AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರಾವಳಿ’ ಚಿತ್ರತಂಡ ಸೇರಿಕೊಂಡ ಸುಂದರಿ ಸುಷ್ಮಿತಾ

Sushmitha Bhat in Karavali: ಪ್ರಜ್ವಲ್ ದೇವರಾಜ್ ನಟಿಸಿರುವ ‘ಕರಾವಳಿ’ ಚಿತ್ರತಂಡ ಈಗಾಗಲೇ ಅದ್ಭುತವಾದ ಪಾತ್ರವರ್ಗವನ್ನು ಒಳಗೊಂಡಿದೆ. ರಾಜ್ ಬಿ ಶೆಟ್ಟಿ ಇತ್ತೀಚೆಗಷ್ಟೆ ಚಿತ್ರತಂಡ ಸೇರಿದ್ದರು. ಇದೀಗ ಅವರಿಗೆ ಜೋಡಿಯಾಗಿ ಸುಂದರಿ ಸುಷ್ಮಿತಾ ಭಟ್ ಅವರು ಸೇರಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಿನಿಮಾ ಬಗ್ಗೆ ಮಾಹಿತಿ...

‘ಕರಾವಳಿ’ ಚಿತ್ರತಂಡ ಸೇರಿಕೊಂಡ ಸುಂದರಿ ಸುಷ್ಮಿತಾ
Sushmita Bhatt
ಮಂಜುನಾಥ ಸಿ.
|

Updated on: Nov 25, 2025 | 5:22 PM

Share

ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿರುವ ‘ಕರಾವಳಿ’ ಸಿನಿಮಾ, ಅದ್ಭುತ ಪೋಸ್ಟರ್​​ಗಳು, ಪಾತ್ರವರ್ಗ ಮತ್ತು ಟೀಸರ್​​ನಿಂದ ಈಗಾಗಲೇ ಸಖತ್ ಕುತೂಹಲ ಮೂಡಿಸಿದೆ. ದೀರ್ಘ ಸಮಯದಿಂದ ಚಿತ್ರೀಕರಣ ಆಗುತ್ತಲೇ ಇರುವ ಈ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ನಟಿಸುತ್ತಿದ್ದಾರೆ. ಇದೀಗ ಈ ಪ್ರತಿಭಾವಂತರ ತಂಡಕ್ಕೆ ಮತ್ತೊಬ್ಬ ನಟಿ ಸೇರಿಕೊಂಡಿದ್ದಾರೆ. ಅವರೇ ಸುಷ್ಮಿತಾ ಭಟ್.

ಇತ್ತಿಚಿಗಷ್ಟೇ ‘ಕರಾವಳಿ’ ಸಿನಿಮಾ ತಂಡಕ್ಕೆ ರಾಜ್ ಬಿ ಶೆಟ್ಟಿ ಸೇರಿಕೊಂಡಿದ್ದರು. ಈಗ ರಾಜ್ ಬಿ ಶೆಟ್ಟಿಯವರ ಜೋಡಿಯಾಗಿ ಕನ್ನಡದ ಭರವಸೆಯ ನಟಿ ಸುಷ್ಮಿತಾ ಭಟ್ ನಟಿಸಲಿದ್ದಾರೆ. ಸುಷ್ಮಿತಾ ಭಟ್ ಈಗಾಗಲೇ ಎರಡು ಸಿನಿಮಾದಲ್ಲಿ ನಟಿಸಿದ್ದು ‘ಕರಾವಳಿ’ ಅವರ ಮೂರನೇ ಸಿನಿಮಾ ಆಗಲಿದೆ. ಈ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ನಟನೆ, ಸಿನಿಮಾ ಕುರಿತಾಗಿ ಹೊಸ-ಹೊಸ ವಿಷಯಗಳ ಕಲಿಯುವ ಉತ್ಸಾಹದಲ್ಲಿ ಸುಷ್ಮಿತಾ ಭಟ್ ಇದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಸುಷ್ಮಿತಾ ಭಟ್ ಒಂದು ಪ್ರತಿಭಾವಂತ ನಟರ ತಂಡವನ್ನು ಸೇರಿದ್ದಾರೆ. ಮಂಗಳೂರು ಹುಡುಗಿಯ ಪಾತ್ರದಲ್ಲಿ ಸುಷ್ಮಿತಾ ನಟಿಸಲಿದ್ದಾರೆ. ಈ ಸಿನಿಮಾ ಒಪ್ಪಿಕೊಳ್ಳಲು ರಾಜ್ ಬಿ ಶೆಟ್ಟಿಯವರೇ ಕಾರಣ ಎಂದು ಖುಷಿಯಿಂದ ಹೇಳಿದ್ದಾರಂತೆ ನಟಿ ಸುಷ್ಮಿತಾ ಭಟ್. ‘ಕರಾವಳಿ’ ಸಿನಿಮಾನಲ್ಲಿ ಸುಷ್ಮಿತಾ ಅವರ ಪಾತ್ರದ ಹೆಸರು ‘ಭೂಮಿ’. ಸುಷ್ಮಿತಾ ಅವರ ಪಾತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ರಾಜ್ ಬಿ ಶೆಟ್ಟಿ ಅವರ ಮೇಲೆ ಬಿಂದಿಗೆಯಿಂದ ನೀರು ಸುರಿಯುತ್ತಿರುವ ದೃಶ್ಯವನ್ನು ಪೋಸ್ಟರ್ ಒಳಗೊಂಡಿದೆ.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್, ರಾಗಿಣಿ ಅವರ ಭಾನುವಾರ ಹೀಗಿತ್ತು

ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸುಷ್ಮಿತಾ ಭಟ್, ‘ಚಿತ್ರೀಕರಣ ಮಾಡಿದ್ದು ಕಡಿಮೆ ದಿನಗಳು ಆದರೂ ಕೂಡ ಸಾಕಷ್ಟು ಕಲಿತಿದ್ದೇನೆ .. ರಾಜ್ ಬಿ ಶೆಟ್ಟಿ ಪವರ್ ಹೌಸ್ ಇದ್ದಂತೆ, ಅವರಿಗೆ ಸಖತ್ ಎನರ್ಜಿ ಇದೆ ಸೆಟ್ ನಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಇದೆ’ ಎಂದಿದ್ದಾರೆ.

‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್, ಸಂಪದಾ ಹಾಗೂ ರಾಜ್ ಬಿ ಶೆಟ್ಟಿ ಸೇರಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಕಾಣಿಸಿಕೊಂಡಿದ್ದಾರೆ. ಕರಾವಳಿ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಕ್ಯಾಮರ ಕೆಲಸ ಚಿತ್ರಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು