‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ ಫುಲ್ ಮಾರ್ಕ್ಸ್; ಹೆಚ್ಚಲಿದೆ ಕಲೆಕ್ಷನ್
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಕನ್ನಡದಲ್ಲಿ ಮೆಚ್ಚುಗೆ ಪಡೆದು, ಜನವರಿ 1ರಂದು ತಮಿಳಿನಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿದೆ. ಅನೇಕ ತಮಿಳು ಕಲಾವಿದರು ಮತ್ತು ಸುದೀಪ್ ಅವರ ಡಬ್ಬಿಂಗ್ ಕಾರಣದಿಂದ ತಮಿಳಿಗರಿಗೆ ಸಿನಿಮಾ ಇಷ್ಟವಾಗಿದೆ. 60ಕ್ಕೂ ಹೆಚ್ಚು ಶೋಗಳು ಸಿಕ್ಕಿದ್ದು, ಚಿತ್ರದ ಗಳಿಕೆ 50 ಕೋಟಿ ದಾಟಿದ ನಿರೀಕ್ಷೆ ಇದೆ.

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ (Mark) ಡಿಸೆಂಬರ್ 25ರಂದು ಕನ್ನಡದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರದ ತಮಿಳು ವರ್ಷನ್ ಜನವರಿ 1ರಂದು ರಿಲೀಸ್ ಆಗಿದೆ. ಈ ಚಿತ್ರ ನೋಡಿದ ತಮಿಳಿಗರು ಇಷ್ಟಪಟ್ಟಿದ್ದಾರೆ. ಅವರಿಗೆ ಇದು ತಮಿಳು ಸಿನಿಮಾ ರೀತಿಯೇ ಫೀಲ್ ಆಗಿದೆ. ಹೀಗಾಗಿ ಸಿನಿಮಾ ತಮಿಳುನಾಡಿನ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ, ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
‘ಮಾರ್ಕ್’ ಸಿನಿಮಾ ತಮಿಳಿಗರಿಗೆ ಹೆಚ್ಚು ಇಷ್ಟ ಆಗೋಕೆ ಕಾರಣವೂ ಇದೆ. ಅನೇಕ ತಮಿಳು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಅಲ್ಲಿನವರಿಗೆ ಇಷ್ಟ ಆಗಿದೆ.
‘ಮಾರ್ಕ್’ ಚಿತ್ರಕ್ಕೆ ತಮಿಳಿನಲ್ಲಿ 60ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಅಲ್ಲಿನ ವಿಮರ್ಶಕರು ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆಯೇ ಮುಂದುವರಿದರೆ ಶೋಗಳ ಸಂಖ್ಯೆ ಹೆಚ್ಚಬಹುದು. ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ರಿಲೀಸ್ ಆಗಲಿದೆ. ಅಲ್ಲಿವರೆಗೆ ‘ಮಾರ್ಕ್’ ಚಿತ್ರ ಆ ಭಾಗದಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಸ ವರ್ಷದಂದು ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಬಾಚಿದ ‘ಮಾರ್ಕ್’ ಸಿನಿಮಾ
‘ಮ್ಯಾಕ್ಸ್’ ರೀತಿಯೇ ‘ಮಾರ್ಕ್’ ಸಿನಿಮಾ ಕಥೆ ವೇಗವಾಗಿ ಸಾಗುತ್ತದೆ. ಚಿತ್ರ ಕಥೆಯ ವೇಗದ ಕಾರಣದಿಂದ ಸಿನಿಮಾ ಇಷ್ಟ ಆಗುತ್ತದೆ. ಸಿನಿಮಾದ ಹಾಡುಗಳು, ಸುದೀಪ್ ಆ್ಯಕ್ಷನ್ ಜನರಿಗೆ ಇಷ್ಟ ಆಗಿದೆ. ಈ ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿ ದಾಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಲ್ಕು ದಿನಕ್ಕೆ ಸಿನಿಮಾ 35 ಕೋಟಿ ರೂಪಾಯಿ ಗಳಿಸಿದೆ ಎಂದು ತಂಡ ರಿವೀಲ್ ಮಾಡಿತ್ತು. ಸುದೀಪ್ ಅವರು ಇಂದು ಬಿಗ್ ಬಾಸ್ ನಡೆಸಿಕೊಡಲಿದ್ದಾರೆ. ‘ಮಾರ್ಕ್’ ಸಿನಿಮಾ ಕಾರಣಕ್ಕೆ ಅವರಿಗೆ ಕಳೆದ ವಾರ ಶೋ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




