವಳಿ (Diwali 2022) ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಬೆಳಕಿನ ಹಬ್ಬದಲ್ಲಿ ಹಲವು ಬಗೆಯ ಪೂಜೆಗಳನ್ನು ಮಾಡುತ್ತಾರೆ. ಹಿರಿಯ ನಟಿ ಸುಧಾರಾಣಿ (Sudharani) ಅವರ ಮನೆಯಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಅದರ ಝಲಕ್​ ತೋರಿಸಲು ಅವರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಬ್ಬದ ಪೂಜೆಯ ಸಂದರ್ಭದಲ್ಲಿ ಅವರ ಮನೆಯ ಮುದ್ದಿನ ಶ್ವಾನ (Dog) ಕೂಡ ಭಾಗಿ ಆಗಿದೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಶ್ವಾನಪ್ರಿಯರಿಗೆ ಈ ವಿಡಿಯೋ ಸಖತ್ ಇಷ್ಟ ಆಗಿದೆ.

ಸುಧಾರಾಣಿ ಅವರು ಪ್ರಾಣಿಪ್ರಿಯೆ. ಮನೆಯಲ್ಲಿ ಎರಡು ಮುದ್ದಿನ ಶ್ವಾನಗಳನ್ನು ಸಾಕಿದ್ದಾರೆ. ಅವುಗಳನ್ನು ಮಕ್ಕಳಂತೆ ಅವರು ನೋಡಿಕೊಳ್ಳುತ್ತಾರೆ. ತಮ್ಮ ಮನೆಯ ನಾಯಿಗಳ ಬಗ್ಗೆ ಅವರು ಆಗಾಗ ವಿಡಿಯೋ ಹಂಚಿಕೊಳ್ಳುತ್ತಾರೆ. ಈಗ ಅವರು ಶೇರ್​ ಮಾಡಿಕೊಂಡಿರುವ ಹೊಸ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ‘ದೀಪಾವಳಿ ಹಬ್ಬದ ಆಚರಣೆ ಶುರು ಮಾಡುತ್ತಿದ್ದೇವೆ. ನಾವಿಬ್ಬರೂ ಒಟ್ಟಿಗೆ ಆಶೀರ್ವಾದ ಪಡೆದೆವು. ಎಂಥಾ ಗುಡ್​ ಬಾಯ್​’ ಎಂದು ಪ್ರೀತಿಯ ಶ್ವಾನವನ್ನು ಹೊಗಳಿದ್ದಾರೆ ಸುಧಾರಾಣಿ.

ಇದನ್ನೂ ಓದಿ
Image
ನಿಗೂಢ ಪ್ರಪಂಚವನ್ನು ಪರಿಚಯಿಸಲಿದೆ ‘ತುರ್ತು ನಿರ್ಗಮನ’; ಹೊಸತನದ ಕಥೆ ಹೊತ್ತು ತಂದ ಹೇಮಂತ್ ಕುಮಾರ್
Image
ಮಾಳವಿಕಾ ಮನೆಗೆ ಶ್ರುತಿ, ಸುಧಾರಾಣಿ ಸರ್ಪ್ರೈಸ್​ ಎಂಟ್ರಿ; ಹೇಗಿತ್ತು ನೋಡಿ ಜನ್ಮದಿನದ ಸೆಲೆಬ್ರೇಷನ್​
Image
Sudha Rani Birthday: ಕೇವಲ ಮೂರನೇ ವರ್ಷಕ್ಕೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ನಟಿ ಸುಧಾರಾಣಿ ನಂತರ ಈ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡರು
Image
ಶಿವರಾಜ್​ಕುಮಾರ್​-ಸುಧಾರಾಣಿ ‘ಆನಂದ್’​ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ

ಸುಧಾರಾಣಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ದಿನಚರಿ ಕುರಿತು ಅವರು ಆಗಾಗ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 22 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆ ಅಪಾರ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಸುಧಾರಾಣಿ ಅವರಿಗೆ ಸಲ್ಲುತ್ತದೆ. ಈಗ ಪೋಷಕ ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸುತ್ತಿದ್ದಾರೆ. ಇಂದಿಗೂ ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ.

ಅಭಿನಯದಲ್ಲಿ ಸುಧಾರಾಣಿ ಅವರು ಅನೇಕ ಹೊಸ ನಟಿಯರಿಗೆ ಸ್ಫೂರ್ತಿ ಆಗಿದ್ದಾರೆ. ಈಗ ಅವರು ಕಿರುತೆರೆಯಲ್ಲಿ ಹೊಸ ಜರ್ನಿ ಆರಂಭಿಸುತ್ತಿದ್ದಾರೆ. ಧಾರಾವಾಹಿಯೊಂದರಲ್ಲಿ ಸುಧಾರಾಣಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರ ಆಗಲಿರುವ ಈ ಧಾರಾವಾಹಿಗೆ ‘ಶ್ರೀರಸ್ತು ಶುಭಮಸ್ತು’ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಪ್ರೋಮೋ ಗಮನ ಸೆಳೆಯುತ್ತಿದೆ.

ಅಕ್ಟೋಬರ್​ 31ರಂದು ‘ಶ್ರೀರಸ್ತು ಶುಭಮಸ್ತು’ ಸೀರಿಯಲ್​ ಆರಂಭ ಆಗಲಿದೆ. ಇನ್​​ಸ್ಟಾಗ್ರಾಮ್​ನಲ್ಲಿ ಸುಧಾರಾಣಿ ಅವರು ಇದರ ಪ್ರೋಮೋ ಹಂಚಿಕೊಂಡಿದ್ದಾರೆ. ‘ಹೊಸ ಪಯಣ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ರಾತ್ರಿ 8.30ಕ್ಕೆ ಈ ಸೀರಿಯಲ್​ ಪ್ರಸಾರ ಆಗಲಿದೆ. ಕಿರುತೆರೆಯಲ್ಲಿ ಸುಧಾರಾಣಿ ಅವರನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:38 am, Mon, 24 October 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ