ಆ ವಿಚಾರಕ್ಕೆ ವಿಷ್ಣುವರ್ಧನ್ ತುಂಬಾನೇ ಅಪ್ಸೆಟ್ ಆಗುತ್ತಿದ್ದರು
ಕನ್ನಡದ ಶ್ರೇಷ್ಠ ನಟ ಡಾ. ವಿಷ್ಣುವರ್ಧನ್ ಅವರು ತಾವು ಯಾವ ವಿಚಾರಕ್ಕೆ ಹೆಚ್ಚು ಅಪ್ಸೆಟ್ ಆಗುತ್ತಿದ್ದರು ಎಂಬುದನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದರು. ತಮಗೆ ಬೇಕಾದ್ದು ಆ ಕ್ಷಣಕ್ಕೆ ಸಿಗದಿದ್ದರೆ ಅವರು ಬೇಸರಗೊಳ್ಳುತ್ತಿದ್ದರು. ಗೋಲಿ ಸೋಡಾ ಕಥೆ ಮೂಲಕ ಇದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅವರ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವಿಷ್ಣುವರ್ಧನ್ (Vishnuvardhan) ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಇಂದು ಇರಬೇಕಿತ್ತು ಎಂದು ಅನೇಕರು ಈಗಲೂ ಅಂದುಕೊಳ್ಳುತ್ತಾರೆ. ಆದರೆ, ಅವರು ಇಲ್ಲ ಎಂಬ ನೋವು ತುಂಬಾನೇ ಕಾಡುತ್ತಿದೆ. ಅವರ ಅಂತ್ಯಕ್ರಿಯೆ ನಡೆಸಿದ ಜಾಗದ ವಿಚಾರ ಕೂಡ ವಿವಾದಕ್ಕೆ ಕಾರಣ ಆಗಿದೆ. ಅವರ ಬಗ್ಗೆ ಒಂದು ಕುತೂಹಲಕಾರಿ ವಿಷಯ ರಿವೀಲ್ ಆಗಿದೆ. ವಿಷ್ಣುವರ್ಧನ್ ಅವರು ಒಂದು ವಿಚಾರಕ್ಕೆ ತುಂಬಾನೇ ಅಪ್ಸೆಟ್ ಆಗುತ್ತಿದ್ದರಂತೆ. ಅದೇನು? ಆ ಬಗ್ಗೆ ಇಲ್ಲಿದೆ ವಿವರ.
ವಿಷ್ಣುವರ್ಧನ್ ಅವರು ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾಗ ಹಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ಅವರು ತಾವು ಯಾವ ವಿಚಾರಕ್ಕೆ ಹೆಚ್ಚು ಅಪ್ಸೆಟ್ ಆಗುತ್ತೇವೆ ಎಂಬುದನ್ನು ಹೇಳಿದ್ದರು. ಅವರಿಗೆ ಏನು ಬೇಕು ಎಂದು ಅನಿಸಿತೋ ಅದು ಆ ಕ್ಷಣಕ್ಕೆ ಸಿಗಬೇಕಂತೆ. ಇಲ್ಲವಾದಲ್ಲಿ ಇದು ಅವರನ್ನು ತುಂಬಾನೇ ಅಪ್ಸೆಟ್ ಮಾಡುತ್ತಿತ್ತಂತೆ.
‘ನಾನು ಉಡುಪಿಯಿಂದ ಬರುತ್ತಿದ್ದೆ. ಬರುವಾಗ ಗೋಲಿ ಸೋಡ ಕಂಡಿತು. ನಾನು ನೋಡುವ ಮೊದಲೇ ಅಂಗಡಿಯಿಂದ ತುಂಬಾನೇ ದೂರ ಬಂದು ಬಿಟ್ಟಿದ್ದೆವು. ಹುಡುಕಿದರೂ ಸಿಗಲಿಲ್ಲ. ನನ್ನ ಫ್ರೆಂಡ್ ಗೋಲಿ ಸೋಡಕ್ಕೆ ಯಾಕೆ ಇಷ್ಟೆಲ್ಲ ಅಪ್ಸೆಟ್ ಆಗ್ತೀರಾ ಎಂದು ಕೇಳಿದ. ಆತ ಶಾಪ್ನೇ ಖರೀದಿ ಮಾಡಿದ್ದ. ‘ಎಷ್ಟು ಕುಡೀತೀರೋ ಕುಡೀರಿ’ ಎಂದು ಹೇಳಿದ’ ಎಂದಿದ್ದರು ವಿಷ್ಣುವರ್ಧನ್.
View this post on Instagram
‘ನನಗೆ ಬೇಕು ಎಂದರೆ ಬೇಕು. ಬೇಕು ಎಂದರೆ ಅದು ಎರಡು ನಿಮಿಷದಲ್ಲೇ ಬರಬೇಕು. ಅದೇ ಯಾವುದೇ ವಿಷಯ ಇರಲಿ. ಇದು ಸಣ್ಣ ವಿಷಯವೇ ಇರಬಹುದು. ಆದರೆ, ನಾನು ತುಂಬಾನೇ ಅಪ್ಸೆಟ್ ಆಗ್ತೀನಿ’ ಎಂದು ವಿಷ್ಣುವರ್ಧನ್ ಹೇಳಿದ್ದರು. ಈ ವಿಡಿಯೋನ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ.
ಇದನ್ನೂ ಓದಿ: ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾನ ರಿಲೀಸ್ ಮಾಡಲು ಮುಂದಾದ ಕಮಲ್ ಹಾಸನ್
ವಿಷ್ಣುವರ್ಧನ್ ಅವರು ನಿಧನ ಹೊಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಇಲ್ಲ ಎಂಬ ನೋವು ಈಗಲೂ ಕಾಡುತ್ತಿದೆ. ಅವರ ಅಂತ್ಯಕ್ರಿಯೆ ಅಭಿಮಾನ್ ಸ್ಟುಡಿಯೋದಲ್ಲಿ ಮಾಡಲಾಗಿದೆ. ಈ ಜಾಗ ವಿವಾದದ ಕೇಂದ್ರ ಬಿಂದು ಆಗಿದೆ. ಈ ಭಾಗದಲ್ಲಿ 10 ಗುಂಟೆ ಜಾಗ ಕೊಡಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಆದರೆ, ಇದಕ್ಕೆ ಅಭಿಮಾನ್ ಸ್ಟುಡಿಯೋದವರು ಒಪ್ಪುತ್ತಿಲ್ಲ. ಇದರ ವಿವಾದ ಇಂದು ನಾಳೆಗೆ ಪೂರ್ಣಗೊಳ್ಳುವುದಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



