‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಫಸ್ಟ್ ಲುಕ್ ರಿಲೀಸ್: ಏನು ಈ ಚಿತ್ರದ ಕಥೆ?

ಸುಮನ್, ಸಾಯಿ ಕುಮಾರ್, ನಟರಾಜ್ ಮುಂತಾದವರು ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಮೂಲಕ ಚಿತ್ರತಂಡದವರು ಪ್ರೇಕ್ಷಕರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಫಸ್ಟ್ ಲುಕ್ ರಿಲೀಸ್: ಏನು ಈ ಚಿತ್ರದ ಕಥೆ?
Dharmasthala Niyogikavarg Poster

Updated on: Jan 02, 2026 | 6:24 PM

ಟೈಟಲ್ ಮೂಲಕ ‘ಧರ್ಮಸ್ಥಳ ನಿಯೋಜಿಕವರ್ಗ್’ (Dharmasthala Niyogikavarg) ಸಿನಿಮಾ ಗಮನ ಸೆಳೆಯುತ್ತಿದೆ. ಹೊಸ ವರ್ಷದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಮೂವಿಂಗ್ ಡ್ರೀಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೂಲಕ ಮೇರುಂ ಭಾಸ್ಕರ್ ಅವರು ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಜೈ ಜ್ಞಾನ ಪ್ರಭಾ ತೋಟ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸುಮನ್, ಸಾಯಿ ಕುಮಾರ್ (Sai Kumar) ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹಿರಿಯ ಕಲಾವಿದರಾದ ಸುಮನ್ ಹಾಗೂ ಸಾಯಿ ಕುಮಾರ್ ಅವರ ಜೊತೆ ಈ ಚಿತ್ರದಲ್ಲಿ ನಟರಾಜ್, ವಿತಿಕಾ ಶೇರು, ವರುಣ್ ಸಂದೇಶ್ ಅವರು ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎಂದು ಚಿತ್ರತಂಡ ಹೇಳಿದೆ.

ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ತಂಡವು ಪ್ರೇಕ್ಷಕರಿಗೆ ಹೊಸ ವರ್ಷದ ಶುಭಾಶಯ ಕೋರಿದೆ. ಈ ವೇಳೆ ನಿರ್ದೇಶಕ ಜೈ ಜ್ಞಾನ ಪ್ರಭಾ ತೋಟ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಈ ಸಿನಿಮಾದಲ್ಲಿ ರಾಜಕೀಯ ಹಿನ್ನೆಲೆಯ ಕಥಾಹಂದರ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

‘ನಮ್ಮ ಸಿನಿಮಾ ವಿಭಿನ್ನ ಶೈಲಿಯ ರಾಜಕೀಯ ಹಾಗೂ ಎಮೋಷನಲ್ ಎಂಟರ್ಟೈನರ್ ಆಗಿದೆ. ಹಿರಿಯ ನಟರಾದ ಸಾಯಿ ಕುಮಾರ್ ಹಾಗೂ ಸುಮನ್ ಅವರ ಜೊತೆಗೆ ಯುವ ನಟರು ಸಹ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರಕಥೆಯಲ್ಲಿ ಆರಂಭದಿಂದ ಅಂತ್ಯದವರೆಗೆ ಕುತೂಹಲಕಾರಿಯಾದ ತಿರುವುಗಳು ಇರಲಿವೆ. ಖ್ಯಾತ ಸಾಹಿತಿ ಚಂದ್ರಬೋಸ್ ಬರೆದ ಸಾಹಿತ್ಯಕ್ಕೆ ಗಾಯಕಿ ಸುನೀತಾ ಧ್ವನಿಯಾಗಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್: ಸನ್ಮಾನ ಮಾಡಿದ ಶಿವಣ್ಣ

ಸಾಯಿ ಕುಮಾರ್, ಸುಮನ್, ನಟರಾಜ್, ವರುಣ್ ಸಂದೇಶ್, ವಿತಿಕಾ ಶೇರು ಮಾತ್ರವಲ್ಲದೇ ಕಾಲಕೇಯ ಪ್ರಭಾಕರ್, ರಾಜಾ ರವೀಂದ್ರ, ಪೃಥ್ವಿ, ರಾಜೀವ್ ಕನಕಾಲ, ಶಿವ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ವೆಂಕಟ ಹನುಮ ಅವರು ಛಾಯಾಗ್ರಹಣ ಮಾಡಿದ್ದಾರೆ. ನಂದು ಮಾಸ್ಟರ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸೃಷ್ಟಿ ವರ್ಮಾ ಅವರ ನೃತ್ಯ ನಿರ್ದೇಶನ, ಅಸ್ಲಂ ಅವರ ಸಂಭಾಷಣೆ, ಸಾಯಿ ಬಾಬು ತಲಾರಿ ಅವರ ಸಂಕಲನ, ಭಾರ್ಗವಾಚಾರಿ ನೌಂಡ್ಲಾಸ್ ಅವರ ಕಲಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.