ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?

| Updated By: ಮದನ್​ ಕುಮಾರ್​

Updated on: Nov 17, 2021 | 1:57 PM

Vishal | Puneeth Rajkumar: ‘ಸಮಾಜಕ್ಕಾಗಿ ಪುನೀತ್​ ರಾಜ್​ಕುಮಾರ್​ ಅವರು ಎಷ್ಟೋ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಕೆಲಸಗಳು ಮುಂದುವರಿಯಬೇಕು’ ಎಂದು ವಿಶಾಲ್​ ಹೇಳಿದ್ದಾರೆ. ಆ ಸಲುವಾಗಿ ರಾಜ್​ ಕುಟುಂಬದ ಜತೆ ಅವರು ಚರ್ಚಿಸಿದ್ದಾರೆ.

ಶಕ್ತಿಧಾಮ ನೋಡಿಕೊಳ್ಳುವ ಬಗ್ಗೆ ಅಶ್ವಿನಿ​ ಜತೆ ವಿಶಾಲ್​ ಚರ್ಚೆ; ಪುನೀತ್​​ ಕುಟುಂಬದಿಂದ ಅನುಮತಿ ಸಿಗೋದು ಯಾವಾಗ?
ವಿಶಾಲ್​
Follow us on

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನೋಡಿಕೊಳ್ಳುತ್ತಿದ್ದ ‘ಶಕ್ತಿಧಾಮ’ದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕಾಲಿವುಡ್​ ನಟ ವಿಶಾಲ್​ (Vishal) ಮುಂದೆ ಬಂದಿದ್ದಾರೆ. ಆದರೆ ಅದಕ್ಕೆ ಪುನೀತ್​ ಕುಟುಂಬದವರ ಒಪ್ಪಿಗೆ ಸಿಗಬೇಕಿದೆ. ಈ ಸಲುವಾಗಿ ಇಂದು (ನ.17) ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಜೊತೆಗೆ ವಿಶಾಲ್​ ಚರ್ಚೆ ನಡೆಸಿದ್ದಾರೆ. ಶಿವರಾಜ್​ಕುಮಾರ್​ (Shivarajkumar) ಜತೆಗೂ ವಿಶಾಲ್​ ಮಾತನಾಡಿದ್ದಾರೆ. ಕಂಠೀರವ ಸ್ಡುಡಿಯೋಗೆ ಭೇಟಿ ನೀಡಿ ರಾಜ್​ಕುಮಾರ್​ ಪಾರ್ವತಮ್ಮ ಮತ್ತು ಪುನೀತ್​ ಸಮಾಧಿಗೆ ಅವರು ನಮನ ಸಲ್ಲಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಈಗತಾನೇ ಪುನೀತ್​ ಅವರ ಮನೆಗೆ ಹೋಗಿ ಬಂದಿದ್ದೇನೆ. ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ. ಇನ್ನು ಮೂರು-ನಾಲ್ಕು ತಿಂಗಳಲ್ಲಿ ನಿಧಾರ ತಿಳಿಸುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ ವಿಶಾಲ್​.

‘ಪುನೀತ್​ ರಾಜ್​ಕುಮಾರ್​ ಇಲ್ಲ ಎಂದುಕೊಳ್ಳಲು ಸಾಧ್ಯವಿಲ್ಲ. ಅವರ ಮುಖ ನನಗೆ ಇನ್ನೂ ಕಾಣಿಸುತ್ತಿದೆ. ಅವರ ನಿಧನ ಇಡೀ ಸಮಾಜಕ್ಕೆ ಮತ್ತು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ. ಸಮಾಜಕ್ಕಾಗಿ ಅವರು ಎಷ್ಟೋ ಒಳ್ಳೆಯ ಕೆಲಸ ಮಾಡಿದ್ದಾರೆ. ಆ ಕೆಲಸಗಳು ಮುಂದುವರಿಯಬೇಕು. ಅಶ್ವಿನಿ ಮೇಡಂ ಮತ್ತು ಅವರ ಮಕ್ಕಳಿಗೆ ದೇವರು ಶಕ್ತಿ ನೀಡಲಿ ಅಂತ ಬೇಡಿಕೊಳ್ಳುತ್ತೇನೆ’ ಎಂದು ವಿಶಾಲ್​ ಹೇಳಿದ್ದಾರೆ.

‘ಪುನೀತ್​ ಅವರು ಒಳ್ಳೆಯ ನಟ ಮಾತ್ರವಲ್ಲ. ಒಳ್ಳೆಯ ಮನುಷ್ಯ ಕೂಡ ಹೌದು. ಅವರಷ್ಟು ವಿನಯವಂತ ವ್ಯಕ್ತಿಯನ್ನು ನಾನು ನೋಡಿಲ್ಲ. ತಾನೊಬ್ಬ ಸೂಪರ್​ ಸ್ಟಾರ್​ ಎಂಬ ಭಾವನೆ ಅವರಿಗೆ ಇರಲಿಲ್ಲ. ಮೇಕಪ್​ ಹಚ್ಚಿದಾಗ ಮಾತ್ರ ಅವರು ಸೂಪರ್​ ಸ್ಟಾರ್​. ಬಾಕಿ ಸಮಯದಲ್ಲಿ ಜನಸಾಮಾನ್ಯರ ಹಾಗೆ ಅವರು ಇರುತ್ತಿದ್ದರು. ಎಲ್ಲರನ್ನೂ ಸಮನಾಗಿ ನೋಡುತ್ತಿದ್ದರು. 15 ವರ್ಷಗಳಿಗೂ ಹೆಚ್ಚು ಸಮಯದಿಂದ ನಾವು ಅವರನ್ನು ನೋಡುತ್ತಿದ್ದೇನೆ. ಆಗಿನಿಂದಲೂ ಒಂದೇ ರೀತಿ ಇದ್ದರು. ಇಂಥ ಒಳ್ಳೆಯ ಜನರನ್ನು ದೇವರ ಯಾಕೆ ಕರೆದುಕೊಳ್ಳುತ್ತಾನೆ ಎಂಬುದು ನಮಗೆ ಅರ್ಥವಾಗುವುದಿಲ್ಲ’ ಎಂದು ವಿಶಾಲ್​ ಹೇಳಿದ್ದಾರೆ.

ಮಂಗಳವಾರ (ನ.17) ನಡೆದ ‘ಪುನೀತ ನಮನ’ ಕಾರ್ಯಕ್ರಮಕ್ಕೂ ವಿಶಾಲ್​ ಆಗಮಿಸಿದ್ದರು. ‘ನನ್ನ ಸ್ನೇಹಿತ ಪುನೀತ್​ ಒಳ್ಳೆಯ ನಟ, ವ್ಯಕ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್​ಗೆ ಪ್ರಾಮಿಸ್​ ಮಾಡುತ್ತಿದ್ದೇನೆ. ನಾನು ಹೇಳಿದ ಮಾತನ್ನು ನಡೆಸಿಕೊಡುತ್ತೇನೆ. ಅವರು ಬದುಕಿದ್ದಾಗ ತಾವು ಮಾಡಿದ ಸಮಾಜಸೇವೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ನೀವು ಮೃತಪಟ್ಟ ನಂತರ ನಿಮ್ಮ ಕಾರ್ಯಗಳ ಬಗ್ಗೆ ಇಡೀ ದೇಶಕ್ಕೆ ತಿಳಿಯಿತು. ನೀವು ಮಾಡುತ್ತಿದ್ದ ಕಾರ್ಯವನ್ನು ನಾನು ಮುಂದುವರಿಸುತ್ತೇನೆ’ ಎಂದು ವಿಶಾಲ್​ ಹೇಳಿದ್ದರು.

ಇದನ್ನೂ ಓದಿ:

Puneetha Namana: ‘​ನಾನು ಮನೆ ಖರೀದಿಗಾಗಿ ಇಟ್ಟುಕೊಂಡ ಹಣದಲ್ಲಿ ಈ ಸಹಾಯ ಮಾಡ್ತೀನಿ’: ವಿಶಾಲ್

‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ​’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ